ಸಂಕಷ್ಟಕ್ಕೆ ಸಿಲುಕಿದ ನಲಪಾಡ್.. ದಿಢೀರ್ ಡಿಕೆ ಶಿವಕುಮಾರ್ ಭೇಟಿಯಾಗಿ ಚರ್ಚೆ..!

author-image
Ganesh
Updated On
ಯೂತ್ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್‌ಗೆ ಬಿಗ್ ಶಾಕ್‌.. SIT ವಿಚಾರಣೆ; ಕಾರಣವೇನು?
Advertisment
  • ಎಸ್​ಐಟಿ ಅಧಿಕಾರಿಗಳಿಂದ ನಲಪಾಡ್ ವಿಚಾರಣೆ ಸಾಧ್ಯತೆ
  • ಡಿಸಿಎಂ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದ ಮೊಹ್ಮದ್ ನಲಪಾಡ್
  • ನಲಪಾಡ್ ವಿಚಾರಕ್ಕೆ ಗೃಹಸಚಿವರು ಹೇಳಿದ್ದು ಏನು?

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣ (Bitcoin case) ಸಂಬಂಧ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ್ ನಲಪಾಡ್​​ಗೆ (Mohammed Nalapad) ಸಂಕಷ್ಟ ಎದುರಾಗಿದೆ.

ಎಸ್​ಐಟಿ ಅಧಿಕಾರಿಗಳು ಎರಡನೇ ಬಾರಿಗೆ ನೋಟಿಸ್ ನೀಡಿದ್ದು ಫೆಬ್ರವರಿ 7 ರಂದು (ನಾಳೆ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಆದರೆ ನಲಪಾಡ್​ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ. ಈ ನಡುವೆ ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರನ್ನು ದಿಢೀರ್ ಭೇಟಿಯಾಗಿರೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಕಠಿಣ ನಿರ್ಧಾರ.. ಕೊಹ್ಲಿಯನ್ನೇ ಆಟದಿಂದ ಹೊರಗಿಟ್ಟ ರೋಹಿತ್..!

ಎಸ್ಐಟಿ ವಿಚಾರಣೆಗೆ ಹಾಜರಾಗುವ ಮುನ್ನ ಡಿಸಿಎಂ ಅವರನ್ನು ಭೇಟಿಯಾಗಿದ್ದಾರೆ. ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆಶಿ ನಿವಾಸಕ್ಕೆ ತೆರಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಟ್ ಕಾಯಿನ್ ಹಗರಣ ಸಂಬಂಧ ಹ್ಯಾಕರ್ ಶ್ರೀಕಿಯನ್ನು ಎಸ್​​ಐಟಿ ಬಂಧಿಸಿ ವಿಚಾರಣೆ ನಡೆಸಿತ್ತು. ಹ್ಯಾಕರ್ ಶ್ರೀಕಿ ಜೊತೆ ಮಹಮ್ಮದ್ ನಲಪಾಡ್ ನಂಟು ಹೊಂದಿರುವ ಶಂಕೆ ಇದೆ. ಶ್ರೀಕಿಯಿಂದ ಕೋಟ್ಯಾಂತರ ರೂಪಾಯಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ನಲಪಾಡ್ ನೋಟಿಸ್ ಸಂಬಂಧ ಪ್ರತಿಕ್ರಿಯಿಸಿರೋ ಗೃಹ ಸಚಿವ ಪರಮೇಶ್ವರ್, ನೋಟಿಸ್ ನೀಡುವುದು ತನಿಖೆಯ ಒಂದು ಭಾಗ. ಅಧಿಕಾರಿಗಳು ಯಾರನ್ನು ಕರೆದು ಹೇಳಿಕೆ ದಾಖಲಿಸಬೇಕೋ ಆ ಪ್ರಕ್ರಿಯೆ ಮಾಡುತ್ತಿದ್ದಾರೆ. ಯಾವ ರೀತಿ ವ್ಯವಹಾರ ಇದೆ ಅನ್ನೊದು ಪೊಲೀಸರು ಪತ್ತೆ ಮಾಡ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ದಿಢೀರ್​ ಡಿಕೆಶಿ ಭೇಟಿಯಾಗಿ ಕಾರಲ್ಲಿ ಸುದೀಪ್ ಜೊತೆ ತೆರಳಿದ ನಲಪಾಡ್; ಭಾರೀ ಕುತೂಹಲ​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment