/newsfirstlive-kannada/media/post_attachments/wp-content/uploads/2024/03/mukesh-ambani-2-1.jpg)
ಭಾರತೀಯ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ. ಟಾಪ್​ 10 ಪಟ್ಟಿಯಲ್ಲಿರುವ ಪ್ರಮುಖ 6 ಕಂಪನಿಗಳು ಕಳೆದ ಒಂದು ವಾರದಲ್ಲಿ 1.55 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿವೆ. ಅದರಲ್ಲೂ ಭಾರತದ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿ ಎಂದೇ ಹೆಸರು ಮಾಡಿರುವ ಮುಖೇಶ್ ಅಂಬಾನಿಯವರ ರಿಲಯನ್ಸ್ ಕಂಪನಿ ಕಳೆದ ಒಂದು ವಾರದಲ್ಲಿ 74,563.37 ಕೋಟಿ ರೂಪಾಯಿಯಷ್ಟು ಭಾರೀ ನಷ್ಟವನ್ನು ಅನುಭವಿಸಿದೆ. ಇದೇ ಕಳೆದ ಒಂದು ವಾರದಲ್ಲಿ ಟಾಟಾ ಕನ್ಸಲ್ಟನ್ಸಿ ಅತಿ ಹೆಚ್ಚು ಲಾಭ ಗಳಿಸಿದ ಕಂಪನಿ ಎಂದು ಗುರುತಿಸಿಕೊಂಡಿದೆ. ಟಾಟಾ ಕನ್ಸಲಟ್ಟನ್ಸಿ 57,744 ಕೋಟಿ ರೂಪಾಯಿಯಷ್ಟು ಲಾಭ ಗಳಿಸಿದೆ ಎಂದು ಹೇಳಲಾಗಿದೆ.
ಈ ವಾರದಲ್ಲಿ ಭಾರತದ ಹಲವು ದೈತ್ಯ ಕಂಪನಿಗಳ ಶೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ. ಬಾಂಬೆ ಸ್ಟಾಕ್ ಎಕ್ಸ್​ಚೆಂಚ್ (ಬಿಇಎಸ್) 237.8 ಪಾಯಿಂಟ್​ನಷ್ಟು ಕುಸಿದಿದ್ದು ಇದು ಭಾರತದ ಪ್ರಮುಖ 6 ಕಂಪನಿಗಳಿಗೆ ದೊಡ್ಡ ಹೊಡೆತ ತಂದಿಟ್ಟಿದೆ.
ಮಾರುಕಟ್ಟೆಯ ವರದಿಗಳ ಪ್ರಕಾರ ರಿಲಯನ್ಸ್ ಇಂಡಸ್ಟ್ರಿ, ಭಾರತಿ ಏರ್​ಟೆಲ್, ಐಸಿಐಸಿಐ ಬ್ಯಾಂಕ್, ಐಟಿಸಿ ಹಿಂದೂಸ್ತಾನ್​ ಯುನಿಲಿವರ್​ ಮತ್ತು ಲೈಫ್​ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಮಾರುಕಟ್ಟೆಯ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇತ್ತ ಟಾಟಾ ಕನ್ಸಲ್ಟನ್ಸಿ ಸರ್ವಿಸ್, ಹೆಚ್​​ಡಿಎಫ್​ಸಿ ಬ್ಯಾಂಕ್, ಇನ್ಫೊಸೀಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆಯ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಅಂಬಾನಿ, ಅದಾನಿ ಅಲ್ಲವೇ ಅಲ್ಲ.. ಭಾರತದ ನಂ.1 ಕೊಡುಗೈ ದಾನಿ ಯಾರು ಗೊತ್ತಾ? ಎಷ್ಟು ಸಾವಿರ ಕೋಟಿ?
ಯಾವ ಯಾವ ಕಂಪನಿಗಳಿಗೆ ಎಷ್ಟು ಸಾವಿರ ಕೋಟಿ ನಷ್ಟವಾಗಿದೆ ಎಂಬುದನ್ನು ವಿವರವಾಗಿ ನೋಡುವುದಾದ್ರೆ. ಈಗಾಗಲೇ ಹೇಳಿದಂತೆ ರಿಲಯನ್ಸ್ ಇಂಡಸ್ಟ್ರಿ 74,563.37 ಕೋಟಿ ರೂಪಾಯಿಯಷ್ಟು ನಷ್ಟ ಕಂಡಿದ್ದರೆ. ಏರ್​ಟೆಲ್​ 26,274 ಕೋಟಿ, ಐಸಿಐಸಿಐ ಬ್ಯಾಂಕ್ 22,254 ಕೋಟಿ, ಐಟಿಸಿ 15,449 ಕೋಟಿ, ಎಲ್​ಐಸಿ 9,930 ಕೋಟಿ ಹಾಗೂ ಹಿಂದೂಸ್ತಾನ್ ಯುನಿಲಿವರ್ 7,248 ಕೋಟಿ ರೂಪಾಯಿಯಷ್ಟು ನಷ್ಟ ಕಂಡಿವೆ.
ಇದನ್ನೂ ಓದಿ:ನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದ್ದರೆ ನೀವು ಲಕ್ಷ, ಲಕ್ಷ ಎಣಿಸಬಹುದು.. ಹೇಗೆ ಗೊತ್ತಾ?
ಇನ್ನು ಇದೇ ಒಂದು ವಾರದಲ್ಲಿ ಯಾವೆಲ್ಲಾ ಕಂಪನಿಗಳು ಅತಿಹೆಚ್ಚು ಲಾಭಗಳನ್ನು ಕಂಡಿವೆ ಎಂದು ನೋಡುವುದಾದ್ರೆ. ಟಿಸಿಎಸ್​ 57,744 ಕೋಟಿ ರೂಪಾಯಿ, ಇನ್ಫೊಸೀಸ್ 28,838 ಕೋಟಿ, ಎಸ್​ಬಿಐ 19,812 ಕೋಟಿ ಹಾಗೂ ಹೆಚ್​​ಡಿಎಫ್​ಸಿ ಬ್ಯಾಂಕ್ 14,678 ಕೋಟಿ ರೂಪಾಯಿಯಷ್ಟು ಲಾಭ ಗಳಿಸಿವೆ.
ಇದೆಲ್ಲದರ ಆಚೆಯೂ ಕೂಡ ರಿಲಯನ್ಸ್ ಇಂಡಸ್ಟ್ರಿ ದೇಶದ ಅತಿ ಹೆಚ್ಚು ಮೌಲ್ಯದ ಉದ್ಯಮವೆಂದೇ ಗುರುತಿಸಿಕೊಂಡಿದ್ದು. ಅದರ ಬಳಿಕ ಟಿಸಿಎಸ್​, ಹೆಚ್​​ಡಿಎಫ್​ಸಿ ಬ್ಯಾಂಕ್ ಸೇರಿದಂತೆ ಹಲವು ವಲಯಗಳ ಮಾರುಕಟ್ಟೆಯ ಮೌಲ್ಯ ಇನ್ನೂ ಗಟ್ಟಿಯಾಗಿಯೇ ಉಳಿದುಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us