newsfirstkannada.com

ಅಲ್ಲೂ ಇಲ್ಲ, ಇಲ್ಲೂ ಇಲ್ಲ.. SIT ಕೈಗೆ ಸಿಗದ ಭವಾನಿ ರೇವಣ್ಣ ಎಲ್ಲಿ? 3 ಜಿಲ್ಲೆ 4 ತಂಡದಿಂದ ಹುಡುಕಾಟ.. ಸಿಕ್ಕರೆ ಮಾತ್ರ..

Share :

Published June 3, 2024 at 6:17am

    ಭವಾನಿ ರೇವಣ್ಣ ಅತ್ತ ಹಾಸನದಲ್ಲೂ ಇಲ್ಲ, ಬೆಂಗಳೂರಿನಲ್ಲೂ ಇಲ್ಲ

    4 ವಿಶೇಷ ತಂಡ ರಚನೆ ಮಾಡಿ ಭವಾನಿಗಾಗಿ ಎಸ್‌ಐಟಿ ಸರ್ಚಿಂಗ್

    ಒಂದ್ವೇಳೆ ಭವಾನಿ ಪತ್ತೆಯಾಗದಿದ್ರೆ ಎಸ್​ಐಟಿ ಏನು ಮಾಡ್ತಾರೆ ಗೊತ್ತಾ?

ಮಗನ ಮೇಲೆ ಬಂದಿದ್ದ ಅಶ್ಲೀಲ ಆರೋಪವನ್ನ ಮುಚ್ಚಿಹಾಕಲು ಯತ್ನಿಸಿ ಭವಾನಿ ರೇವಣ್ಣ ಸಂಕಷ್ಟಕ್ಕೆ ಸಿಲುಕಿರೋ ಹಾಗಿದೆ. ಸಂತ್ರಸ್ತೆಯ ಕಿಡ್ನಾಪ್ ಕೇಸ್‌ನಲ್ಲಿ ಪತಿಯ ಬಳಿಕ ಭವಾನಿ ಕೂಡ ಬಂಧನ ಆಗೋದು ಫಿಕ್ಸ್ ಆಗಿದೆ. ಈ ಮಧ್ಯೆ ಎಸ್‌ಐಟಿ ಬಲೆಗೆ ಬೀಳದೆ, ವಿಚಾರಣೆಗೂ ಹಾಜರಾಗದೇ ಅಬ್‌ಸ್ಕ್ಯಾಂಡ್ ಆಗಿದ್ದಾರೆ. ತಂಡೋಪ ತಂಡವಾಗಿ ಪ್ರಜ್ವಲ್‌ರ ತಾಯಿಯನ್ನ ಎಸ್ಐಟಿ ಹುಡುಕಾಟ ನಡೆಸುತ್ತಿದೆ.

ಗುಣಗೇಡಿ ಮಗನೂ ಹುಟ್ಟಿ ಮನೆತನದ ಮಾನ ಕಳೆದಾನ ಎಂಬ ಮಾತಿನಂತೆ ಪ್ರಜ್ವಲ್ ರೇವಣ್ಣ ಅಶ್ಲೀಲದ ಗುಂಡಿಯೊಳಗೆ ಬಿದ್ದು ತಂದೆ-ತಾಯಿಗೂ ಕಂಟಕವಾಗಿದ್ದಾರೆ. ಅತ್ಯಾಚಾರ ಆರೋಪ ಹೊತ್ತು ಎಸ್ಐಟಿ ಬಲೆಯೊಳಗೆ ಬಂಧಿಯಾಗಿದ್ದಾರೆ. ಇದೀಗ ಪತಿ, ಪುತ್ರನ ಬಳಿಕ ಭವಾನಿ ರೇವಣ್ಣಗೂ ಬಂಧನದ ಕಾಲ ಸನ್ನಿಹಿತವಾಗಿದೆ. ಆದ್ರೆ, ಪ್ರಜ್ವಲ್ ತಾಯಿ ಭವಾನಿ ಮಾತ್ರ ಎಸ್‌ಐಟಿ ಕೈಗೆ ಸಿಗದೇ ಅಜ್ಞಾತವಾಗಿದ್ದಾರೆ.

‘ಅಸಹಕಾರ’ ಅಸ್ತ್ರ ಪ್ರಯೋಗಿಸಲು ಎಸ್‌ಐಟಿ ತಯಾರಿ

ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಮೇಲೂ ಕೇಸ್ ದಾಖಲಾಗಿತ್ತು. ಈ ಆರೋಪ ಬೆನ್ನು ಬೀಳ್ತಿದ್ದಂತೆ ಭವಾನಿ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ರು. ಆದ್ರೆ ಕೋರ್ಟ್ ಬೇಲ್ ನೀಡಲು ನಿರಾಕರಿಸಿತ್ತು. ಇಷ್ಟೆಲ್ಲ ಆದ್ರೂ ವಿಚಾರಣೆಗೆ ಹಾಜರಾಗದೆ ಭವಾನಿ ರೇವಣ್ಣ ಅಸಹಕಾರ ತೋರುತ್ತಿದ್ದಾರೆ. ಹೊಳೆ ನರಸೀಪುರದ ನಿವಾಸದ ಮುಂದೆ ಎಸ್‌ಐಟಿ ಅಧಿಕಾರಿಗಳೂ ಗಂಟೆಗಟ್ಟಲೇ ಕಾದ್ರೂ ಕ್ಯಾರೇ ಎನ್ನದೇ ಕಣ್ಮರೆಯಾಗಿದ್ದಾರೆ. ಹೀಗಾಗಿ ಭವಾನಿ ರೇವಣ್ಣ ವಿರುದ್ಧ ವಿಚಾರಣೆಗೆ ಅಸಹಕಾರ ತೋರುತ್ತಿರೋ ಅಸ್ತ್ರ ಪ್ರಯೋಗಿಸಲು ಎಸ್‌ಐಟಿ ಮುಂದಾಗಿದೆ.

ಭವಾನಿ ಮೇಲೆ ‘ಅಸಹಕಾರ’ ಅಸ್ತ್ರ

  • ವಿಚಾರಣೆಗೆ ಹಾಜರಾಗದೆ ಅಜ್ಞಾತವಾಗಿರೋ ಭವಾನಿ ರೇವಣ್ಣ
  • ಹಾಜರಾಗ್ತಾರೆ, ಉತ್ತರ ಕೊಡ್ತಾರೆ ಅಂತಿರೋ ಮಹಿಳಾ ವಕೀಲರು
  • 7 ಗಂಟೆಗಳ ಕಾಲ ಕಾದರೂ ಭವಾನಿ ಬಾರದ ಬಗ್ಗೆ SIT ರಿಪೋರ್ಟ್
  • ಭವಾನಿ ವಿರುದ್ಧ ‘ಅಸಹಕಾರ’ ಅಸ್ತ್ರ ಪ್ರಯೋಗಕ್ಕೆ ಎಸ್​ಐಟಿ ಪ್ಲಾನ್​
  • ಭವಾನಿ ರೇವಣ್ಣ ಅತ್ತ ಹಾಸನದಲ್ಲೂ ಇಲ್ಲ, ಬೆಂಗಳೂರಿನಲ್ಲೂ ಇಲ್ಲ
  • ಮೈಸೂರಿನಲ್ಲಿ ಇರೋ ಬಗ್ಗೆ ಶಂಕೆ ಹಿನ್ನೆಲೆ ಅಧಿಕಾರಿಗಳಿಂದ ನಿಗಾ
  • SITಯಿಂದ ತಪ್ಪಿಸಿಕೊಳ್ಳೋಕೆ ಭವಾನಿಗೆ ಇರೋದು ಒಂದೇ ಚಾನ್ಸ್
  • ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗೋ ಸಾಧ್ಯತೆ
  • ಜಾಮೀನು ನಿರಾಕರಿಸಲ್ಪಟ್ಟರೆ ಬಂಧನವಾಗೋದು ಅನಿವಾರ್ಯ
  • ಎಸ್​ಐಟಿ ಮುಂದೆ ಶರಣಾಗ್ತಾರಾ? ಹೈಕೋರ್ಟ್ ಮೆಟ್ಟಿಲೇರ್ತಾರಾ?

ಭವಾನಿ ರೇವಣ್ಣ ವಿರುದ್ಧ ಜಾರಿಯಾಗುತ್ತಾ ಅರೆಸ್ಟ್ ವಾರೆಂಟ್?

ಎಸ್‌ಐಟಿ ಅಧಿಕಾರಿಗಳ ಕಣ್ಣಿಂದ ತಪ್ಪಿಸಿಕೊಂಡಿರೋ ಭವಾನಿ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗುವ ಸಾಧ್ಯತೆ ಇದೆ. ನಾಲ್ಕು ವಿಶೇಷ ತಂಡ ರಚನೆ ಮಾಡಿ ಭವಾನಿಗಾಗಿ ಎಸ್‌ಐಟಿ ಸರ್ಚಿಂಗ್ ನಡೆಸ್ತಿದೆ.

ಇದನ್ನೂ ಓದಿ: ವಿಶ್ವಕಪ್​​​ನ ಮೊದಲ ಪಂದ್ಯದಲ್ಲೇ ಅಮೆರಿಕ ಸೆನ್ಸೇಷನ್.. ಭಾರತಕ್ಕೆ ಎಚ್ಚರಿಕೆ ಕೊಟ್ಟ ಆ್ಯರೋನ್ ಜೇನ್ಸ್​

3 ಜಿಲ್ಲೆ, 4 ತಂಡದ ಸರ್ಚಿಂಗ್

  • ಬೆಂಗಳೂರು, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಭವಾನಿಗಾಗಿ ಶೋಧ
  • ಮೂರೂ ಜಿಲ್ಲೆಗಳಲ್ಲಿ ಬೀಡು ಬಿಟ್ಟು ಮೂರು ತಂಡಗಳಿಂದ ಹುಡುಕಾಟ
  • ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್
  • ಭವಾನಿ ರೇವಣ್ಣ ಮೊಬೈಲ್ ಟ್ರ್ಯಾಕ್ ಮಾಡುತ್ತಿರುವ ಟೆಕ್ನಿಕಲ್ ಟೀಂ
  • ಟವರ್ ಡಂಪ್ ಲೊಕೇಷನ್, ಸಿಡಿಆರ್ ಪರಿಶೀಲನೆ ಮಾಡ್ತಿರೋ ಟೀಂ
  • ಒಂದ್ವೇಳೆ ಭವಾನಿ ಪತ್ತೆಯಾಗದಿದ್ರೆ ಅರೆಸ್ಟ್ ವಾರೆಂಟ್ ಜಾರಿ ಸಾಧ್ಯತೆ

ಭವಾನಿ ಸಿಕ್ಕ ತಕ್ಷಣ ಬಂಧನ ಎಂದ ಗೃಹ ಸಚಿವ ಡಾ.ಜಿ ಪರಮೇಶ್ವರ್

ಭವಾನಿ ರೇವಣ್ಣ ಬಂಧನ ಬಹುತೇಕ ಖಚಿತ ಅಂತ ಗೃಹ ಸಚಿವರೇ ಸುಳಿವು ಕೊಟ್ಟಿದ್ದಾರೆ. ಭವಾನಿ ಎಲ್ಲಿದ್ದಾರೋ ಗೊತ್ತಿಲ್ಲ. ಸಿಕ್ಕಿದ ತಕ್ಷಣವೇ ಅರೆಸ್ಟ್‌ ಮಾಡ್ತಾರೆ ಅಂತ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಪ್ರಜ್ವಲ್ ಮಾಡಿದ ಘನಕಾರ್ಯಕ್ಕೆ ಇಡೀ ಮನೆಮಂದಿಯೇ ತಲೆ ತಗ್ಗಿಸುವಂತಾಗಿದೆ. ಈ ಮಧ್ಯೆ ರೇವಣ್ಣ ಬಳಿಕ ಭವಾನಿಗೂ ಬಂಧನದ ಭೀತಿ ಎದುರಾಗಿದೆ. ಆದ್ರೆ, ಇಂದಿನ ಬೆಳವಣಿಗೆ ಮೇಲೆ ಅರೆಸ್ಟ್ ಆಗ್ತಾರಾ? ಇಲ್ವಾ ಅನ್ನೋದು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಲ್ಲೂ ಇಲ್ಲ, ಇಲ್ಲೂ ಇಲ್ಲ.. SIT ಕೈಗೆ ಸಿಗದ ಭವಾನಿ ರೇವಣ್ಣ ಎಲ್ಲಿ? 3 ಜಿಲ್ಲೆ 4 ತಂಡದಿಂದ ಹುಡುಕಾಟ.. ಸಿಕ್ಕರೆ ಮಾತ್ರ..

https://newsfirstlive.com/wp-content/uploads/2024/05/bhavani-revanna-1-1.jpg

Load More