/newsfirstlive-kannada/media/post_attachments/wp-content/uploads/2024/08/Diabetes.jpg)
ಇತ್ತೀಚೆಗೆ ಒಪ್ಪತ್ತು ಉಪವಾಸ ಮಾಡುವುದ ಸರ್ವೇಸಾಮಾನ್ಯ. ಹಾಗಾಗಿ ಜನ ಬೆಳಗ್ಗೆ ಉಪಹಾರ ಸ್ಕಿಪ್ ಮಾಡುತ್ತಾರೆ. ಯಾರೇ ಆಗಲಿ ಬೆಳಗಿನ ಉಪಾಹರ ತ್ಯಜಿಸಿದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಚನಕ್ರಿಯ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ ಎನ್ನುತ್ತಾರೆ ತಜ್ಞರು.
ಏನೆಲ್ಲಾ ಸಮಸ್ಯೆ ಕಾಡಲಿದೆ?
ಒಂದು ತಿಂಗಳವರೆಗೆ ನೀವು ಬೆಳಗಿನ ಉಪಹಾರ ಕಡೆಗಣಿಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಬೆಳಗ್ಗೆ ಉಪಹಾರ ಸೇವಿಸಿದರೆ ದೇಹದಲ್ಲಿ ಇನ್ಸೂಲಿನ್ ಸೆನ್ಸಿಟಿವಿ ಸುಧಾರಿಸುತ್ತದೆ. ಚಯಾಪಚಯ ಕ್ರಿಯೆ ಕೂಡ ಸರಿಯಾಗಿ ನಡೆಯುತ್ತದೆ. ನೀವು ಒಂದು ವೇಳೆ ಬೆಳಗಿನ ಉಪಹಾರ ತ್ಯಜಿಸಿದಲ್ಲಿ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ. ಇದು ನಿಮಗೆ ಸಕ್ಕರೆ ಕಾಯಿಲೆ ತಂದೊಡ್ಡುವ ಅಪಾಯ ಇರುತ್ತದೆ ಎನ್ನುತ್ತಾರೆ ವೈದ್ಯರು.
ಬೆಳಗಿನ ಉಪಹಾರ ಸ್ಕಿಪ್ ಮಾಡುವುದರಿಂದ ಕೇವಲ ಮಧುಮೇಹ ಮಾತ್ರವಲ್ಲ, ನಿಮ್ಮ ತೂಕದ ಮೇಲೂ ಪ್ರಭಾವ ಬೀರುತ್ತದೆ. ಇದು ನಿಮ್ಮ ದೇಹದ ತೂಕ ಕಡಿಮೆ ಆಗಿ ಬೊಜ್ಜು ಬೆಳೆಸುವ ಸಾಧ್ಯತೆ ಇದೆ. ಇದು ವೈಟ್ ಗೇನ್ ಹಾಗೂ ವೈಟ್ ಲಾಸ್ ಎರಡರ ಮೇಲೂ ಪರಿಣಾಮ ಬೀರುವಂತದ್ದು. ಇಷ್ಟು ಮಾತ್ರವಲ್ಲ ದೀರ್ಘಕಾಲದವರೆಗೆ ಕಾಡುವಂತ ಆರೋಗ್ಯಕರ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ