ಬೆಂಗಳೂರು ಮೂಲದ ಯುವತಿಗೆ ‘ಸ್ಲೀಪ್ ಚಾಂಪಿಯನ್’ ಪಟ್ಟ
ನಿದ್ದೆ ಮಾಡುವ ಮೂಲಕ ಒಂಭತ್ತು ಲಕ್ಷ ರೂಪಾಯಿ ಗೆದ್ದ ಯುವತಿ
ವೇಕ್ಫಿಟ್ನ ವಿಶಿಷ್ಟ ಇಂಟರ್ನ್ಶಿಪ್ನಲ್ಲಿ ಭಾಗವಹಿಸಿದ ಬ್ಯಾಂಕರ್
ನಿದ್ದೆ ಪ್ರತಿಯೊಬ್ಬರ ಜೀವನಕ್ಕೂ ಮುಖ್ಯ. ಸರಿಯಾಗಿ ನಿದ್ದೆ ಮಾಡುವ ವ್ಯಕ್ತಿ ಆರೋಗ್ಯವಂತನಾಗಿರಲು ಸಾಧ್ಯ. ಮಾತ್ರವಲ್ಲದೆ ಪ್ರತಿ ದಿನ ಆತ ಸಂತೋಷದಿಂದ ಕೂಡಿರಲು ಸಾಧ್ಯ. ಆದರೆ ಅತಿಯಾದ ನಿದ್ದೆ ಕಾಯಿಲೆಗೆ ಆಹ್ವಾನ. ನಿದ್ದೆ ಹೆಚ್ಚು ಮಾಡಿದರೆ ಸಮಸ್ಯೆ ಎದುರಾಗುವ ಸ್ಥಿತಿ ಬರಬಹುದು. ಆದರೆ ವಿಚಾರ ಅದಲ್ಲ ನಿದ್ದೆ ಮಾಡಿ ಕೂಡ ಹಣ ಗಳಿಸಬಹುದು ಎಂಬ ಸಂಗತಿ ಗೊತ್ತಿದೆಯಾ?. ಬೆಂಗಳೂರು ಮೂಲದ ಯುವತಿಯೊಬ್ಬಳು ನಿದ್ದೆ ಮಾಡುವ ಮೂಲಕ 9 ಲಕ್ಷ ರೂಪಾಯಿ ಗೆದ್ದಿದ್ದಾಳೆ ಎಂದರೆ ನಂಬುತ್ತೀರಾ?. ಹಾಗಿದೆ ಈ ಸ್ಟೋರಿ ಓದಿ.
ಬೆಂಗಳೂರು ಮೂಲದ ಬ್ಯಾಂಕರ್ ಆಗಿರುವ ಸಾಯಿಶ್ವರಿ ಪಾಟೀಲ್ ಎಂಬಾಕೆ ವೇಕ್ಫಿಟ್ನ ವಿಶಿಷ್ಟ ಇಂಟರ್ನ್ಶಿಪ್ ಕಾರ್ಯಕ್ರಮದ 3ನೇ ಸೀಸನ್ನಲ್ಲಿ ‘ಸ್ಲೀಪ್ ಚಾಂಪಿಯನ್’ ಎಂಬ ಪಟ್ಟ ಅಲಂಕರಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ನಿದ್ರಿಸುವ ಇಂಟರ್ನ್ಶಿಪ್ ಮೂಲಕ 9 ಲಕ್ಷ ರೂಪಾಯಿ ಗೆದ್ದಿದ್ದಾಳೆ.
ಏನಿದು ನಿದ್ರಿಸುವ ಇಂಟರ್ನ್ಶಿಪ್?
ವಿಶ್ರಾಂತಿ ಪಡೆಯಲು ಹೆಣಗಾಡುತ್ತಿರುವವರಿಗಾಗಿ ಸ್ಲೀಪ್ ಇಂಟರ್ಶಿಪ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಭಾಗವಹಿಸುವವರು ಪ್ರತಿ ರಾತ್ರಿ ಕನಿಷ್ಠ 8ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಸ್ಲ್ಯಾಪ್ ಫೈಟ್ನಿಂದ ಮೆದುಳಿಗೆ ಭಾರೀ ಅಪಾಯ; ನೀವು ಓದಲೇಬೇಕಾದ ಸ್ಟೋರಿ!
ಸಾಯಿಶ್ವರಿ ಪಾಟೀಲ್ ಕೂಡ ಇದರಲ್ಲಿ ಒಬ್ಬರಾಗಿ ಭಾಗವಹಿಸಿದ್ದರು. ಪ್ರೀಮಿಯಂ ಹಾಸಿಗೆ ಮತ್ತು ಸಂಪರ್ಕವಿಲ್ಲದ ಟ್ರ್ಯಾಕರನ್ನು ಇದರಲ್ಲಿ ಒದಗಿಸಲಾಗುತ್ತದೆ. ಇಂಟರ್ನ್ಗಳು ತಮ್ಮ ನಿದ್ರೆಯ ಅಭ್ಯಾಸವನ್ನು ಹೆಚ್ಚಿಸಲು ಅನುಭವಿ ಮಾರ್ಗದರ್ಶಕರ ಕಾರ್ಯಾಗಾರಗಳಲ್ಲಿ ಹಾಜರಾಗಬೇಕಿದೆ.
ಇದನ್ನೂ ಓದಿ: ನಾಳೆಯಿಂದ Jr. NTR ದೇವರ ಸಿನಿಮಾ ಆರ್ಭಟ; ಟಿಕೆಟ್ ರೇಟ್ ಎಷ್ಟು ಗೊತ್ತಾ?
ಇಂಟರ್ಶಿಪ್ಗೆ ಆಯ್ಕೆಯಾದವರಿಗೆ ಹಲವು ಪ್ರಕ್ರಿಯೆಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ವಿಡಿಯೋ ಕರೆಯಲ್ಲಿ ಅಭ್ಯರ್ಥಿಗಳು ನಿದ್ರೆ ಮಾಡುವ ಉತ್ಸುಹಕತೆಯನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಫೈನಲಿಸ್ಟ್ಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಕುರಿತಾಗಿ ವೈಯ್ಯಕ್ತಿಕ ಸಂದರ್ಶನಗಳಿಗೆ ಒಳಗಾದರು. ಅದರಂತೆ ಸಾಯಿಶ್ವರಿ ಪಾಟೀಲ್ ವೇಕ್ಫಿಟ್ನ ವಿಶಿಷ್ಟ ಇಂಟರ್ನ್ಶಿಪ್ ಕಾರ್ಯಕ್ರಮದ 3ನೇ ಸೀಸನ್ನಲ್ಲಿ ‘ಸ್ಲೀಪ್ ಚಾಂಪಿಯನ್’ ಎಂಬ ಪಟ್ಟ ಅಲಂಕರಿಸಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ