Chicken: ಸ್ಕಿನ್, ಸ್ಕಿನ್​ ಲೆಸ್​ ಚಿಕನ್! ಇದರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ..?

author-image
Ganesh
Updated On
ಚಿಕನ್​ನಲ್ಲಿ ಉಪ್ಪು ಕಡಿಮೆ ಎಂದ ಗಂಡ.. ರಾಡ್​ನಿಂದ ಹೊಡೆದು ಕೊ*ಲೆ ಮಾಡಿದ ಹೆಂಡತಿ
Advertisment
  • ಮಾಂಸಹಾರಿಗಳು ಇಷ್ಟ ಪಡೋದ್ರಲ್ಲಿ ಚಿಕನ್ ಕೂಡ ಒಂದು
  • ಅನೇಕರು ವಿಥ್ ಸ್ಕಿನ್ ಮಾಂಸವನ್ನೇ ಖರೀದಿ ಮಾಡ್ತಾರೆ
  • ಚರ್ಮದಲ್ಲಿರುವ ಕೊಬ್ಬಿನಾಂಶ ಕ್ಯಾಲೋರಿ ನೀಡುತ್ತದೆ

ಮಾಂಸಹಾರಿಗಳು ಹೆಚ್ಚು ಇಷ್ಟ ಪಡೋದ್ರಲ್ಲಿ ಚಿಕನ್ ಕೂಡ ಒಂದು. ಚಿಕನ್​​ನಿಂದ ನಾನಾ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಚಿಕನ್ ಖರೀದಿಸಲು ಅಂಗಡಿಗೆ ಹೋದಾಗ ವಿಥ್ ಸ್ಕಿನ್​ ಬೇಕಾ? ಸ್ಕಿನ್ ಇಲ್ಲದೆ ಇರೋದು ಬೇಕಾ ಎಂದು ಕೇಳುತ್ತಾರೆ. ಸ್ಕಿನ್ ಮತ್ತು ಸ್ಕಿನ್​ಲೆಸ್​ ಇದರಲ್ಲಿ ಯಾವುದು ಒಳ್ಳೆಯದು ಅನ್ನೋ ಗೊಂದಲ ಇದೆ.

ಅನೇಕರು ಸ್ಕಿನ್ ಇರುವ ಚಿಕನ್ ಪದಾರ್ಥ ತಿನ್ನುತ್ತಾರೆ. ಇನ್ನೂ ಕೆಲವರು ಸ್ಕಿನ್​ ಲೆಸ್​ ಚಿಕನ್ ತಿನ್ನುತ್ತಾರೆ. ಕೋಳಿಯ ಚರ್ಮವು ಹೆಚ್ಚು ಕೊಬ್ಬನ್ನು ಹೊಂದಿರುವ ಕಾರಣ ಕೆಲವರು ತಿನ್ನೋದಿಲ್ಲ. ಕೋಳಿಯ ಚರ್ಮದಲ್ಲಿ ಪ್ರತಿಶತ 32 ರಷ್ಟು ಕೊಬ್ಬು ಹೊಂದಿರುತ್ತದೆ. ಅದರಲ್ಲಿ ಮೂರನೇ ಎರಡರಷ್ಟು ಒಳ್ಳೆಯ ಕೊಬ್ಬು ಮತ್ತು ಉಳಿದ ಅರ್ಧದಷ್ಟು ಕೆಟ್ಟ ಕೊಬ್ಬು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಅಡುಗೆ ಮಾಡಲು ಈ ವಸ್ತು ಬಳಸುತ್ತೀರಾ? ಕ್ಯಾನ್ಸರ್​​ ಬರೋದು ಗ್ಯಾರಂಟಿ! ಇದು ಓದಲೇಬೇಕಾದ ಸ್ಟೋರಿ

publive-image

ಉತ್ತಮ ಕೊಬ್ಬು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಚಿಕನ್ ಚರ್ಮದಲ್ಲಿರುವ ಕೊಬ್ಬಿನಾಂಶ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ನೀಡುತ್ತದೆ. ಹೆಚ್ಚುವರಿ ಕ್ಯಾಲೋರಿಗಳು ನಿಮಗೆ ಬೇಡ ಎಂದರೆ ಸ್ಕಿನ್​​ ಲೆಸ್​ ಚಿಕನ್ ತಿನ್ನಬಹುದು.
ಸ್ಕಿನ್​ಲೆಸ್​ ಚಿಕನ್ ತಿನ್ನೋದು ಉತ್ತಮ. ಚರ್ಮವನ್ನು ಅಡುಗೆ ಮಾಡುವಾಗ ಇಟ್ಟುಕೊಂಡು ತಿನ್ನುವ ಮೊದಲು ಅದನ್ನು ತೆಗೆದಿಟ್ಟುಕೊಳ್ಳೋದು ಒಳ್ಳೆಯದು ಎಂದು ಕೆಲವು ವರದಿಗಳು ಹೇಳಿವೆ.

ಇದನ್ನೂ ಓದಿ: ತೂಕ ಜಾಸ್ತಿಯಿದ್ರೆ ಎದುರಾಗೋ ಸಮಸ್ಯೆಗಳೇನು? ಸಣ್ಣ ಆಗೋದು ಹೇಗೆ? ಡಯೆಟ್‌ ಪ್ಲಾನ್​ ಹೇಗಿರಬೇಕು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment