newsfirstkannada.com

ಕಾದು ಕಾದು ಕೊನೆಗೂ ಅರೆಸ್ಟ್​ ಮಾಡಿದ SIT ಅಧಿಕಾರಿಗಳು; ರೇವಣ್ಣ ಸಿಕ್ಕಿಬಿದ್ದಿದ್ದೇ ರೋಚಕ!

Share :

Published May 4, 2024 at 9:52pm

    ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ವಶಕ್ಕೆ

    ಮತ್ತೊಂದೆಡೆ ರೇವಣ್ಣಗಾಗಿ ಕಾದು ಕುಳಿತಿದ್ದ ಎಸ್​ಐಟಿ

    ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರೇವಣ್ಣಗೆ ಶಾಕ್

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸುತ್ತಿದ್ದಂತೆ ಮಾಜಿ ಸಚಿವ ಹೆಚ್​.ಡಿ ರೇವಣ್ಣರನ್ನ ಎಸ್​ಐಟಿ ವಶಕ್ಕೆ ಪಡೆದಿದೆ. ಸಂಜೆ ಹೆಚ್​.ಡಿ ರೇವಣ್ಣರನ್ನ ಎಸ್​ಐಟಿ ವಶಕ್ಕೆ ಪಡೆಯುವವರೆಗೂ ಬೆಳಗ್ಗೆಯಿಂದಲೂ ಭಾರೀ ಹಂಗಾಮ ನಡೆಯಿತು.

ಪ್ರಜ್ವಲ್​ ರೇವಣ್ಣ ಅವರಿಂದ ದೌರ್ಜನ್ಯಕ್ಕೊಳಗಾದ ಪ್ರಕರಣದಲ್ಲಿ ಸಂತ್ರಸ್ಥೆಯಾಗಿರುವ ಮಹಿಳೆ ಕಿಡ್ನ್ಯಾಪ್​​​ ಕೇಸ್​ನಿಂದ ಇವತ್ತು ಇಡೀ ದಿನ ನಡೆದಿದ್ದು ಹಂಗಾಮ. ಒಂದು ಕಡೆ ಈಗಾಗಲೇ ಈ ಪ್ರಕರಣದ ಎ2 ಆರೋಪಿ ಬಂಧನವಾಗಿತ್ತು. ಮತ್ತೊಂದೆಡೆ ಪ್ರಕರಣದ ಎ1 ಆರೋಪಿ ಹೆಚ್​​.ಡಿ ರೇವಣ್ಣ ಅವರ ಬಂಧನವಾಗುವ ಸಾಧ್ಯತೆ ಇತ್ತು. ವಿಚಾರಣಗೆ ಇವತ್ತು ಸಂಜೆ 5.30ರ ಒಳಗೆ ಎಸ್​ಐಟಿ ಮುಂದೆ ಅವರು ಹಾಜರಾಗಲೇ ಬೇಕಿತ್ತು. ಆದರೆ, ಇವೆಲ್ಲದರ ನಡುವೆ ರೇವಣ್ಣ ಅವರ ನಿರೀಕ್ಷಣಾ ಜಾಮೀನು ವಿಚಾರಣೆ ಕೋರ್ಟ್​​ನಲ್ಲಿ ನಡೆಯುತ್ತಿತ್ತು. ಬೆಳಗ್ಗೆ ಆರಂಭವಾದ ವಿಚಾರಣೆ ಸ್ಪೆಷಲ್​ ಪಬ್ಲಿಕ್​ ಪ್ರಾಸಿಕ್ಯೂಟರ್​ ಜಗದೀಶ್​ ಅವರು ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದರು. ಇದರಿಂದಾಗಿ ವಿಚಾರಣೆ ಮಧ್ಯಾಹ್ನದ ವರೆಗೂ ಮುಂದೂಡಲಾಗಿತ್ತು.

ಕೋರ್ಟ್​ನಲ್ಲಿ ಆಗಿದ್ದೇನು?

ಮಧ್ಯಾಹ್ನ ಮತ್ತೆ ಆರಂಭವಾದ ವಿಚಾರಣೆಯಲ್ಲಿ ಎರೆಡು ಕಡೆಯ ವಕೀಲರು ಅತ್ಯಂತ ಪ್ರಬಲವಾಗಿ ತಮ್ಮ ವಾದಗಳನ್ನ ಮಂಡಿಸಿದರು. ಎಲ್ಲವನ್ನೂ ಆಲಿಸಿದಿ ನ್ಯಾಯಾಧೀಶರಾದ ಅವರು ಹೆಚ್​​.ಡಿ.ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಇದಕ್ಕಾಗಿಯೇ ಕಾದು ಕುಳಿತಿದ್ದ ಎಸ್​​ಐಟಿ ಅಧಿಕಾರಿಗಳು ಸೀದಾ ತೆರಳಿದ್ದು, ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ ಅವರ ಮನೆಗೆ. ಅಲ್ಲಿ ಮತ್ತೊಂದು ರೀತಿಯ ಹಂಗಾಮ ನಡೆಯಿತು. ಅಧಿಕಾರಿಗಳಿಗೆ ಹೆಚ್​​.ಡಿ ರೇವಣ್ಣ ಅಲ್ಲಿಯೇ ಇರುವುದು ಖಾತ್ರಿಯಾಗಿತ್ತು. ಹಾಗಾಗಿ ಮಾಜಿ ಪ್ರಧಾನಿಗಳ ಮನೆ ಆವರಣ ಪ್ರವೇಶಿಸಿ ಬಾಗಿಲು ಬಡಿದರು. ಮನೆಯೊಳಗೆ ಇದ್ದ ರೇವಣ್ಣ ಹೊರ ಬರಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೂ, ಇವತ್ತು ವಶಕ್ಕೆ ತೆಗೆದಕೊಂಡ ಬಳಿಕವೇ ತೆರಳುವುದಾಗಿ ತೀರ್ಮಾನಿಸಿದ್ದ ಎಸ್​ಐಟಿ ಅಧಿಕಾರಿಗಳು ರೇವಣ್ಣ ಹೊರ ಬರುವವರೆಗೂ ಕಾದರು.

ಕೊನೆಗೂ ವಿಧಿಯಿಲ್ಲದೇ ಮಾಜಿ ಸಚಿವ ರೇವಣ್ಣ ಮಾಜಿ ಪ್ರಧಾನಿಯವರು ಪದ್ಮನಾಭನಗರದ ಮನೆಯಿಂದ ಹೊರಬರಲೇ ಬೇಕಾಯಿತು. ಕೂಡಲೇ ರೇವಣ್ಣ ಅವರನ್ನು ವಶಕ್ಕೆ ತೆಗೆದುಕೊಂಡ ಎಸ್​ಐಟಿ ಅಧಿಕಾರಿಗಳು ಅವರನ್ನ ಸಿಐಡಿ ಕಚೇರಿಗೆ ವಿಚಾರಣೆಗಾಗಿ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋದರು.

ಇದನ್ನೂ ಓದಿ: ಹೆಚ್​​​.ಡಿ ರೇವಣ್ಣ ಅರೆಸ್ಟ್​ ಬೆನ್ನಲ್ಲೇ ಆಪ್ತರ ಜೊತೆ ಕುಮಾರಸ್ವಾಮಿ ರಹಸ್ಯ ಮಾತುಕತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾದು ಕಾದು ಕೊನೆಗೂ ಅರೆಸ್ಟ್​ ಮಾಡಿದ SIT ಅಧಿಕಾರಿಗಳು; ರೇವಣ್ಣ ಸಿಕ್ಕಿಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2023/09/HD-Revanna-1.jpg

Load More