Advertisment

ಬೆಂಗಳೂರಲ್ಲಿ ಮಧ್ಯರಾತ್ರಿ ಪೈಶಾಚಿಕ ಕೃತ್ಯ.. ಅಣ್ಣನ ಜೊತೆಗೆ ಹೊರಟಿದ್ದ ತಂಗಿಯನ್ನು ಎಳೆದೊಯ್ದು ಅತ್ಯಾಚಾರ!

author-image
Gopal Kulkarni
Updated On
ಬೆಂಗಳೂರಲ್ಲಿ ಮಧ್ಯರಾತ್ರಿ ಪೈಶಾಚಿಕ ಕೃತ್ಯ.. ಅಣ್ಣನ ಜೊತೆಗೆ ಹೊರಟಿದ್ದ ತಂಗಿಯನ್ನು ಎಳೆದೊಯ್ದು ಅತ್ಯಾಚಾರ!
Advertisment
  • ಅಣ್ಣನ ಜೊತೆ ಹೊರಟಿದ್ದ ತಂಗಿಯನ್ನ ಎಳೆದೊಯ್ದು ಅತ್ಯಾಚಾರ ಆರೋಪ…
  • ಬೆಂಗಳೂರಿನ ಕೆ ಆರ್ ಪುರಂ ರೈಲು ನಿಲ್ದಾಣ ಸಮೀಪ ನಡೆದ ಘಟನೆ
  • ಬಿಹಾರ ಮೂಲದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ

ಬೆಂಗಳೂರಿನ ಕೆ ಆರ್​ ಪುರಂ ರೈಲು ನಿಲ್ದಾಣ ಸಮೀಪ ನಿನ್ನೆ ರಾತ್ರಿ 1.30 ಗಂಟೆ ಸಮಯದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಅಣ್ಣನ ಜೊತೆ ಹೊರಟಿದ್ದ ತಂಗಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ. ಬಿಹಾರದ ಮೂಲದ ಯುವತಿಯ ಮೇಲೆ ಈ ದೌರ್ಜನ್ಯ ನಡೆದಿದೆ ಎಂದು ತಿಳಿದು ಬಂದಿದೆ.

Advertisment

ಅಕ್ಕ ಬಾವನ ಜೊತೆಗೆ ಕೆಲಸಕ್ಕೆಂದು ಕೇರಳಕ್ಕೆ ಹೋಗಿದ್ದಳು ಯುವತಿ, ನಂತರ ಕೆಲಸ ಬಿಟ್ಟು ಊರಿಗೆ ವಾಪಸ್ ಹೊರಟಿದ್ದಳಂತೆ. ಎರ್ನಾಕುಲಂನಿಂದ ಬೆಂಗಳೂರಿನಗೆ ಬಂದು ಹೋಗಲು ನಿರ್ಧಾರ ಮಾಡಿದ್ದ ಯುವತಿ, ಬೆಂಗಳೂರಿನಲ್ಲಿರುವ ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ ನಗರಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಳು. ಈ ವೇಳೆ ಕೆ.ಆರ್​.ಪುರ ರೈಲು ನಿಲ್ದಾಣದಲ್ಲಿ ಇಳಿಯಲು ದೊಡ್ಡಮ್ಮನ ಮಗ ಹೇಳಿದ್ದಾರೆ. ರಾತ್ರಿ 1.30ರ ಸುಮಾರಿಗೆ ಯುವತಿ ಕೆ.ಆರ್​.ಪುರಂಗೆ ಬಂದು ಇಳಿದಿದ್ದಾಳೆ.

ಇದನ್ನೂ ಓದಿ:ಅತ್ತೆ, ನಾದಿನಿ ಜೊತೆ ಮಗಳನ್ನು ಸಾಯಿಸಿದ ಡ್ರೈವರ್‌.. ಕಾರಣವೇನು? ಸೆಲ್ಫಿ ವಿಡಿಯೋದಲ್ಲಿ ಸ್ಫೋಟಕ ಸತ್ಯ!

ಅವಳನ್ನು ಊಟಕ್ಕೆ ಕರೆದುಕೊಂಡು ಹೋಗುವ ವಿಚಾರದಲ್ಲಿ ಮಹದೇವಪುರಕ್ಕೆ ಆಕೆಯ ಅಣ್ಣ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದನಂತೆ. ಹೀಗೆ ಅಣ್ಣ ತಂಗಿ ಇಬ್ಬರು ಹೋಗುತ್ತಿರುವಾಗ ದಿಢೀರನೆ ಇಬ್ಬರು ಅಪರಿಚಿತ ಯುವಕರು ಎಂಟ್ರಿ ಕೊಟ್ಟಿದ್ದಾರೆ. ಯುವತಿ ಅಣ್ಣನ ಮೇಲೆ ಹಲ್ಲೆ ನಡೆಸಿ ಆತನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ ಓರ್ವ ಆಸಾಮಿ.

Advertisment

ಇದನ್ನೂ ಓದಿ:ಹೆಂಡತಿ ಮಕ್ಕಳ ಜೀವತೆಗೆದು, ತಾನು ನೇಣು ಬಿಗಿದುಕೊಂಡ ವ್ಯಕ್ತಿ! ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ

publive-image

ಮತ್ತೋರ್ವ ಯುವಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪ ಮಾಡಲಾಗಿದೆ. ಯುವತಿಯ ಕಿರುಚಾಟಕ ಕೇಳಿ ಸ್ಥಳಕ್ಕೆ ಜನರು ಓಡಿ ಬಂದಿದ್ದಾರೆ. ನಂತರ ಬೀದಿ ಕಾಮುಕರನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿ ಆಶಿಫ್ ಹಾಗೂ ಮತ್ತೊರ್ವ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment