ಭಾರೀ ಚಳಿ ಇರುತ್ತಿದ್ದ ಈ ಜಾಗದಲ್ಲಿ ಇದೆಂಥಾ ಬಿಸಿಲು! 132 ವರ್ಷಗಳ ಬಳಿಕ ಬೆಂದು ಹೋದ ಜನ!

author-image
Gopal Kulkarni
Updated On
ಭಾರೀ ಚಳಿ ಇರುತ್ತಿದ್ದ ಈ ಜಾಗದಲ್ಲಿ ಇದೆಂಥಾ ಬಿಸಿಲು! 132 ವರ್ಷಗಳ ಬಳಿಕ ಬೆಂದು ಹೋದ ಜನ!
Advertisment
  • ಚಳಿಯೂರಿನಲ್ಲೀಗ ಬಿಸಿಲ ಬೇಗೆಯ ರುದ್ರನರ್ತನ
  • ಬಿಸಿ ಗಾಳಿಗೆ ಬೆಂದು ಹೋಗಿರುವ ಕಾಶ್ಮೀರದ ಶ್ರೀನಗರ
  • 132 ವರ್ಷಗಳಲ್ಲಿಯೇ ಅತಿಹೆಚ್ಚು ತಾಪಮಾನ ದಾಖಲು

ಶ್ರೀನಗರ: ಉತ್ತರ ಭಾರತ ಅದರಲ್ಲೂ ಹಿಮಾಲಯಕ್ಕೆ ಅಂಟಿಕೊಂಡಿರುವ ಎಲ್ಲಾ ರಾಜ್ಯಗಳು ಅತಿಹೆಚ್ಚು ನಲುಗೋದು ಭೀಕರ ಚಳಿಗೆ, ಬೆನ್ನ ಹುರಿಯನ್ನೇ ಥರಗುಟ್ಟಿಸಿಬಿಡುವಷ್ಟು ಚಳಿಯ ತೀವ್ರತೆ ಅಲ್ಲಿರುತ್ತೆ.ಅದರಲ್ಲೂ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಬಿಸಿಲು ಅಂದ್ರೆ ಅಷ್ಟಕ್ಕಷ್ಟೆ. ಸದಾ ತಂಪಾದ ಗಾಳಿ, ಭೀಕರ ಹಿಮ, ಪತರಗುಟ್ಟಿಸುವಂತ ಕೊರೆವ ಚಳಿ ಇದಷ್ಟೇ ಅಭ್ಯಾಸವಾಗಿರುವ ಈ ಜಮ್ಮು ಕಾಶ್ಮೀರ ಶತಮಾನದ ಬಳಿಕ ಭೀಕರ ಬಿಸಿಗಾಳಿಗೆ ನಲುಗಿ ಹೋಗುತ್ತಿದೆ.

ಇದನ್ನೂ ಓದಿ: ಅಬ್ಬಾ.. ಕಳ್ಳತನಕ್ಕೆ ಬಂದವರು ಅಜ್ಜನ ಎರಡು ಕಿವಿಯೇ ಕತ್ತರಿಸಿಕೊಂಡು ಹೋದ್ರು; ಯಾಕೆ ಗೊತ್ತಾ? 

publive-image
132 ವರ್ಷಗಳ ಬಳಿಕ ಅತಿ ಹೆಚ್ಚು ತಾಪಮಾನ ದಾಖಲೆ
ಬರೋಬ್ಬರಿ 132 ವರ್ಷಗಳ ಬಳಿಕ ಶ್ರೀನಗರ ಎರಡನೇ ಬಾರಿ ಅತಿಹೆಚ್ಚು ಉಷ್ಣಾವಂಶ ಕಂಡಿದ್ದಕ್ಕೆ ಸಾಕ್ಷಿಯಾಗಿದೆ. ಶ್ರೀನಗರದಲ್ಲಿ ಅತಿ ಕಡಿಮೆ ತಾಪಮಾನ ಅಂದ್ರೆ 25.2 ಡಿಗ್ರಿ ಸೆಲ್ಸಿಯಸ್​ನಷ್ಟು 2021ರ ರಲ್ಲಿ ದಾಖಲಾಗಿತ್ತು. ಆದ್ರೆ ರವಿವಾರದಂದು ಅಂದ್ರೆ ಜುಲೈ 29 ರಂದು ಶ್ರೀನಗರದಲ್ಲಿ ಹಿಂದೆಂದೂ ಕಾಣದಷ್ಟು ಉಷ್ಣಾಂಶ ದಾಖಲಾಗಿದೆ. ಕನಿಷ್ಠ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಇದು ಕಳೆದ 25 ವರ್ಷಗಳಲ್ಲಿಯೇ ದಾಖಲಾದ ತಾಪಮಾನ ಎನ್ನುತ್ತಿದ್ದಾರೆ. ಆದ್ರೆ ಜುಲೈ ತಿಂಗಳಲ್ಲಿ ಅತಿಹೆಚ್ಚು ಉಷ್ಣಾಂಶವನ್ನು ಕಂಡಿದೆ ಶ್ರೀನಗರ, ಅದು 38 ಡಿಗ್ರಿಸೆಲ್ಸಿಯಷ್ಟನಷ್ಟು, ಶ್ರೀನಗರದ ಹವಾಮಾನದಲ್ಲಿ ಇಷ್ಟೊಂದು ತಾಪಮಾನ ಈ ಹಿಂದೆ ದಾಖಲಾಗಿದ್ದು 132 ವರ್ಷಗಳ ಹಿಂದೆ ಎಂದು ಹೇಳುತ್ತಿದೆ ಸ್ಥಳೀಯ ಹವಾಮಾನ ಇಲಾಖೆ
ಬೇಸರದಲ್ಲಿ ಪ್ರವಾಸಿಗರು
ಇನ್ನೂ ತಂಪಾದ ವಾತಾವರಣವನ್ನು ಕಳೆಯಲು ಬಂದ ಪ್ರವಾಸಿಗರಿಗೆ ಬೇಸರ ಮೂಡಿದೆ. ದೂರದ ರಾಜ್ಯಗಳಿಂದ ಹಿಮಹೊದ್ದು ನಿಂತಿರುವ ಬೆಟ್ಟಗಳನ್ನು ಕಾಣಲೆಂದು ಬಂದಿರುವ ಪ್ರವಾಸಿಗರಿಗೆ ಬೇಸರ ಮೂಡಿದೆ. ತಂಪಾದ ಗಾಳಿ, ಶ್ವೇತ ಬೆಟ್ಟಗಳನ್ನು ಕಣ್ತುಂಬಿಕೊಳ್ಳಲು ನಾವು ಇಲ್ಲಿಗೆ ಬಂದಿದ್ದೇವು ಆದ್ರೆ ಶ್ರೀನಗರ ಈಗ ಭೀಕರ ಬಿಸಿಗಾಳಿಯಿಂದ ನಲುಗಿತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಜನರಿಗೆ ಹೆಚ್ಚು ಹೆಚ್ಚು ನೀರು ಕುಡಿದ ನಿರ್ಜಲೀಕರಣದ ( dhydretion ) ಆಗದಂತೆ ನೋಡಿಕೊಳ್ಳಿ ಎಂದು ಕಾಶ್ಮೀರದ ಡಿವಿಜಿನಲ್ ಕಮೀಷನರ್ ಹೇಳಿದ್ದಾರೆ. ಎರಡು ದಿನ ಶಾಲಾ ಕಾಲೇಜುಳಿಗೆ ರಜೆ ನೀಡಲಾಗಿದೆ. ಅಗತ್ಯ ಕೆಲಸಗಳಿದ್ದರೆ ಮಾತ್ರ ಮನೆಯಿಂದ ಆಚೆ ಬರುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment