ಜೈಲಿನಿಂದ ಎಸ್ಕೇಪ್ ಆದ್ರೂ ಬರೋಬ್ಬರಿ 6 ಸಾವಿರ ಕೈದಿಗಳು.. ಆಮೇಲೆ ಆಗಿದ್ದೇನು?

author-image
Gopal Kulkarni
Updated On
ಜೈಲಿನಿಂದ ಎಸ್ಕೇಪ್ ಆದ್ರೂ ಬರೋಬ್ಬರಿ 6 ಸಾವಿರ ಕೈದಿಗಳು.. ಆಮೇಲೆ ಆಗಿದ್ದೇನು?
Advertisment
  • ಜೈಲಿನಲ್ಲಿದ್ದ 6 ಸಾವಿರ ಕೈದಿಗಳು ಒಂದೇ ಸಮಯದಲ್ಲಿ ಪರಾರಿಯಾಗಿದ್ದು ಹೇಗೆ ?
  • ಇಲ್ಲಿ ನಡೆದಿರುವ ಆ ಒಂದು ಚುನಾವಣೆಯ ಫಲಿತಾಂಶ ಇಷ್ಟೆಲ್ಲಾ ಯಡವಟ್ಟು ಮಾಡ್ತಾ?
  • ಕ್ರಿಸ್​ಮಸ್ ದಿನವೇ ಜೈಲಿನಲ್ಲಿದ್ದ ಎಲ್ಲಾ ಕೈದಿಗಳು ಹೀಗೆ ಎಸ್ಕೇಪ್ ಆಗಲು ಕಾರಣವೇನು?

ಆಫ್ರಿಕಾದ​ ಒಂದು ದೇಶವಾದ ಮೊಜಾಂಬಿಕ್ ರಾಜಧಾನಿ ಮಾಪುಟೊದ ಸೆಂಟ್ರಲ್ ಜೈಲಿನಿಂದ ಸುಮಾರು 6 ಸಾವಿರ ಕೈದಿಗಳು ಎಸ್ಕೇಪ್ ಆದ ಘಟನೆ ನಡೆದಿದೆ. ಕ್ರಿಸ್​ಮಸ್ ದಿನವೇ ಇಂತಹದೊಂದು ದೊಡ್ಡ ಘಟನೆ ನಡೆದಿದ್ದು. ಎಸ್ಕೇಪ್ ಆದ ಕೈದಿಗಳನ್ನು ನೋಡಿಕೊಂಡು ನಿಲ್ಲುವಂತ ಅಸಹಾಯಕ ಪರಿಸ್ಥಿತಿಯಲ್ಲಿ ನಿಂತು ನೋಡುವಂತಾದ ಸನ್ನಿವೇಶ ಸಂಭವಿಸಿದೆ. ಇಲ್ಲಿ ನಡೆದ ಎಲೆಕ್ಷನ್​ ನಂತರ ದೇಶಾದ್ಯಂತ ದೊಡ್ಡ ದಂಗೆಗಳಾದವು. ಆ ಬೆಳವಣಿಗೆಯೇ ಈ 6 ಸಾವಿರ ಕೈದಿಗಳಿಗೆ ಎಸ್ಕೇಪ್ ಆಗಲು ದಾರಿಯಾಯ್ತು ಎಂದು ಮಾಪುಟದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇನ್ನು ಜೈಲಿನಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಕಾಲ್ತುಳಿತವು ಕೂಡ ಸಂಭವಿಸಿದ್ದು, ಇದರಲ್ಲಿ 33 ಜನರ ಪ್ರಾಣವನ್ನು ಕಳೆದುಕೊಂಡಿದ್ದಾರೆ 15 ಕೈದಿಗಳ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಮುಖ್ಯಸ್ಥ ಬರ್ನಾರ್ಡಿನೊ ರಫೆಲ್ ಹೇಳಿದ್ದಾರೆ.

publive-image

ಇನ್ನು ಜೈಲಿನಿಂದ ತಪ್ಪಿಸಿಕೊಂಡು ಹೋಗುವಾಗ ಕೈದಿಗಳು ಜೈಲಿನಲ್ಲಿ ದೊಡ್ಡ ದಾಂಧಲೆಯನ್ನೇ ನಡೆಸಿದ್ದಾರೆ.ಪೊಲೀಸರ ಕಾರುಗಳು, ಸ್ಟೇಷನ್​ನಲ್ಲಿನ ಕುರ್ಚಿ ಮೇಜುಗಳನ್ನು ಒಡೆದು ಹಾಕಿದ್ದಾರೆ. ಸಾರ್ವಜನಿಕರ ಆಸ್ತಿಪಾಸ್ತಿಗೂ ಕೂಡ ಹಾನಿಯನ್ನುಂಟು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 9 ರಂದು ಸಂವಿಧಾನ ಮಂಡಳಿಯು ಆಡಳಿತ ಪಕ್ಷವಾದ ಫ್ರೆಲಿಮೋ ಮತ್ತೊಂದು ಬಾರಿ ಗೆದ್ದಿರುವ ಸುದ್ದಿಯನ್ನು ಖಚಿತಪಡಿಸಿತು, ಅದರ ಬೆನ್ನಲ್ಲೆ ಇಂತಹದೊಂದು ಹಿಂಸಾಚಾರ ಸಂಭವಿಸಿ, ಜೈಲಿನಿಂದ ಬರೋಬ್ಬರಿ 6 ಸಾವಿರ ಕೈದಿಗಳು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ:₹30 ಲಕ್ಷ ಕೋಟಿ ಆಸ್ತಿ, 1000ಕ್ಕೂ ಹೆಚ್ಚು ಕುಟುಂಬ ಸದಸ್ಯರು; ಒಂದು ತೈಲ ರಾಷ್ಟ್ರವನ್ನೇ ಆಳುತ್ತಿದೆ ಈ ಕುಟುಂಬ!


">December 26, 2024

ಅತ್ಯಂತ ಹೈ ಸೆಕ್ಯೂರಿಟಿಯಿರುವ ಜೈಲು ಇದಾಗಿದ್ದು ಈ ಎಲ್ಲಾ ಬೆಳವಣಿಗಳು ಆದ ಮೇಲೆ ಕೆಲವು ಪ್ರತಿಭಟನಾಕಾರರು ರಾಜಧಾನಿಯಿಂದ 14 ಕಿಲೋ ಮೀಟರ್ ದೂರದಲ್ಲಿರುವ ಈ ಜೈಲಿಗೆ ನುಗ್ಗಿ ಕೈದಿಗಳನ್ನು ಸ್ವತಂತ್ರಗೊಳಿಸುತ್ತೇವೆ ಎಂದು ಆರ್ಭಿಟಿಸಿದ್ದಾರೆ. ಇದೇ ಸಮಯದಲ್ಲಿ ಕೆಲವು ಕೈದಿಗಳು ಜೈಲಿನ ಅಧಿಕಾರಿಗಳ ಬಳಿ ಇದ್ದ ಶಸ್ತ್ರಾಸ್ತ್ರವನ್ನು ಕಿತ್ತುಕೊಂಡು ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಹಾರಿ ಹೋಗಿದ್ದಾರೆ. ಇದೇ ಘಟನೆಯನ್ನು ಲಾಭವಾಗಿ ಬಳಸಿಕೊಂಡ ಪ್ರತಿಭಟನಾಕಾರರು ಜೈಲಿನ ಭದ್ರವಾದ ಗೋಡೆಯನ್ನು ಕೆಡವಿ ಬೀಳಿಸಿದ್ದಾರೆ ಇದು ಕೈದಿಗಳಿಗೆ ಎಸ್ಕೇಪ್ ಆಗಲು ಮತ್ತಷ್ಟು ಸಹಾಯ ಮಾಡಿತು ಎಂದು ಹೇಳಲಾಗಿದೆ. ಇನ್ನು ಹೀಗೆ ಎಸ್ಕೇಪ್ ಆಗಿರುವ ಕೈದಿಗಳಲ್ಲಿ 29 ಜನ ಭಯೋತ್ಪಾದಕರು ಕೂಡ ಸೇರಿಕೊಂಡಿದ್ದಾರೆ ಅದು ನಮ್ಮನ್ನು ಹೆಚ್ಚು ಚಿಂತಿತರನ್ನಾಗಿ ಮಾಡಿದೆ ಎಂದು ರಫೇಲ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಹಳೆಯ ಕಂಪನಿ ಯಾವುದು ಗೊತ್ತಾ? ಇದಕ್ಕಿದೆ 1400 ವರ್ಷಗಳ ಭವ್ಯ ಇತಿಹಾಸ!

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೈದಿಗಳು ಎಸ್ಕೇಪ್ ಆಗಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ಇದೇ ವಿಡಿಯೋ ಆಧಾರದ ಮೇಲೆ ಪರಾರಿಯಾಗಿರುವ ಕೈದಿಗಳನ್ನು ಮರಳಿ ಬಂಧಿಸಲು ನಿರ್ಧಾರಮಾಡಲಾಗಿದೆ. ಕೆಲವರು ಮನೆಗೆ ಹೋಗಿ ಅಡಗಿಕೊಂಡಿದ್ದಾರೆ. ಇನ್ನು ಕೆಲವರಿಗೆ ಆಗಿಲ್ಲ. ಅಂತವರನ್ನು ಈಗಾಗಲೇ ಬಂಧಿಸಲಾಗಿದೆ. ಅದರ ಜೊತೆಗೆ ಉಳಿದ ಕೈದಿಗಳಿಗೂ ಕೂಡ ಆದಷ್ಟು ಬೇಗ ಬಂದು ಶರಣಾಗಿರಿ, ಇಲ್ಲವಾದಲ್ಲಿ ನಾವೇ ಬಂದು ಬಂಧಿಸುತ್ತೇವೆ ಎಂದು ಪೊಲೀಸ್ ಇಲಾಖೆ ವಾರ್ನಿಂಗ್ ಕೊಟ್ಟಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment