newsfirstkannada.com

ಭವಾನಿ ರೇವಣ್ಣಗೂ ಎದುರಾಯ್ತು ಸಂಕಷ್ಟ.. ಮನೆ ಕೆಲಸದಾಕೆ ಕೇಸ್‌ನಲ್ಲಿ SIT ನೋಟಿಸ್‌; ಮುಂದೇನು?

Share :

Published May 3, 2024 at 12:20pm

Update May 3, 2024 at 12:21pm

    ಹೊಳೆನರಸೀಪುರದ ರೇವಣ್ಣ ಮನೆಗೆ ಭೇಟಿ ನೀಡಿದ ಪೊಲೀಸರ ತಂಡ

    ಹೆಚ್‌.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಮೇಲೆ ಮನೆ ಕೆಲಸದಾಕೆ ದೂರು

    ಹಾಸನ ಪೊಲೀಸರ ಮೂಲಕ ಭವಾನಿ ರೇವಣ್ಣಗೆ ಎಸ್‌ಐಟಿ ತಂಡ ನೋಟಿಸ್

ಹಾಸನ: ಅಶ್ಲೀಲ ವಿಡಿಯೋ ವೈರಲ್ ಹಾಗೂ ಪೆನ್‌ಡ್ರೈವ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಕುಟುಂಬಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದೆ. ನೋಟಿಸ್ ಕೊಟ್ಟು ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಹಾಸನದ ಹೆಚ್‌.ಡಿ ರೇವಣ್ಣ ಮನೆಗೆ ಭೇಟಿ ನೀಡಿದ್ದಾರೆ.

ಹೊಳೆನರಸೀಪುರದ ಮನೆಗೆ ಭೇಟಿ ನೀಡಿದ ನಗರ ಠಾಣೆ ಪೊಲೀಸರು ಕೆಲ ನಿಮಿಷಗಳ ಕಾಲ ಮಾಹಿತಿ ಕೇಳಿದ್ದಾರೆ. ಪೊಲೀಸರು ಮನೆಗೆ ಭೇಟಿ ಕೊಟ್ಟಾಗ ಹೆಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಮನೆಯಲ್ಲಿಯೇ ಇದ್ದರು.

ಇದನ್ನೂ ಓದಿ: ‘ನಿನ್ನ ತಾಯಿಯ ಕಾಲು ಕಟ್ಟಿದ್ರು, ಪ್ರಜ್ವಲ್ ಬಲತ್ಕಾರ ಮಾಡಿದ್ರು..’ ರೇವಣ್ಣ ವಿರುದ್ಧ ಕಿಡ್ನಾಪ್‌ ಕೇಸ್ ದಾಖಲು 

ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಮೇಲೆ ಮನೆ ಕೆಲಸದಾಕೆ ದೂರು ನೀಡಿದ್ದಾರೆ. ಮನೆ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಭವಾನಿ ರೇವಣ್ಣಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇಂದು ಅಥವಾ ನಾಳೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸ್ಥಳೀಯ ಪೊಲೀಸರ ಮೂಲಕ ಎಸ್‌ಐಟಿ ತಂಡ ನೋಟಿಸ್ ಜಾರಿ ಮಾಡಿದೆ. ಹೆಚ್‌.ಡಿ ರೇವಣ್ಣ ಅವರು ಜನಪ್ರತಿನಿಧಿ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗ ಭವಾನಿ ರೇವಣ್ಣ ಅವರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಭವಾನಿ ರೇವಣ್ಣಗೂ ಎದುರಾಯ್ತು ಸಂಕಷ್ಟ.. ಮನೆ ಕೆಲಸದಾಕೆ ಕೇಸ್‌ನಲ್ಲಿ SIT ನೋಟಿಸ್‌; ಮುಂದೇನು?

https://newsfirstlive.com/wp-content/uploads/2023/12/HD-Revanna_Bhavani.jpg

Load More