/newsfirstlive-kannada/media/post_attachments/wp-content/uploads/2025/07/HVR-AMBULANCE.jpg)
ಚಿತ್ರದುರ್ಗದ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನುಷ ಕೃತ್ಯವೊಂದು ನಡೆದು ಹೋಗಿದೆ. HIV ಇದೆ ಎಂದು ಮರ್ಯಾದೆಗೆ ಅಂಜಿದ ಅಕ್ಕ, ಒಡ ಹುಟ್ಟಿದ ತಮ್ಮನ ಕುತ್ತಿಗೆ ಹಿಸುಕಿ ಮುಗಿಸಿದ್ದಾಳೆ.
23 ವರ್ಷದ ಯುವಕನೊಬ್ಬನಿಗೆ ಅಪಘಾತವಾಗಿತ್ತು. ಕಾಲಿಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆಪರೇಷನ್ ಮಾಡುವ ಅಗತ್ಯ ಇತ್ತು. ಹೀಗಾಗಿ ವೈದ್ಯಾಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಹೆಚ್ಐವಿ ಇರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮತ್ತೆ ಆಸರೆಯಾದ ಕನ್ನಡಿಗ KL ರಾಹುಲ್.. ಇವತ್ತು ಕೊನೆಯ ದಿನ, ಮತ್ತಷ್ಟು ಕುತೂಹಲ..!
ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬಸ್ಥರಿಗೆ HIV ಇರುವ ಮಾಹಿತಿ ನೀಡಿದ್ದರು. ಅಪಘಾತ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ತಮ್ಮನಿಗೆ ಹೆಚ್ಐವಿ ಸೋಂಕು ಇರೋದನ್ನ ಅಕ್ಕ ಸಹಿಸಲಿಲ್ಲ. ಎಲ್ಲಿ ಮನೆಯ ಮರ್ಯಾದೆ ಹೋಗುತ್ತೋ ಅನ್ನೋ ಕಾರಣಕ್ಕೆ ಮರ್ಯಾದೆ ಹ*ತ್ಯೆಗೆ ಮುಂದಾಗಿದ್ದಾಳೆ. ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಕ್ಕ-ಭಾವ ಸೇರಿ ಉಸಿರುಗಟ್ಟಿಸಿ ಜೀವ ತೆಗೆದಿದ್ದಾರೆ.
ನಂತರ ಮೃತದೇಹವನ್ನು ದುಮ್ಮಿ ಗ್ರಾಮಕ್ಕೆ ತಂದಿದ್ದಾರೆ. ಕುತ್ತಿಗೆಯಲ್ಲಿ ಗಾಯ ಇರೋದನ್ನು ಗಮನಿಸಿದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೊಳಲ್ಕೆರೆ ಠಾಣೆಗೆ ಮೃತನ ತಂದೆ ದೂರು ನೀಡಿದ್ದಾರೆ. ಬೆನ್ನಲ್ಲೇ ಅಸಲಿ ಸತ್ಯ ಗೊತ್ತಾಗಿದೆ.
ಇದನ್ನೂ ಓದಿ: ಸಂಜಯ ಕಪೂರ್ ತಾಯಿ vs ಕಂಪನಿ ನಿರ್ದೇಶಕ ಮಧ್ಯೆ ಬಿಗ್ ಫೈಟ್.. 30 ಸಾವಿರ ಕೋಟಿ ಹಿಡಿತ ಯಾರ ಕೈಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ