newsfirstkannada.com

1818ನೇ ಇಸವಿಯ ಸೀತಾರಾಮ ನಾಣ್ಯ ಪತ್ತೆ.. ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿಗೂ ತಿಳಿದಿತ್ತಾ ರಾಮನ ಮಹಿಮೆ?

Share :

Published January 19, 2024 at 1:01pm

    ನಾಣ್ಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಚಿತ್ರ

    ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿಗೆ ಸೇರಿದ ನಾಣ್ಯ

    ನಾಣ್ಯವನ್ನ ರಕ್ಷಣೆ ಮಾಡಿ ಪೂಜೆ ಮಾಡಿಕೊಂಡು ಬರುತ್ತಿದೆ ಈ ಕುಟುಂಬ

ಚಿಕ್ಕಮಗಳೂರು: ಬ್ರಿಟಿಷ್ ಈಸ್ಟ್​ ಇಂಡಿಯಾ ಕಂಪನಿಗೂ ಸೀತಾ ರಾಮನ ಬಗ್ಗೆ ತಿಳಿದಿತ್ತಾ? ಆ ಕಾಲದ ರಾಮಸೀತಾ ನಾಣ್ಯ ನೋಡಿದ್ದೀರಾ? ರಾಮ, ಸೀತೆ, ಲಕ್ಷ್ಮಣ, ಹನುಮ ಇರುವ ಹಳೆಯ ಕಾಲದ ನಾಣ್ಯವೊಂದು ಪತ್ತೆಯಾಗಿದೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸುನೀಲ್ ಎಂಬುವರ ಮನೆಯಲ್ಲಿ ಈ ನಾಣ್ಯ ಸಿಕ್ಕಿದೆ. ಇಂದಿಗೂ ನಾಣ್ಯಕ್ಕೆ ಪೂಜೆ ನಡೆಯುತ್ತಿದೆ.

1818ನೇ ಇಸವಿಯ ರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನ ನಾಣ್ಯ ಇದಾಗಿದ್ದು, ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿ ಆಡಳಿತದ ನಾಣ್ಯವಾಗಿದೆ.

ನಾಣ್ಯದ ಒಂದು ಭಾಗದಲ್ಲಿ ರಾಮಸೀತೆಯ ಭಾವಚಿತ್ರವಿದ್ದು, ಮತ್ತೊಂದು ಭಾಗದಲ್ಲಿ ಯಕೆ ಆಫ್ ಅಣ್ಣ ಎಂದು ನಮೂದಿಸಲಾಗಿದೆ.

ಸುನೀಲ್ ಕುಟುಂಬ ಅನಾದಿ ಕಾಲದಿಂದಲೂ ನಾಣ್ಯವನ್ನ ರಕ್ಷಣೆ ಮಾಡಿ ಪೂಜೆ ಮಾಡಿಕೊಂಡು ಬರರುತ್ತಿದ್ದಾರೆ. ಹಾಗಾಗಿ ಆ ನಾಣ್ಯಕ್ಕೆ ಸುಮಾರು 206 ವರ್ಷವಾಗಿದೆ.

50 ಗ್ರಾಂ ತೂಕವಿರುವ ಈ ನಾಣ್ಯ ಇಂದಿಗೂ ತನ್ನ ಹೊಳಪನ್ನ ಕಳೆದುಕೊಂಡಿಲ್ಲ ಎಂಬುದೇ ಅಚ್ಚರಿಯ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1818ನೇ ಇಸವಿಯ ಸೀತಾರಾಮ ನಾಣ್ಯ ಪತ್ತೆ.. ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿಗೂ ತಿಳಿದಿತ್ತಾ ರಾಮನ ಮಹಿಮೆ?

https://newsfirstlive.com/wp-content/uploads/2024/01/rama-Coin.jpg

Load More