ನಕ್ಸಲರಿಗೆ 14 ದಿನ ನ್ಯಾಯಾಂಗ ಬಂಧನ.. NIA ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಬಿಜೆಪಿ ಮೊರೆ

author-image
Bheemappa
Updated On
ನಕ್ಸಲರಿಗೆ 14 ದಿನ ನ್ಯಾಯಾಂಗ ಬಂಧನ.. NIA ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಬಿಜೆಪಿ ಮೊರೆ
Advertisment
  • ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಂವಿಧಾನ ಅಪ್ಪಿದ್ದ ನಕ್ಸಲರು
  • ನಕ್ಸಲರು ಶರಣಾದ ಒಂದೇ ದಿನದಲ್ಲಿ ₹3 ಲಕ್ಷ ಖಾತೆಗೆ ವರ್ಗಾವಣೆ
  • ಅನುಮತಿ ದೊರೆತ ಬಳಿಕ ಸರ್ಕಾರದ ಇನ್ನಷ್ಟು ವಿಶೇಷ ಸೌಲಭ್ಯ

ಪಶ್ಚಿಮ ಘಟ್ಟಗಳಲ್ಲಿ ಎರಡು ದಶಕದಿಂದ ಬೇರೂರಿದ್ದ 6 ನಕ್ಸಲರು ಸರ್ಕಾರದ ಮುಂದೆ ಶರಣಾಗಿದ್ದಾರೆ. ಶರಣಾದ ಎಲ್ಲರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಶರಣಾದ ಒಂದೇ ದಿನದಲ್ಲಿ ಮೂರು ಲಕ್ಷ ಪ್ಯಾಕೇಜ್ ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆ ಆಗಿದೆ. ಮತ್ತೊಂದು ಕಡೆ ಎನ್​ಐಎ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಇಲಾಖೆಗೆ ಬಿಜೆಪಿ ಮೊರೆ ಹೋಗುತ್ತಿದೆ.

ದೇಶದಲ್ಲಿ ರೆಡ್​ ಕಾರಿಡರ್​​​ ಖತಂ ಆಗುತ್ತಿದೆ. ಕರ್ನಾಟಕದಲ್ಲಿ ನಕ್ಸಲ್​ ಮುಕ್ತವಾಗುವ ಹೆಜ್ಜೆ ಇಟ್ಟಿದೆ. ಮೊನ್ನೆ ಕೆಂಪು ಉಗ್ರರ ಶರಣಾಗತಿ ಪ್ರಕ್ರಿಯೆ ಮುಗಿದಿದೆ. ಚಿಕ್ಕಮಗಳೂರಿನಲ್ಲಿನ ಶರಣಾಗತಿ ಪ್ರಕ್ರಿಯೆ ಅಂತಿಮವಾಗಿ ಬೆಂಗಳೂರಿನ ಸಿಎಂ ಕಚೇರಿಗೆ ಶಿಫ್ಟ್​​ ಆಯ್ತು. ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಂವಿಧಾನವನ್ನ ನಕ್ಸಲರು ಅಪ್ಪಿದರು. ಈಗ ನ್ಯಾಯದ ಕಾರ್ಯವಿಧಾನ ಆರಂಭವಾಗಿದೆ.

publive-image

ಆರು ನಕ್ಸಲರಿಗೆ 14 ದಿನಗಳ ನ್ಯಾಯಾಂಗ ಬಂಧನ!

ಶರಣಾಗತಿ ನಂತ್ರ ನ್ಯಾಯದ ಪ್ರಕ್ರಿಯೆ ಶುರುವಾಗಿದೆ. 6 ಜನ ನಕ್ಸಲರನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಎನ್‌ಐಎ ವಿಶೇಷ ಕೋರ್ಟ್​ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 6 ನಕ್ಸಲರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಒಟ್ಟು 14 ದಿನಗಳ ಕಾಲ ಅಂದ್ರೆ ಜನವರಿ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನ ಬೆನ್ನಲ್ಲೆ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಶರಣಾಗತಿ ಬಳಿಕ‌ ಕ್ರಮಗಳೇನು?

  • ಶರಣಾದ ನಕ್ಸಲರು ನಕ್ಸಲ್ ಚಟುವಟಿಕೆಯ ಮಾಹಿತಿ ನೀಡಬೇಕು
  • ಭೂಗತವಾಗಿರುವ ಸದಸ್ಯರ ಹೆಸರುಗಳನ್ನ ಬಹಿರಂಗಪಡಿಸಬೇಕು
  • ನಕ್ಸಲರು ಇನ್​ಕ್ಯಾಮರಾ ವಿಧಾನದಲ್ಲಿ ಹೇಳಿಕೆ ದಾಖಲಿಸಬೇಕು
  • ವರದಿ ತಯಾರಿಸಿ, ಜಿಲ್ಲಾ ಶರಣಾಗತಿ ಸಮಿತಿಯ ಮುಂದಿಡಬೇಕು
  • ರಾಜ್ಯ ಶರಣಾಗತಿ ಸಮಿತಿಗೆ ಅನುಮೋದನೆಗಾಗಿ ಕಳುಹಿಸಬೇಕು
  • ಅನುಮತಿ ದೊರೆತ ಬಳಿಕ ಸರ್ಕಾರದ ವಿಶೇಷ ಸೌಲಭ್ಯ ಸಿಗಲಿದೆ
  • ಶರಣಾಗತರಾದ ಸದಸ್ಯರ ಮೇಲೆ ಎರಡು ವರ್ಷಗಳ ಕಾಲ ನಿಗಾ
  • ರಾಜ್ಯ ಆಂತರಿಕ ಭದ್ರತಾ ಪಡೆ ಡಿವೈಎಸ್​​ಪಿ ಇಬ್ಬರು ಕಣ್ಣೀಡ್ತಾರೆ
  • ತಿಂಗಳಿಗೊಮ್ಮೆಯಂತೆ 2 ವರ್ಷದವರೆಗೆ ಸರ್ಕಾರಕ್ಕೆ ವರದಿ ಸಲ್ಲಿಕೆ

publive-image

ಇದನ್ನೂ ಓದಿ: ವಿಶ್ವಕಪ್​​ನಲ್ಲಿ ಧೋನಿನ ರನೌಟ್ ಮಾಡಿದ್ದ ಮಾರ್ಟಿನ್ ಗಪ್ಟಿಲ್ ಕ್ರಿಕೆಟ್​ಗೆ ವಿದಾಯ

ಇನ್ನು, ಸಂಪರ್ಕದಲ್ಲಿದ್ದ ಮತ್ತೋರ್ವ ನಕ್ಸಲನ ಮನವೊಲಿಕೆ ಯತ್ನ ನಡೆದಿದೆ. ಇತ್ತ ಶರಣಾಗತಿ ಬೆನ್ನಲ್ಲೆ ಮೊದಲ ಹಂತದ ಪ್ಯಾಕೇಜ್ ಹಣ ಘೋಷಣೆ ಆಗಿದೆ. ಜಿಲ್ಲಾಧಿಕಾರಿ ಖಾತೆಗೆ ಮೂರು ಲಕ್ಷ ಹಣ ವರ್ಗಾವಣೆಯಾಗಿದೆ. ಇನ್ನೊಂದು ಕಡೆ, ಶರಣಾಗತಿ ಆಗಿರುವ ನಕ್ಸಲರ ಬಳಿಯಿದ್ದ ಬಂದೂಕು ಎಲ್ಲಿ ಅನ್ನೋ ಪ್ರಶ್ನೆಗಳು ಎದ್ದಿವೆ. ಅದೇನೆ ಆದ್ರೂ ರಾಜ್ಯವು ನಕ್ಸಲ್​ ಮುಕ್ತವಾಗ್ತಿದೆ ಅನ್ನೋದೇ ಮುಖ್ಯ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment