newsfirstkannada.com

×

ತಂದೆಯಿಂದ ಸಾಲ ಮಾಡಿ ವ್ಯಾಪಾರ ಶುರು ಮಾಡಿದ ಸೋದರಿಯರು! ಇಂದು ಇವರ ಗಳಿಕೆ ಎಷ್ಟು ಸಾವಿರ ಕೋಟಿ?

Share :

Published October 16, 2024 at 5:27pm

    ಸಣ್ಣ ಕೊಣೆಯೊಂದರಲ್ಲಿ ಆರಂಭವಾದ ಬೇಕರಿ ಈಗ ಗಳಿಸುತ್ತಿರುವುದು ಎಷ್ಟು?

    1.5 ಕೋಟಿ ರೂಪಾಯಿಂದ ಶುರುವಾದ ವ್ಯಾಪಾರ ಈಗ ಸಹಸ್ರ ಕೋಟಿ ದಾಟಿದೆ

    ಇದು ಇಬ್ಬರು ಸಹೋದರಿಯರು ಸೇರಿ ಕಟ್ಟಿದ ಕೋಟಿ ಸಾಮ್ರಾಜ್ಯದ ಕಥಾಹಂದರ

ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಯಾವುದೇ ಕೆಲಸ ಮಾಡಿದರು ಅದು ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ ಅನ್ನೋದಕ್ಕೆ ಮುಂಬೈನ ಈ ಇಬ್ಬರು ಸಹೋದರಿರು ದೊಡ್ಡ ಉದಾಹರಣೆ. ಮುಂಬೈನ ಪುಟ್ಟದೊಂದು ಕೋಣೆಯಲ್ಲಿ ಶುರುವಾದ ಇವರ ವ್ಯಾಪಾರ ಈಗ ಅವರನ್ನು 3500 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದುವಷ್ಟು ಶ್ರೀಮಂತಿಕೆ ತಂದುಕೊಟ್ಟಿದೆ.
ಕೆನಾಜ್ ಅಂಡ್ ಟೀನಾ ಮೆಸ್​ಮೆನ್, ಈ ಇಬ್ಬರು ಸಹೋದರಿಯರು ಮುಂಬೈನ ಒಂದು ಕೊಣೆಯಲ್ಲಿ ಬೇಕರಿ ವ್ಯಾಪಾರ ಶುರು ಮಾಡಿದರು. ಅವರ ನಿರಂತರ ದುಡಿಮೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದಾಗಿ ಇಡೀ ದೇಶದಲ್ಲಿಯೇ ಸುಮಾರು 225 ಶಾಖೆಗಳನ್ನು ಹೊಂದಿದ್ದಾರೆ. ಥಿಯೊಬ್ರೊಮಾ ಬೇಕರಿ ಸದ್ಯ ದೇಶದಲ್ಲಿಯೇ ಅತಿಹೆಚ್ಚು ಜನಪ್ರಿಯತೆ ಪಡೆದಂತಹ ಬೇಕರಿ. ಅದನ್ನು ಹುಟ್ಟು ಹಾಕಿದ್ದೆ ಈ ಇಬ್ಬರು ಸಹೋದರಿಯರು.

ಥಿಯೊಬ್ರೊಮಾ ಬೇಕರಿಯ ಪ್ರಯಾಣ ಶುರುವಾಗಿದ್ದು 2004ರಲ್ಲಿ ಆ ವೇಳೆ ಕೆನಾಜ್​ ಪೇಸ್ಟ್ರೀ ಚೆಫ್​ ಆಗಿ ಕೆಲಸ ಮಾಡುತ್ತಿದ್ದರು. ಬೆನ್ನುನೋವಿನ ಸಮಸ್ಯೆಯಿಂದಾಗಿ ಆ ಒಂದು ಕೆಲವನ್ನು ಅವರು ಕೈಬಿಡುತ್ತಾರೆ. ಆನಂತ ಸಣ್ಣದೊಂದು ಕೊಣೆಯಲ್ಲಿ ಬೇಕರಿ ಬಿಸನೆಸ್ ಶುರು ಮಾಡುತ್ತಾರೆ. ಕೆನಾಜ್ ಈ ಒಂದು ಬೇಕರಿ ವ್ಯಾಪಾರ ಶುರು ಮಾಡೊದಕ್ಕೂ ಮುನ್ನ ಲಂಡನ್​ನ ಲೆ ಕಾರ್ಡನ್ ಬ್ಲೂನಲ್ಲಿ ತರಬೇತಿ ಪಡೆದಿರುತ್ತಾರೆ. ನಂತರ ಓಬಿರಾಯ್ ಉದ್ದೈವಿಲಾದಲ್ಲಿ ಕೆಲವು ವರ್ಷಗಳ ಕಾಲ ಕೆಲಸವನ್ನು ಮಾಡುತ್ತಾರೆ. ಆದ್ರೆ ಬೆನ್ನು ನೋವಿನಿಂದಾಗಿ ಆ ಕೆಲಸನ್ನು ಬಿಟ್ಟು ಈ ಬೇಕರಿ ಬ್ಯುಸಿನೆಸ್ ಆರಂಭ ಮಾಡುತ್ತಾರೆ.

ಇದನ್ನೂ ಓದಿ: ಗಂಡಂದಿರಿಗಾಗಿ ಈ ಏಳು ಗುಟ್ಟುಗಳು; ಈ ಮಾತುಗಳನ್ನು ನಿಮ್ಮ ಪತ್ನಿಯೆದರು ಹೇಳಲೇಬೇಡಿ!

ಬೇಕರಿ ವ್ಯಾಪಾರವನ್ನು ದೊಡ್ಡದಾಗಿ ಮಾಡಬೇಕೆಂಬ ಕನಸು ಕೆನಾಜ್ ಹಾಗೂ ಸಹೋದರಿಯರಿಗೆ ಹುಟ್ಟಿಕೊಳ್ಳುತ್ತದೆ. ಆರಂಭದಲ್ಲಿ ಬಂಡವಾಳ ಎಲ್ಲಿಂದ ತರೋದು ಅಂತ ಚಿಂತೆಗೆ ಬಿದ್ದಾಗ ಅವರ ತಂದೆ 1.5 ಕೋಟಿ ರೂಪಾಯಿ ಅವರಿಗೆ ನೀಡುತ್ತಾರೆ. ಅಲ್ಲಿಂದ ಶುರುವಾದ ಥಿಯೊಬ್ರೊಮಾ ಬೇಕರಿ ಹಿಂದಿರುಗಿ ನೋಡಲೇ ಇಲ್ಲ. ಮುಂಬೈನ ಕೊಲಾಬ್​ನಲ್ಲಿ ಮೊದಲ ಬಾರಿ 2004ರಲ್ಲಿ ದಸರಾದಂದು ಥಿಯೊಬ್ರೊಮಾ ಬೇಕರಿ ಆರಂಭವಾಗುತ್ತದೆ. ಥಿಯೊಬ್ರೊಮಾ ಹೆಸರು ಬಂದಿದ್ದು ಕೂಡ ಒಂದು ರೋಚಕ ಬೆಳವಣಿಗೆ ಗ್ರೀಕ್​ನಲ್ಲಿ ಥಿಯೊಸ್ ಅಂದ್ರೆ ದೇವರು ಬ್ರೊಮಾ ಅಂದ್ರೆ ಆಹಾರ ಹೀಗಾಗಿ ಈ ಹಿನ್ನೆಲೆಯಲ್ಲಿ ಈ ಬೇಕರಿಗೆ ಥಿಯೊಬ್ರೊಮಾ ಎಂದು ಹೆಸರಿಡಲಾಯ್ತು. ಈ ಸಹೋದರಿಯರು ಬೇಕರಿ ಆರಂಭ ಮಾಡಿದ ಕಾಲದಲ್ಲಿ ಬೇಕರಿ ವ್ಯಾಪಾರ ಈಗೀನ ಕಾಲಕ್ಕೆ ಹೋಲಿಸಿ ನೋಡಿದರೆ ಕಡಿಮೆಯೇ ಇತ್ತು. ಆದ್ರೆ ಕೆನಾಜ್ ಯುರೋಪಿಯನ್ ಸ್ಟೈಲ್​ ಮಾಡುತ್ತಿದ್ದ ಬ್ರೌನೀಸ್ ಮತ್ತು ಡೆಸರ್ಟ್ಸ್​ಗಳು ಮುಂಬೈನ ಯುವಕ ಯುವತಿಯರನ್ನು ಸೆಳೆದವು ಐಷಾರಾಮಿ ಎನಿಸುವಂತ ಬೇಕರಿ ಫುಡ್​ಗಳತ್ತ ಈ ಸಹೋದರಿ ಜೋಡಿ ಗಮನಹರಿಸಿದ್ದು ಈ ಬೇಕರಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.

ಇದನ್ನೂ ಓದಿ: 50 ವರ್ಷಗಳ ಕಾಲ ತರುಣಿಯಂತೆ ಯಂಗ್ ಆಗಿರಿ.. ಲಕಲಕ ಹೊಳೆಯಲು ನಿಮ್ಮ ಲೈಫ್​ಸ್ಟೈಲ್ ಹೇಗಿರಬೇಕು?
ಸದ್ಯ ಈ ಒಂದು ಬೇಕರಿಯಿಂದಾಗಿ ಇವರು ಗಳಿಸಿದ್ದು ಸುಮಾರು 3500 ಕೋಟಿ ರೂಪಾಯಿ ಎನ್ನಲಾಗಿದೆ. 1.5 ಕೋಟಿ ರೂಪಾಯಿ ಬಂಡವಾಳದಿಂದ ಆರಂಭವಾದ ಬೇಕರಿ ಬ್ಯುಸಿನೆಸ್ ಇಂದು ಈಗ ಈ ಮಟ್ಟಕ್ಕೆ ಬೆಳೆದಿದೆ. ದೇಶಾದ್ಯಂತ ಸುಮಾರು 225ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಈ ಬೇಕರಿ ಈಗ ಯುವಕ ಯುವತಿಯರ ನೆಚ್ಚಿನ ಬೇಕರಿಗಳಲ್ಲೊಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆಯಿಂದ ಸಾಲ ಮಾಡಿ ವ್ಯಾಪಾರ ಶುರು ಮಾಡಿದ ಸೋದರಿಯರು! ಇಂದು ಇವರ ಗಳಿಕೆ ಎಷ್ಟು ಸಾವಿರ ಕೋಟಿ?

https://newsfirstlive.com/wp-content/uploads/2024/10/Theobroma-bakery-1.jpg

Load More