/newsfirstlive-kannada/media/post_attachments/wp-content/uploads/2025/01/EARTHQUIKE.jpg)
ನೇಪಾಳ ಗಡಿಯ ಸಮೀಪ ಟಿಬೆಟಿಯನ್ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 126ಕ್ಕೆ ಏರಿಕೆ ಆಗಿದೆ. 130ಕ್ಕೂ ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಬೆಳಗ್ಗೆ ಟಿಬೆಟ್ ಮತ್ತು ನೇಪಾಳದಲ್ಲಿ ಭೂಕಂಪ ಸಂಭವಿಸಿದೆ. ಭಾರತ ಮತ್ತು ಬಾಂಗ್ಲಾದೇಶದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಕಂಪದ ಕೇಂದ್ರ ಬಿಂದು ಟಿಬೆಟ್. ಅಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ 6 ಕೆಂಪು ಉಗ್ರರು ಶರಣಾಗತಿ.. ಸರ್ಕಾರದ ಮುಂದಿಟ್ಟಿರುವ 10 ಬೇಡಿಕೆಗಳು ಏನೇನು?
ಶಿಗಾಜ್ ನಗರದ ಡಿಂಗ್ರಿ ಕೌಂಟಿಯಲ್ಲಿ ಭೂಕಂಪ ಸಂಭವಿಸಿದೆ. ಆದರೆ ಚೀನಾದಲ್ಲಿ ಭೂಕಂಪದ ತೀವ್ರತೆ 6.8ರಷ್ಟಿತ್ತು. 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. USGS ವರದಿಯ ಪ್ರಕಾರ ಬೆಳಗ್ಗೆ 7 ಗಂಟೆಗೆ ಭೂಮಿ ಕಂಪಿಸಿದೆ. ಅಲ್ಲಿಂದ ಒಂದು ಗಂಟೆಯೊಳಗೆ ಕನಿಷ್ಠ 4 ರಿಂದ 5ರ ತೀವ್ರತೆಯಲ್ಲಿ ಆರು ಬಾರಿ ಭೂಕಂಪನ ಆಗಿರುವ ಬಗ್ಗೆ ದಾಖಲಾಗಿದೆ. ಬೆಳಗ್ಗೆ 6:52ರ ಸುಮಾರಿಗೆ ನೇಪಾಳದ ಕಠ್ಮಂಡು, ಧಾಡಿಂಗ್, ಸಿಂಧುಪಾಲ್‌ಚೌಕ್, ಕಾವ್ರೆ, ಮಕ್ವಾನ್‌ಪುರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕಂಪನ ಆಗಿದೆ. ಉತ್ತರ ಭಾರತದ ಹಲವು ನಗರಗಳಲ್ಲಿ ಭೂಕಂಪನದ ಅನುಭವ ಆಗಿದೆ.
ಭೂಕಂಪಗಳು ಹೇಗೆ ಸಂಭವಿಸುತ್ತವೆ?
ದೆಹಲಿ ಎನ್‌ಸಿಆರ್‌ನಲ್ಲಿ ನಿರಂತರವಾಗಿ ಭೂಕಂಪಗಳು ಸಂಭವಿಸುತ್ತಿವೆ. ನಮ್ಮ ಭೂಮಿ ಏಳು ಟೆಕ್ಟೋನಿಕ್ ಪ್ಲೇಟ್‌ಗಳಿಂದ ಮಾಡಲ್ಪಟ್ಟಿದೆ. ಭೂಮಿಯ ಒಳಭಾಗದಲ್ಲಿ ಎಲ್ಲಿಯಾದರೂ ಹಠಾತ್ ಅಡಚಣೆ ಉಂಟಾದಾಗ ಮತ್ತು ಕಂಪನಗಳು ಮೇಲ್ಮೈಯನ್ನು ತಲುಪಿದಾಗ ಭೂಕಂಪ ಎಂದು ಕರೆಯಲಾಗುತ್ತದೆ. ಭೂಕಂಪದ ತೀವ್ರತೆಯಿಂದಾಗಿ ಭಾರೀ ಪ್ರಮಾಣದ ನಾಶದ ಅಪಾಯವಿದೆ.
ಇದನ್ನೂ ಓದಿ:ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ಆಯ್ಕೆ; ಯಾರು ಇವರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ