ಈ ದೃಶ್ಯ ಕಂಡಾಗ ಎಂಥವರ ಕಣ್ಣಲ್ಲೂ ಕಣ್ಣೀರು ಬರುತ್ತೆ
ಟೈಫಾಡ್ನಿಂದ ಬಳಲುತ್ತಿದ್ದ ತಂಗಿ ಅಣ್ಣನ ಹೆಗಲ ಮೇಲೆ ಸಾವು
ತಂಗಿಯನ್ನು ಹೆಗಲ ಮೇಲೆ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಣ್ಣ
ಸಾವು ಸಹಜ. ಆದರೆ ಅಣ್ಣನ ಹೆಗಲ ಮೇಲೆಯೇ ಸಹೋದರಿ ಸಾವನ್ನಪ್ಪಿದರೆ ಹೇಗೆ?. ಇಂತಹದೊಂದು ಹೃದಯ ವಿದ್ರಾವಕ ಘಟನೆ ಭಾರತದಲ್ಲಿ ನಡೆದಿದೆ. ದೃಶ್ಯವನ್ನ ಗಮನಿಸಿದಾಗ ಕಣ್ಣಾಲಿಗಳೇ ಒದ್ದೆಯಾಗುತ್ತವೆ.
ಉತ್ತರ ಪ್ರದೇಶದ ಕೆಲವೆಡೆ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಆದರೆ ಇದರ ನಡುವೆ ಲಖಿಂಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಖೆರಿ ಜಿಲ್ಲೆಯಲ್ಲಿ ಹದಿಹರೆಯದ ಶಿವಾನಿ ಎಂಬ ಬಾಲಕಿ ಟೈಫಾಯಿಡ್ನಿಂದ ಕಂಗಾಲಾಗಿದ್ದಳು. ಆದರೆ ಆಕೆಯನ್ನು ಅಣ್ಣ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾಳೆ. ಸದ್ಯ ಈ ಘಟನೆ ದೃಶ್ಯ ಸಮೇತ ವೈರಲ್ ಆಗಿದೆ.
Triggered by heavy rains, flooding wrecks havoc of different order in UP villages, something most of us in urban areas can’t even begin to comprehend. Here, a young man in Lakhimpur Kheri can be seen carrying body of his dead teenage sister. With roads washed away in floods, the… pic.twitter.com/wuKLjHArnj
— Piyush Rai (@Benarasiyaa) July 12, 2024
ಮಳೆಯಿಂದಾಗಿ ಉತ್ತರ ಪ್ರದೇಶದ ಕೆಲವೆಡೆ ಪ್ರವಾಹ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಸಹ ಕೊಚ್ಚಿಹೋಗಿವೆ. ಇದರಿಂದಾಗಿ ಸಂಪರ್ಕ ಸಾಧಿಸುವುದು ಕಷ್ಟವಾಗಿದೆ. ಹಾಗಾಗಿ ಸಹೋದರ ತನ್ನ ಸಹೋದರಿಗೆ ಚಿಕಿತ್ಸೆ ನೀಡಲು ಹೆಗಲ ಮೇಲೆ ಹೊತ್ತುಕೊಂಡು ಕಾಲು ದಾರಿಯಲ್ಲಿ ಸಾಗಿದ್ದಾನೆ. ಆದರೆ ಬಾಲಕಿ ಅಣ್ಣನ ಹೆಗಲ ಮೇಲೆಯೇ ಸಾವನ್ನಪ್ಪಿದ್ದಾಳೆ.
The picture from Lakhimpur Kheri district in Uttar Pradesh is heart-wrenching.
Shivani was suffering from typhoid. Due to the floods, she could not be taken to a good doctor in the city. She died on the way. Her brother is carrying his sister’s dead body on his shoulder…
It… pic.twitter.com/E4FmIXrKhr
— Sneha Mordani (@snehamordani) July 12, 2024
ಟ್ವಿಟ್ಟರ್ನಲ್ಲಿ ಈ ದೃಶ್ಯ ವೈರಲ್ ಆಗುತ್ತಿದ್ದು, ಉತ್ತರ ಪ್ರದೇಶದಲ್ಲಿನ ವ್ಯವಸ್ಥೆ ಬಗ್ಗೆ ಅನೇಕರು ಕೆಂಡಕಾರಿದ್ದಾರೆ. ಅದರಲ್ಲೂ ಜೀವ ಉಳಿಸಲು ಜನರು ಪರದಾಡುತ್ತಿರುವ ಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ