newsfirstkannada.com

ಶ್ರೀಲಂಕಾಗೆ ಖಡಕ್​ ವಾರ್ನಿಂಗ್​ ಕೊಟ್ಟ ವಿರಾಟ್, ರೋಹಿತ್.. ಟಾರ್ಗೆಟ್ ಏನು ಗೊತ್ತಾ?

Share :

Published August 2, 2024 at 1:04pm

    ಸೂಪರ್​ ಸ್ಟಾರ್​ಗಳ ಮೇಲೆ​ ಅಭಿಷೇಕ್​ ನಾಯರ್ ಹದ್ದಿನ ಕಣ್ಣು

    ಇಂದಿನಿಂದ ಭಾರತ- ಶ್ರೀಲಂಕಾ ಮಧ್ಯೆ 3 ಪಂದ್ಯಗಳ ಏಕದಿನ ಸರಣಿ

    ಯುದ್ಧಕ್ಕೆ ಕಿಂಗ್​ ಕೊಹ್ಲಿ- ಹಿಟ್​​ಮ್ಯಾನ್​ ರೋಹಿತ್ ಸಮರಾಭ್ಯಾಸ!

ಟಿ20ಯಲ್ಲಿ ಯಂಗ್​ಸ್ಟರ್ಸ್​​ ಲಂಕನ್ ಲಯನ್ಸ್​ನ​ ಬೇಟೆಯಾಡಿದ್ದಾಯ್ತು. ಇದೀಗ ಏಕದಿನ ಸರಣಿಗೆ ಕೌಂಟ್​ಡೌನ್​ ಶುರುವಾಗಿದೆ. ಏಕದಿನ ಫಾರ್ಮೆಟ್​ನಲ್ಲಿ ಸಿಂಹಳೀಯರನ್ನ ಬೇಟೆಯಾಡಲು ದಿಗ್ಗಜರು ಫೀಲ್ಡಿಗಿಳಿಯಲಿದ್ದಾರೆ. ಅಸಲಿ ಆಟಕ್ಕೂ ಮುನ್ನ ನೆಟ್ಸ್​​ನಿಂದಲೇ ಕಿಂಗ್​ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್​ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಈ ಸ್ಟೇಡಿಯಂನಲ್ಲಿ ಕೊಹ್ಲಿ​ ಬ್ಯಾಟಿಂಗ್ ಇತಿಹಾಸ ಏನ್ ಹೇಳುತ್ತೆ.. ಕನ್ನಡಿಗ ರಾಹುಲ್​ಗೆ ಚಾನ್ಸ್​ ಕೊಡ್ತಾರಾ ಗಂಭೀರ್?

ಶ್ರೀಲಂಕಾ ಎದುರಿನ ಟಿ20 ಸರಣಿ ಅಂತ್ಯ ಕಂಡಿದೆ. ಇದೀಗ ಏಕದಿನ ಸರಣಿಗೆ ಕೌಂಟ್​ಡೌನ್​ ಶುರುವಾಗಿದೆ. ಇಂದಿನಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಟೀಮ್​ ಇಂಡಿಯಾ ಮತ್ತೊಂದು ದಿಗ್ವಿಜಯವನ್ನ ಎದುರು ನೋಡ್ತಿದೆ. ಕೊಲಂಬೋದಲ್ಲಿ ಏಕದಿನ ಸಮರಕ್ಕೆ ಭರ್ಜರಿ ಸಮಾರಾಭ್ಯಾಸ ನಡೆದಿದೆ.

ಇದನ್ನೂ ಓದಿ: ವಯನಾಡು ದುರಂತ: ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ವೃದ್ಧ; ಹಸೂಗೂಸುಗಳಿಗೆ ಹಾಲುಣಿಸಿದ ತಾಯಿ!

ವಿಶ್ರಾಂತಿ ಅಂತ್ಯ.. ಫೀಲ್ಡ್​ಗಿಳಿಯಲು ಭಲೇ ಜೋಡಿ ರೆಡಿ.!

T20 ವಿಶ್ವಕಪ್​ ಟೂರ್ನಿಯ ಬಳಿಕ ವಿಶ್ರಾಂತಿಗೆ ಜಾರಿದ್ದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮತ್ತೆ ಫೀಲ್ಡ್​ಗಿಳಿಯಲು ರೆಡಿಯಾಗಿದ್ದಾರೆ. ತಿಂಗಳ ಅಂತರದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ, ಕಿಂಗ್​ ಕೊಹ್ಲಿ ಮೈದಾನಕ್ಕಿಳಿಯಲಿದ್ದಾರೆ. ಇಂದು ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ದಿಗ್ಗಜರ ಕಮ್​ಬ್ಯಾಕ್​ಗೆ ವೇದಿಕೆ ಸಜ್ಜಾಗಿದೆ.

ಅಭ್ಯಾಸದ ಅಖಾಡದಲ್ಲಿ ದಿಗ್ಗಜರ ಘರ್ಜನೆ.!

ಲಂಕನ್ನರ ಬೇಟೆಯಾಡಲು ಟೀಮ್​ ಇಂಡಿಯಾದ ಸೂಪರ್​ ಸ್ಟಾರ್ಸ್​ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ 3 ದಿನದಿಂದ ಟೀಮ್​ ಇಂಡಿಯಾದ ಅಭ್ಯಾಸ ಜೋರಾಗಿ ನಡೆದಿದೆ. ಲಂಕಾಗೆ ಕಾಲಿಟ್ಟ ದಿನದಿಂದಲೇ ಕಿಂಗ್​​ ವಿರಾಟ್​ ಕೊಹ್ಲಿ, ಹಿಟ್​ಮ್ಯಾನ್​​ ರೋಹಿತ್​ ಶರ್ಮಾ ಭರ್ಜರಿ ಅಭ್ಯಾಸ ನಡೆಸಿದ್ರು. 3 ದಿನ ನೆಟ್ಸ್​ನಲ್ಲಿ ಅಬ್ಬರಿಸೋದ್ರೊಂದಿಗೆ ಎದುರಾಳಿಗೆ ಎಚ್ಚರಿಕೆಯ​ ಸಂದೇಶ​ ರವಾನಿಸಿದ್ದಾರೆ.

ಕೊಲಂಬೋ ನೆಟ್ಸ್​ನಲ್ಲಿ ಕೊಹ್ಲಿ, ರೋಹಿತ್​ ವಿಶೇಷ ಅಭ್ಯಾಸ

ಕೊಲಂಬೋದಲ್ಲಿ ಕಳೆದ 3 ದಿನಗಳಿಂದ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ವಿಶೇಷ ಅಭ್ಯಾಸ ನಡೆಸಿದ್ದಾರೆ. ಇಬ್ಬರು ಸೂಪರ್​ ಸ್ಟಾರ್​​ಗಳ ಮೇಲೆ ಅಸಿಸ್ಟೆಂಟ್​ ಕೋಚ್​ ಅಭಿಷೇಕ್​ ನಾಯರ್​ ಹದ್ದಿನ ಕಣ್ಣಿಟ್ಟಿದ್ರು. ಟಿ20 ತಂಡದೊಂದಿಗಿದ್ದ ಅಭಿಷೇಕ್​ ನಾಯರ್​, 2ನೇ ಪಂದ್ಯ ಅಂತ್ಯದ ಬೆನ್ನಲ್ಲೇ ಪಲ್ಲೆಕೆಲೆಯಿಂದ ಕೊಲಂಬೋಗೆ ಪ್ರಯಾಣಿಸಿದ್ರು. ಏಕದಿನ ತಂಡ ಕೂಡಿಕೊಂಡಿದ್ದ ಅಭಿಷೇಕ್​ ನಾಯರ್​, ನೆಟ್​​ ಸೆಷನ್​ನಲ್ಲೂ ಭಾಗಿಯಾಗಿದ್ರು. ಕೊಹ್ಲಿ, ರೋಹಿತ್​ ಅಭ್ಯಾಸದ ಮೇಲೆ ಹೆಚ್ಚು ಫೋಕಸ್​ ಮಾಡಿದ್ರು.

ತಿಂಗಳ ಬಳಿಕ ಕಮ್​ಬ್ಯಾಕ್​.. ರಿಧಮ್​ ಕಂಡುಕೊಳ್ಳೋ ಯತ್ನ.!

ಜೂನ್​ 29ರಂದು ನಡೆದ ಟಿ20 ವಿಶ್ವಕಪ್​ ಫೈನಲ್​ ಪಂದ್ಯವೇ ಕೊನೆ. ಆ ಬಳಿಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಇಬ್ರೂ ಅಂಗಳಕ್ಕಿಳಿದೇ ಇಲ್ಲ. ಸುಮಾರು 1 ತಿಂಗಳಿಂದ ಮೈದಾನದಿಂದ ದೂರ ಉಳಿದಿರೋ ಈ ಇಬ್ಬರ ಮುಂದೆ ಇದೀಗ ರಿಧಮ್​ ಕಂಡುಕೊಳ್ಳೋ ಚಾಲೆಂಜ್​ಯಿದೆ. ಹೀಗಾಗಿಯೇ ನೆಟ್ಸ್​ನಲ್ಲಿ ಹೆಚ್ಚು ಕಾಲ ಬೆವರಿಳಿಸಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಪೊಲೀಸರಿಂದ ಹಲ್ಲೆ; ಯುವಕನ ಸ್ಥಿತಿ ಗಂಭೀರ; ಸ್ಥಳೀಯರಿಂದ ಭಾರೀ ಆಕ್ರೋಶ

ಚಾಂಪಿಯನ್ಸ್​ ಟ್ರೋಫಿಯೇ ದಿಗ್ಗಜರ ಟಾರ್ಗೆಟ್​​.!

T20 ವಿಶ್ವಕಪ್​ ಗೆಲುವಿನೊಂದಿಗೆ ಬಹುಕಾಲದಿಂದ ಕಾಡಿದ್ದ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕಿದ್ದಾಯ್ತು. ಇದೀಗ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮುಂದಿನ ಟಾರ್ಗೆಟ್​ ಚಾಂಪಿಯನ್ಸ್​ ಟ್ರೋಫಿ. ಮುಂದಿನ ವರ್ಷ ನಡೆಯೋ ಈ ಪ್ರತಿಷ್ಠಿತ ಟ್ರೋಫಿ ಗೆಲ್ಲೋದು ಭಲೇ ಜೋಡಿಯ ಗುರಿಯಾಗಿದೆ. ಅದಕ್ಕೂ ಮುನ್ನ ಟೀಮ್​ ಇಂಡಿಯಾ, ಲಂಕಾ ವಿರುದ್ಧದ 3 ಪಂದ್ಯಗಳೂ ಸೇರಿ ಕೇವಲ 6 ಏಕದಿನ ಪಂದ್ಯಗಳನ್ನಾಡಲಿದೆ. ಚಾಂಪಿಯನ್ಸ್​ ಟ್ರೋಫಿ ದೃಷ್ಟಿಯಿಂದ ಈ ಪಂದ್ಯಗಳು ರೋಹಿತ್​, ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಇದನ್ನೂ ಓದಿ: ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್​ಗೆ ಏನಾಯಿತು..?

ಚುಟುಕು ವಿಶ್ವಕಪ್​ ಬಳಿಕ ಮೈದಾನದಿಂದ ಹೊರಗುಳಿದಿದ್ದ ರೋಹಿತ್​, ಕೊಹ್ಲಿ ಕೊನೆಗೂ ಅಂಗಳಕ್ಕೆ ಮರಳಿದ್ದಾರೆ. ಒಂದು ತಿಂಗಳ ಬಳಿಕ ದರ್ಶನ ಕೊಡ್ತಿರೋ ದಿಗ್ಗಜರ ಆಟ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕುತೂಹಲದಿಂದ ಕಾಯ್ತಿದ್ದಾರೆ. ಬಹು ನಿರೀಕ್ಷೆಯಿಟ್ಟು ಕಾಯ್ತಿರೋ ಫ್ಯಾನ್ಸ್​ಗೆ ಭಲೇ ಜೋಡಿ ನಿರಾಸೆ ಮೂಡಿಸದಿರಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶ್ರೀಲಂಕಾಗೆ ಖಡಕ್​ ವಾರ್ನಿಂಗ್​ ಕೊಟ್ಟ ವಿರಾಟ್, ರೋಹಿತ್.. ಟಾರ್ಗೆಟ್ ಏನು ಗೊತ್ತಾ?

https://newsfirstlive.com/wp-content/uploads/2024/08/VIRAT_ROHIT_GILL.jpg

Load More