Advertisment

ಧಾರಾಕಾರವಾಗಿ ಸುರಿಯುತ್ತಿರೋ ಮಳೆ, 6 ಜನ ಸಾವು.. ಭೂಕುಸಿತದಿಂದ ಸಿಲುಕಿಕೊಂಡ 1,500 ಪ್ರವಾಸಿಗರು

author-image
Bheemappa
Updated On
ಧಾರಾಕಾರವಾಗಿ ಸುರಿಯುತ್ತಿರೋ ಮಳೆ, 6 ಜನ ಸಾವು.. ಭೂಕುಸಿತದಿಂದ ಸಿಲುಕಿಕೊಂಡ 1,500 ಪ್ರವಾಸಿಗರು
Advertisment
  • ನಾಪತ್ತೆ ಆದ ವ್ಯಕ್ತಿಗಳಿಗಾಗಿ ಹುಡುಕಾಡುತ್ತಿರೋ ರಕ್ಷಣೆ ಪಡೆ
  • ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಆತಂಕ
  • ಹವಾಮಾನ ವೈಪರೀತ್ಯದಿಂದ ಏರ್‌ಲಿಫ್ಟ್‌ ಸಾಧ್ಯವಾಗುತ್ತಿಲ್ಲ

ಗ್ಯಾಂಗ್ಟಾಕ್: ಸಿಕ್ಕಿಂ ರಾಜ್ಯದಲ್ಲಿ ಧಾರಾಕಾರ ಮಳೆಯಿಂದ 6 ಜನರು ಮೃತಪಟ್ಟಿದ್ದು ಕೆಲವರು ಕಾಣೆಯಾಗಿದ್ದಾರೆ. ಅಲ್ಲದೇ ಭೂಕುಸಿತದಿಂದ 1,500 ಪ್ರವಾಸಿಗರು ಸಿಲುಕಿಕೊಂಡಿರುವ ಆಘಾತಕಾರಿ ಘಟನೆಯು ನಡೆದಿದೆ.

Advertisment

publive-image

ಉತ್ತರ ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಭೂಕುಸಿತಗಳು ಉಂಟಾಗಿ ಸಾವುನೋವುಗಳು ಸಂಭವಿಸಿವೆ. ಇಲ್ಲಿವರೆಗೆ ಧಾರಾಕಾರ ಮಳೆ ಹಾಗೂ ಭೂಕುಸಿತದಿಂದ 6 ಜನರು ಉಸಿರು ಚೆಲ್ಲಿದ್ದಾರೆ. ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು ಒಬ್ಬರು ತೀವ್ರವಾಗಿ ಗಾಯಗೊಂಡಿರುವುದು ಗೊತ್ತಾಗಿದೆ. ಅಲ್ಲದೇ ಬಂಗಾಳದಿಂದ ಬಂದ 1,500 ಪ್ರವಾಸಿಗರು ಲಾಚುಂಗ್ ಮತ್ತು ಚುಂತಾಂಗ್‌ನಲ್ಲಿ ಸಿಲುಕಿಕೊಂಡಿರುವುದು ವರದಿಯಾಗಿದೆ. ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದರಿಂದ ಕಾರು ಬೈಕ್​ಗಳ ಮೇಲೆ ಮಣ್ಣು ಬಿದ್ದು ನಾಶವಾಗಿವೆ. ರಸ್ತೆಗಳ ಸಂಪರ್ಕ ಕಡಿತವಾಗಿದ್ದು ಮತ, ಕರೆಂಟ್ ಕಂಬಗಳೆಲ್ಲ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಇಲ್ಲವಾಗಿದೆ.

publive-image

ತೀಸ್ತಾ ನದಿಯ ನೀರಿನ ಮಟ್ಟವು ಅಪಾಯದ ರೇಖೆ ಮೀರಿ ಹರಿಯುತ್ತಿದ್ದು ರಸ್ತೆಗಳ ಸಂಪರ್ಕ ಕಡಿತವಾಗಿದೆ. ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಗ್ಯಾಂಗ್ಟಾಕ್ ನಡುವೆ ಸಂಚರಿಸದಂತೆ ಆಗಿದೆ. ಉತ್ತರ ಸಿಕ್ಕಿಂನಲ್ಲಿ ರಾತ್ರಿಯವರೆಗೆ 223 ಮಿಲಿ ಮೀಟರ್ ಮತ್ತು ದಕ್ಷಿಣ ಸಿಕ್ಕಿಂನಲ್ಲಿ 120 ಮಿ.ಮೀ.ನಷ್ಟು ವರುಣ ಆರ್ಭಟ ಮಾಡಿದ್ದಾನೆ. ಮನೆ-ಮಠ ಕಳೆದುಕೊಂಡ ಕೆಲವು ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಜನರನ್ನು ಕಾಪಾಡಲು ರಕ್ಷಣೆ ಇಲಾಖೆ ಮುಂದಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದ ಏರ್‌ಲಿಫ್ಟ್‌ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರವಾಸಿಗರನ್ನು ರಕ್ಷಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ರಕ್ಷಣೆ ಪಡೆಗಳು ಹರಸಾಹಸಪಡುತ್ತಿವೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment