Advertisment

ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ

author-image
Bheemappa
Updated On
ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ  ಸೂರಜ್​ ರೇವಣ್ಣ ವಿಚಾರಣೆ
Advertisment
  • ಸೂರಜ್ ಪ್ರಕರಣ ಹಾಸನ ಮಾತ್ರವಲ್ಲದೇ ರಾಜ್ಯದಲ್ಲಿ ಸಂಚಲನ
  • ಮಧ್ಯರಾತ್ರಿ ಕಳೆಯುವವರೆಗು ಸೂರಜ್ ಮ್ಯಾರಥನ್ ವಿಚಾರಣೆ
  • ಸೂರಜ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿರುವುದು ಎಲ್ಲಿ.?

ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಕಿರುಕುಳ ಭಾರೀ ಸಂಚಲನ ಸೃಷ್ಟಿಸಿದೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಸೂರಜ್​ನನ್ನು ಮಧ್ಯರಾತ್ರಿವರೆಗೂ ಪೊಲೀಸರು ವಿಚಾರಣೆ ನಡೆಸಿ ನಿಗೂಢ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.

Advertisment

ಮಾಜಿ ಸಚಿವ ಹೆಚ್​ಡಿ ರೇವಣ್ಣ ಕುಟುಂಬಕ್ಕೆ ಶನಿ​ ಶುರುವಾದಂತಿದೆ. ಒಬ್ಬ ಪುತ್ರ ಪ್ರಜ್ವಲ್ ರೇವಣ್ಣ ಎಸ್​ಐಟಿ ವಶದಲ್ಲಿರುವಾಗ ಮತ್ತೊಬ್ಬ ಪುತ್ರ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹಾಸನ ಮಾತ್ರವಲ್ಲದೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಜೆಡಿಎಸ್ ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ದೌರ್ಜನ್ಯ ನೀಡಿರೋ ಆರೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ:NEET- PG ಎಕ್ಸಾಂ ಮುಂದೂಡಿಕೆ.. ಪರೀಕ್ಷೆಯಲ್ಲಿ ಅಕ್ರಮ ವಾಸನೆ, ಸುಬೋಧ್ ಕುಮಾರ್ ಸಿಂಗ್ ವಜಾ

publive-image

ಸಂಜೆ 7 ಗಂಟೆಯಿಂದ ಸೂರಜ್ ರೇವಣ್ಣಗೆ ವಿಚಾರಣೆ

ಯುವಕನಿಗೆ ಅಸಹಜ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಸೂರಜ್ ರೇವಣ್ಣ ವಿರುದ್ಧ ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಹೀಗಾಗಿ ಇಂದು ಸಂಜೆ ಸುಮಾರು 7 ಗಂಟೆಗೆ ಸೆನ್ ಠಾಣೆಗೆ ಬಂದ ಸೂರಜ್​ನನ್ನ ಮ್ಯಾರಥನ್ ವಿಚಾರಣೆ ನಡೆಸಿದ್ದಾರೆ. ಟೆಕ್ನಿಕಲ್​ ಎವಿಡೆನ್ಸ್​ಗಾಗಿ ಠಾಣೆಗೆ ಕರೆತಂದಿದ್ದ ಪೊಲೀಸ್ರು ಮಧ್ಯರಾತ್ರಿವರೆಗೂ ವಿಚಾರಣೆ ಮಾಡಿದ್ದಾರೆ. ಅಲ್ಲದೆ ಸಂತ್ರಸ್ತನ ವಿರುದ್ಧ ಬ್ಲಾಕ್ ಮೇಲ್ ದೂರು ನೀಡಿದ್ದ ಬಗ್ಗೆ ಸೂರಜ್ ರೇವಣ್ಣನನ್ನು ವಿಚಾರಣೆ ಮಾಡಿದ್ದಾರೆ.

Advertisment

ಸೂರಜ್‌‘ಗೆ’ ಸಂಕಟ

  • ಸಂಜೆ ಸೂರಜ್‌ ವಿರುದ್ಧ ದೂರು ನೀಡಿರುವ ಸಂತ್ರಸ್ತ
  • ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಂದ FIR
  • ಸಂತ್ರಸ್ತ ನೀಡಿದ ದೂರನ್ನ ಆಧರಿಸಿ ಎಫ್‌ಐಆರ್ ದಾಖಲು
  • ಐಪಿಸಿ ಸೆಕ್ಷನ್ 377, 342, 506 ಅಡಿಯಲ್ಲಿ ಪ್ರಕರಣ ದಾಖಲು
  • ಐಪಿಸಿ ಸೆಕ್ಷನ್ 377 ಅಸ್ವಾಭಾವಿಕ ಲೈಂಗಿಕ ಅಪರಾಧ
  • 342 ಅಕ್ರಮ ಬಂಧನ, 506 ಬೆದರಿಕೆಯಡಿ ಎಫ್​​ಐಆರ್​​​

ಇನ್ನು ವಿಚಾರಣೆಗೂ ಮುನ್ನ ಮಾತನಾಡಿದ ಸೂರಜ್ ಇದು ರಾಜಕೀಯ ಷಡ್ಯಂತ್ರ ಎಂದಿದ್ದಾರೆ.

ನನ್ನ ಮೇಲೆ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಆರೋಪವನ್ನು ಕಡ ಖಂಡಿತವಾಗಿ ತಿರಸ್ಕಾರ ಮಾಡುತ್ತೇನೆ. ಕಾನೂನಿನ ವ್ಯವಸ್ಥೆ ಇದೆ. ಕಾನೂನಿನಲ್ಲಿ ಏನೇನು ತೀರ್ಮಾನ ಆಗಬೇಕೋ ಅದು ಆಗುತ್ತದೆ. ಸತ್ಯ ಹೊರಗಡೆ ಬಂದೇ ಬರುತ್ತದೆ.

ಸೂರಜ್ ರೇವಣ್ಣ, ಎಂ​ಎಲ್​ಸಿ

publive-image

ವಿಚಾರಣೆಗಾಗಿ ನಿಗೂಢ ಸ್ಥಳಕ್ಕೆ ಕರೆದೊಯ್ದ ಪೊಲೀಸರು

ಇನ್ನು ಮಧ್ಯರಾತ್ರಿವರೆಗೂ ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸೂರಜ್​ನನ್ನು ಹೆಚ್ಚಿನ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಹಾಸನದ ಸೈಬರ್ ಕ್ರೈಮ್ ಠಾಣೆಯಿಂದ ಹೊಳೆನರಸೀಪುರ ಡಿವೈಎಸ್ಪಿ ಕರೆದೊಯ್ದಿದ್ದಾರೆ. ಈ ವೇಳೆ ತಮ್ಮದೇ ಕಾರಿನಲ್ಲಿ ಸೂರಜ್ ರೇವಣ್ಣ ಪೊಲೀಸರ ಜೊತೆ ತೆರಳಿದ್ದಾರೆ. ಸದ್ಯ ಸೂರಜ್​ನನ್ನ ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದು ವಿಚಾರಣೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಇದೇ ವೇಳೆ ಸೂರಜ್ ಕಾರನ್ನು ನೋಡಿದ ಅವರ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.

Advertisment

ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನತ್ತ ಸಂತ್ರಸ್ತ ವ್ಯಕ್ತಿ

ಇನ್ನು ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ ಸಂತ್ರಸ್ತ ವ್ಯಕ್ತಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ. ನಿನ್ನೆ ಸಂಜೆಯಷ್ಟೇ ಸೂರಜ್‌ ವಿರುದ್ಧ ಸಂತ್ರಸ್ತ ದೂರು ನೀಡಿದ್ದ. ಪೆನ್​ಡ್ರೈವ್ ಕೇಸ್ ಬೆನ್ನಲ್ಲೇ ಈಗ ಗನ್ನಿಕಡದ ತೋಟದ ಮನೆಯ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹಾಸನ ಮಾತ್ರವಲ್ಲದೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ಸೂರಜ್ ರೇವಣ್ಣ ಪೊಲೀಸರ ವಶದಲ್ಲಿದ್ದು ಸಕಲೇಶಪುರ ಡಿವೈಎಸ್ಪಿ ಪ್ರಮೋದ್​ ಕುಮಾರ್​ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment