/newsfirstlive-kannada/media/post_attachments/wp-content/uploads/2025/02/THAR-CAR-1.jpg)
ಮದುವೆ ಎನ್ನುವುದೇ ಒಂದು ಸುಂದರ ಘಳಿಗೆ , ಎರಡು ಜೋಡಿಗಳು ಒಂದಾಗುವುದನ್ನು ಕಣ್ತುಂಬಿಕೊಳ್ಳುವ ಕ್ಷಣ ಎಲ್ಲಾ ಅದ್ಧೂರಿ ತಯಾರಿಗಳು ನಡೆದು ಕೊನೆಗೆ ಮದುವೆ ನಡೆಯದೇ ಹೋದಾಗ ಆಗುವ ನಿರಾಸೆಯಿದೆಯಲ್ಲಾ ಆ ಮುಖಭಂಗವಿದೆಯಲ್ಲಾ ಅದು ಎಂಥವರಿಗೂ ಕೂಡ ಬೇಡ ಎನಿಸುತ್ತದೆ. ಸಣ್ಣ ಪುಟ್ಟ ಕಾರಣಗಳಿಗೆ ಸಿದ್ಧಗೊಂಡ ಮದುವೆಗಳು ಇತ್ತೀಚೆಗೆ ಮುರಿದು ಬೀಳುತ್ತಿವೆ. ಇಂತಹ ಮತ್ತೊಂದು ಘಟನೆ ಈಗ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಭೋಪಲ್ನಲ್ಲಿ ಮದುವೆಯೊಂದು ಏರ್ಪಟ್ಟಿತ್ತು ಶುಕ್ರವಾರ ಭೋಪಾಲ್ನ ಖೋಹ್ ಇ ಫಿಜಾ ಏರಿಯಾದ ಗಾರ್ಡನ್ ಹೋಟೆಲ್ನಲ್ಲಿ ಮದುವೆಗೆ ಹಾಗೂ ಆರಕ್ಷತೆಗೆ ಎಲ್ಲ ತಯಾರಿಯೂ ನಡೆದಿತ್ತು. ಆದರೆ ಹುಡುಗಿಯ ಸಂಬಂಧಿಕರು ವರ ಹಾಗೂ ಅವನ ಸಂಬಂಧಿಕರ ಬರುವಿಕೆಗಾಗಿ ಕಾದಿದ್ದೆ ಬಂತು. ಕೊನೆಗೂ ವರ ಹಾಗೂ ಅವನ ಸಂಬಂಧಿಕರು ಬರಲೇ ಇಲ್ಲ. ಆಗ ಕೂಡಲೇ ವದುವಿನ ಕಡೆಯವರು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ದಾನ, ಶೂರ ಕರ್ಣರು.. ಇಡೀ ದೇಶಕ್ಕೆ ಇದೊಂದೇ ಮಾದರಿ ಗ್ರಾಮ; ಇವರ ಯಶೋಗಾಥೆ ಏನು ಗೊತ್ತಾ?
ಮದುವೆ ಹೀಗ ಮುರಿದು ಬೀಳಲು ಕಾರಣವಾಗಿದ್ದು ಥಾರ್ ಜೀಪ್. ಹುಡುಗಿಯ ಕುಟುಂಬ ಆರೋಪ ಮಾಡಿರುವ ಪ್ರಕಾರ ವರದಕ್ಷಿಣೆಯಾಗಿ ಹುಡುಗ ಥಾರ್ ಜೀಪ್ಗೆ ಬೇಡಿಕೆ ಇಟ್ಟಿದ್ದನಂತೆ. ಅದರ ಬೆಲೆ 11.50 ಲಕ್ಷ ರೂಪಾಯಿಯಿಂದ 18 ಲಕ್ಷ ರೂಪಾಯಿಯವರೆಗೂ ಇದೆ. ರಿಸೆಪ್ಷನ್ಗೂ ಮೊದಲು ಹುಡುಗಿಯ ಕುಟುಂಬದವರು ಕೊಡಿಸಲು ಸಾಧ್ಯವಿಲ್ಲ ಎಂದಿದ್ದಾರೆ ಇದೇ ಕಾರಣವಿಟ್ಟುಕೊಂಡು ಹುಡುಗನ ಕಡೆಯವರು ಮದುವೆಗೆ ಬಾರದೇ ಮದುವೆಯನ್ನು ಮುರಿದಿದ್ದಾರೆಂದು ಆರೋಪಿಸಿದ್ದಾರೆ. ಆದ್ರೆ ಹುಡುಗ ಹಾಗೂ ಆತನ ಕುಟುಂಬ ಈ ಆರೋಪವನ್ನು ತಳ್ಳಿ ಹಾಕಿದೆ.
ಮದುಮಗಳ ಕಡೆಯಿಂದ ನೀಡಿರುವ ದೂರಿನ ಪ್ರಕಾರ ಮದುವೆಗೆ ಮೂರು ದಿನಗಳ ಮುಂಚೆ ವರ ಹಣ ಹಾಗೂ ಚಿನ್ನಾಭರಣ ಸೇರಿ ಥಾರ್ ಕಾರ್ಗೂ ಕೂಡ ಬೇಡಿಕೆಯಿಟ್ಟಿದ್ದನಂತೆ. ಅದು ಅಲ್ಲದೇ ಮದುವೆಯ ದಿನ ಅವುಗಳನ್ನು ತಂದುಕೊಡದಿದ್ದರೆ ನಾನು ಮದುವೆಗೆ ಬರುವುದಿಲ್ಲ ಎಂದು ಹೇಳಿದ್ದನಂತೆ. ವಧುವಿನ ಕಡೆಯುವರು ಆರಂಭದಲ್ಲಿ ಅಳಿಯ ಜೋಕ್ ಮಾಡುತ್ತಿದ್ದಾನೆ ಎಂದು ಭಾವಿಸಿದ್ದರಂತೆ. ಆದರೆ ಯಾವಾಗ ಅವನು ನಿಜಕ್ಕೂ ಮದುವೆಗೆ ಬರಲಿಲ್ಲವೋ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಧು ಹೇಳುವ ಪ್ರಕಾರ ಇತ್ತೀಚೆಗೆ ವರ ತನ್ನ ಬ್ಯುಸಿನೆಸ್ನಲ್ಲಿ ತುಂಬಾ ನಷ್ಟ ಮಾಡಿಕೊಂಡಿದ್ದನಂತೆ ಅದಕ್ಕಾಗಿ ಹಣ ಹಾಗೂ ಚಿನ್ನಕ್ಕೆ ಡಿಮ್ಯಾಂಡ್ ಇಟ್ಟಿದ್ದನಂತೆ.
ಇದನ್ನೂ ಓದಿ: ಅಂಬೇಡ್ಕರ್ ಬಳಿಕ ಹೆಚ್ಚು ಓದಿಕೊಂಡ ವ್ಯಕ್ತಿ ಯಾರು? ಇವರ ಬಳಿ ಇರೋ ಡಿಗ್ರಿಗಳು ಎಷ್ಟು?
ಆದ್ರೆ ವರನ ಕಡೆಯ ಚೌಹಾಣ್ ಕುಟುಂಬ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದೆ. ನಮ್ಮ ಕುಟುಂಬ ಆರ್ಥಿಕವಾಗಿ ತುಂಬಾ ಸ್ಥಿರವಾಗಿದೆ. ನಾವು ಯಾವುದೇ ವರದಕ್ಷಿಣೆಯನ್ನು ಕೇಳಿಲ್ಲ. ಕಳೆದ ಒಂದು ವರ್ಷದಿಂದ ನನಗೆ ಮದುವೆಯಾಗಲು ಇಷ್ಟವಿಲ್ಲವೆಂದೇ ಹೇಳುತ್ತಿದ್ದೆ. ಆದರೆ ವಧುವಿನಿ ಕುಟುಂಬದವರು ತೀವ್ರವಾಗಿ ಒತ್ತಾಯ ಮಾಡುತ್ತಿದ್ದರು ಹೀಗಾಗಿ ನಾನು ಮದುವೆಗೆ ಬರಲಿಲ್ಲ ಎಂದು ಮದುಮಗ ಹೇಳಿದ್ದಾನೆ.ಸದ್ಯ ಪೊಲೀಸರು ವರದಕ್ಷಿಣೆ ನಿಯಂತ್ರಣ ಕಾಯ್ದೆ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮದುಮಗ ಹಾಗೂ ಆತನ ತಂದೆ ತಾಯಿ ಮತ್ತು ಸೊಸೆಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ