/newsfirstlive-kannada/media/post_attachments/wp-content/uploads/2025/01/BROTHER-SISTER-FIGHT-1.jpg)
ಜ್ವರ ಬಂದ ತನ್ನ ಮಗುವಿಗೆ ತಂಗಿ ಸೌತೆಕಾಯಿ ತಿನ್ನಿಸಿದ್ದಳು ಎಂಬ ಒಂದೇ ಕಾರಣಕ್ಕೆ ಅಣ್ಣ ಚಾಕುವಿನಿಂದ ಇರಿದು ತಂಗಿಯ ಕಥೆಯನ್ನು ಮುಗಿಸಿದ್ದಾನೆ. ತಂದೆ, ತಂಗಿ ಅತ್ತಿಗೆಯನ್ನು ಚಾಕುವಿನಿಂದ ಇರಿದಿದ್ದಾನೆ. ಕೊಳ್ಳೆಗಾಲದ ಪಟ್ಟಣದ ಈದ್ಗಾ ಮೊದಲ್ಲಾದಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಐಮಾನ್ ಬಾನು ಎಂಬ ಯುವತಿ ಅಣ್ಣನ ಕ್ಷುಲ್ಲಕ ಕೋಪಕ್ಕೆ ಬಲಿಯಾಗಿದ್ದಾಳೆ. ಕೊಳ್ಳೇಗಾಲ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ನಿಜಕ್ಕೂ ಅಲ್ಲಿ ನಡೆದಿದ್ದು ಏನು ಅಂತ ನೋಡಿದ್ರೆ ಅತ್ಯಂತ ಕ್ಷುಲ್ಲಕ ಕಾರಣಕ್ಕೆ ಈ ಒಂದು ದುರಂತ ನಡೆದು ಹೋಗಿದೆ. ನಿನ್ನೆ ರಾತ್ರಿ ಫರ್ಮಾನ್​ನ ಮಗುವಿಗೆ ಅವನ ತಂಗಿ ಐಮಾನ್ ಬಾನು ಸೌತೆಕಾಯಿ ತಿನ್ನಿಸಿದ್ದಾಳೆ. ಮೊದಲೇ ಜ್ವರ ಇದೆ ಸೌತೆಕಯಿ ತಿನ್ನಿಸಬೇಡ ಎಂದು ಅತ್ತಿಗೆ ಹೇಳಿದ್ದಾಳೆ. ಆಗ ಐಮಾನ್​ ಬಾನು ಅಣ್ಣನೊಂದಿಗೆ ವಾದಕ್ಕೆ ಬಿದ್ದಿದ್ದಾಳೆ. ತಂಗಿ ತನ್ನನ್ನು ಬೈದಿದ್ದರಿಂದ ರೊಚ್ಚಿಗೆದ್ದ ಫರ್ಮಾನ್, ಅಡುಗೆ ಮನೆಯಲ್ಲಿದ್ದ ಮಾಂಸಕತ್ತಿರಿಸುವ ಕತ್ತಿಯನ್ನು ತಂದು ಕುತ್ತಿಗೆ ಇರಿದಿದ್ದಾನೆ. ಈ ವೇಳೆ ಆಕೆಯ ರಕ್ಷಣೆಗೆ ಬಂದ ಅತ್ತಿಗೆ ಮೇಲೆಯೂ ಅಟ್ಯಾಕ್ ಮಾಡಿದ್ದಾನೆ.
/newsfirstlive-kannada/media/post_attachments/wp-content/uploads/2025/01/BROTHER-SISTER-FIGHT-2.jpg)
ಇದನ್ನೂ ಓದಿ:ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಕಿರಿಕ್ ಆರೋಪ; ಉದ್ಯಮಿ ಪುತ್ರ ವಶಕ್ಕೆ.. ಮಾಡಿದ್ದೇನು?
ಗಲಾಟೆ ಕೇಳಿ ಕೆಳಗೆ ಬಂದ ತಂದೆಯ ಮೇಲೆಯೂ ಕೂಡ ಹಲ್ಲೆ ನಡೆದಿದೆ.ಯಾವಾಗ ಚೀರಾಟು ಅರಚಾಟ ಮನೆಯಲ್ಲಿ ಜೋರಾಯಿತೊ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಕೊಣೆಗೆ ಓಡಿ ಹೋದ ಫರ್ಮಾನ್ 122ಕ್ಕೆ ಸ್ವತಃ ತಾನೇ ಕರೆಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. 28 ವರ್ಷದ ಸೊಸೆ ತಸ್ಲೀಮ್, ಮಾವ ಸೈಯದ್ ಪಾಷಾಗೆ ಗಾಯಗಳಾಗಿವೆ. ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ರವಾನೆ ಮಾಡಲಾಗಿದ್ದು ಕೊಳ್ಳೇಗಾಲ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us