newsfirstkannada.com

SIT ಸತತ ವಿಚಾರಣೆ, ಆರೋಗ್ಯದಲ್ಲಿ ಏರುಪೇರು; ಚಿಕಿತ್ಸೆ ಜೊತೆಗೆ ರೇವಣ್ಣನಿಗೆ ಜಾಮೀನಿನದ್ದೇ ಚಿಂತೆ

Share :

Published May 8, 2024 at 6:35am

    ಇವತ್ತು ಹೆಚ್‌.ಡಿ. ರೇವಣ್ಣ ಎಸ್ಐಟಿ ಕಸ್ಟಡಿ ಅಂತ್ಯ

    ಮತ್ತೆ 3 ದಿನ ಎಸ್​​ಐಟಿ ಕಸ್ಟಡಿಗೆ ಕೇಳುವ ಸಾಧ್ಯತೆ

    ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರು

ಸಂತ್ರಸ್ತೆಯ ಕಿಡ್ನಾಪ್ ಕೇಸ್‌ನಲ್ಲಿ ಹೆಚ್‌.ಡಿ. ರೇವಣ್ಣ ಎಸ್‌ಐಟಿ ಅಧಿಕಾರಿಗಳ ಅತಿಥಿಯಾಗಿದ್ದಾರೆ. ಪೊಲೀಸರ ವಶದಲ್ಲೇ ನಾಲ್ಕು ದಿನಗಳನ್ನ ಕಳೆದಿದ್ದಾರೆ. ಇವತ್ತು ರೇವಣ್ಣ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ರೇವಣ್ಣನಿಗೆ ಜೈಲಾ? ಬೇಲಾ ಎಂಬ ಕೌತುಕ ಮನೆಮಾಡಿದೆ. ಈ ಮಧ್ಯೆ ವಿಚಾರಣೆಯ ಹೊತ್ತಲ್ಲಿ ರೇವಣ್ಣ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಎಸ್‌ಐಟಿ ಕಸ್ಟಡಿಗೆ ಮರಳಿಸಿದ್ದಾರೆ.

ಕಿಡ್ನ್ಯಾಪ್​ ಕೇಸ್​ನಲ್ಲಿ ರೇವಣ್ಣರನ್ನು ವಶಕ್ಕೆ ಪಡೆದಿರುವ ಎಸ್​ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ನಿನ್ನೆ ಕೂಡಾ ರೇವಣ್ಣಗೆ ಕೋರ್ಟ್ ರಿಲೀಫ್​ ನೀಡಿಲ್ಲ. ಕೋರ್ಟ್​ಗೆ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇವತ್ತಿಗೆ ಮುಂದೂಡಿಕೆಯಾಗಿದೆ. ಹೀಗಾಗಿ ಜೆಡಿಎಸ್ ನಾಯಕನಿಗೆ ಇವತ್ತು ಜಾಮೀನು ಟೆನ್ಶನ್‌ ಇದ್ದೇ ಇದೆ.

ಜೆಡಿಎಸ್‌ ಮಾಜಿ ಸಚಿವನಿಗೆ ಜೈಲಾ? ಜಾಮೀನಾ?

ಪ್ರಜ್ವಲ್​ ಪೆನ್​ಡ್ರೈವ್​ ಪ್ರಕರಣದ ಸಂತ್ರಸ್ತೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಎಸ್​ಐಟಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ರೇವಣ್ಣಗೆ ನಿನ್ನೆ ಕೂಡಾ ರಿಲೀಫ್​ ಸಿಕ್ಕಿಲ್ಲ. ಈ ಮಧ್ಯೆ ಆರೋಪಿ ಹೆಚ್​​ಡಿ ರೇವಣ್ಣ ಎಸ್ಐಟಿ ಕಸ್ಟಡಿ ಅಂತ್ಯಗೊಳ್ಳಲಿದೆ. ಹೀಗಾಗಿ ಇವತ್ತು ಸಿಟಿ ಸಿವಿಲ್​ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಬೇಲ್ ಅರ್ಜಿಯ ವಿಚಾರಣೆ ನಡೆಯಲಿದೆ. ಇವತ್ತು ರೇವಣ್ಣಗೆ ಬೇಲ್ ಸಿಗುತ್ತಾ ಅಥವಾ ಮತ್ತೆ ಪೊಲೀಸ್ ವಾಸವೇ ಗತಿಯ ಎಂಬ ಪ್ರಶ್ನೆ ಮೂಡಿದೆ.

ರೇವಣ್ಣಗೆ ಜೈಲಾ? ಬೇಲಾ?

ಕಿಡ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ರೇವಣ್ಣ ಕಳೆದ 4 ದಿನಗಳಿಂದ ಎಸ್​ಐಟಿ ಕಸ್ಟಡಿಯಲ್ಲಿದ್ದಾರೆ. ಇವತ್ತಿಗೆ ಹೆಚ್.​​ಡಿ. ರೇವಣ್ಣ ಎಸ್​ಐಟಿ ಕಸ್ಟಡಿ ಅಂತ್ಯಗೊಳ್ಳಲಿದ್ದು, ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಇನ್ನೂ ಎಸ್​​ಐಟಿ ಅಧಿಕಾರಿಗಳ ವಿಚಾರಣೆ ಇನ್ನೂ ಮುಂದುವರಿಯಬೇಕಿದೆ. ಯಾಕಂದ್ರೆ, ಎಸ್​ಐಟಿ ವಿಚಾರಣೆಯಲ್ಲಿ ರೇವಣ್ಣ ಏನನ್ನೂ ಹೇಳದೇ ಕೇವಲ ನನಗೇನು ಗೊತ್ತಿಲ್ಲ ಅಂತಾ ಒಂದೇ ಪದವನ್ನೇ ಹೇಳುತ್ತಿದ್ದಾರೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ 3 ದಿನ ಕಸ್ಟಡಿಗೆ ಕೊಡುವಂತೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: VIDEO: ‘ಪ್ರಜ್ವಲ್ ರೇವಣ್ಣನ ಬಿಟ್ಟು ನನ್ನ ಜೈಲಿಗೆ ಹಾಕಿದ್ದಾರೆ’- ಕೆಸಿಆರ್ ಪುತ್ರಿ ಕೆ. ಕವಿತಾ ಆಕ್ರೋಶ

ಎಸ್‌ಐಟಿ ಬಂಧಿಸಿದ ಬಳಿಕ ಹೆಚ್‌.ಡಿ ರೇವಣ್ಣ ಸರಿಯಾಗಿ ಊಟವನ್ನೇ ಮಾಡಿಲ್ಲ ಅಂತ ತಿಳಿದುಬಂದಿದೆ. ಹೀಗಾಗಿ ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ್ಯಸಿಡಿಟಿ ಸಮಸ್ಯೆಯಿಂದ ಹೊಟ್ಟೆ ಉರಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡು, ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರ ಬೆನ್ನಲ್ಲೇ ರೇವಣ್ಣನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ಸುಮಾರು 2 ಗಂಟೆಗಳ ಕಾಲ ತಜ್ಞ ವೈದ್ಯರು ರೇವಣ್ಣಗೆ ಚಿಕಿತ್ಸೆಯನ್ನ ನೀಡಿದ್ರು..ಬಳಿಕ ವಿಕ್ಟೋರಿಯಾ ಆಸ್ಪತ್ರೆಯಿಂದ ಮತ್ತೆ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಯ್ತು.

ಒಟ್ಟಾರೆ. ಎಸ್​ಐಟಿ ಕಸ್ಟಡಿಯಲ್ಲಿರುವ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಇವತ್ತು ನಡೆಯಲಿದೆ.. ಇನ್ನು ಇವತ್ತು ರೇವಣ್ಣ ಎಸ್​ಐಟಿ ಕಸ್ಟಡಿ ಕೂಡಾ ಅಂತ್ಯವಾಗಲಿದ್ದು, ರೇವಣ್ಣಗೆ ರಿಲೀಫ್​ ಸಿಗುತ್ತಾ? ಇಲ್ವಾ? ಅನ್ನೋದೆ ಸದ್ಯದ ಕೌತುಕ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SIT ಸತತ ವಿಚಾರಣೆ, ಆರೋಗ್ಯದಲ್ಲಿ ಏರುಪೇರು; ಚಿಕಿತ್ಸೆ ಜೊತೆಗೆ ರೇವಣ್ಣನಿಗೆ ಜಾಮೀನಿನದ್ದೇ ಚಿಂತೆ

https://newsfirstlive.com/wp-content/uploads/2024/05/REVANNA_NEW.jpg

Load More