/newsfirstlive-kannada/media/post_attachments/wp-content/uploads/2024/02/Heart-Attack.jpg)
ತೆಳ್ಳಗೆ ಹಾಗೂ ಸಣಕಲು ದೇಹ ಹೊಂದಿದವರಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಇರುತ್ತದೆ ಎಂದು ಹೊಸ ಅಧ್ಯಯನದಿಂದ ಬಹಿರಂಗಗೊಂಡಿದೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಅಧ್ಯಯನದ ಪ್ರಕಾರ ಅವರ ಸ್ನಾಯುಗಳಲ್ಲಿ ಹಿಡನ್ ಪ್ಯಾಕೆಟ್ ಮತ್ತು ಫ್ಯಾಟ್ ಸಂಗ್ರಹದಿಂದಾಗಿ ಈ ಒಂದು ಹೃದಯಾಘಾತ ಸಂಭವಿಸುತ್ತದೆ ಎಂದು ಹೇಳಲಾಗಿದೆ.
ವಿಜ್ಞಾನಿಗಳು ಇದನ್ನು ಇಂಟ್ರಾಮಸ್ಕ್ಯೂಲರ್ ಫ್ಯಾಟ್ ಅಂದ್ರೆ ಸ್ನಾಯುಗಳಲ್ಲಿರುವ ಕೊಬ್ಬು. ಬೀಫ್ನಲ್ಲಿರುವ ಸ್ನಾಯುಗಳಲ್ಲಿರುವ ಕೊಬ್ಬಿಗೆ ಇದನ್ನು ಹೋಲಿಸಿದ್ದಾರೆ. ಇದು ತೀವ್ರ ಹೃದಯದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳಿದೆ. ಈ ಅಧ್ಯಯನದಿಂದ ತಿಳಿದು ಬಂದಿರುವ ಇನ್ನೂ ಒಂದು ವಿಷಯ ಅಂದದ್ರೆ ದಢೂತಿ ದೇಹದ ಮಹಿಳೆಯರಲ್ಲೂ ಕೂಡ ಹೃದಯಾಘಾತದ ಅಪಾಯ ಹೆಚ್ಚು ಇರುತ್ತದೆ ಎಂದು ಹೇಳಲಾಗಿದೆ. ಸ್ನಾಯುಗಳಲ್ಲಿ ಎಷ್ಟೆಷ್ಟು ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆಯೋ ಅಷ್ಟು ಹೃದಯಾಘಾತದ ಅಪಾಯ ಹೆಚ್ಚು ಇರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಹೃದಯಾಘಾತ ತಡೆಯುವ ಹಣ್ಣು ಇದು.. ವಾರಕ್ಕೆ ಒಮ್ಮೆ ತಿಂದರೆ ಆರೋಗ್ಯಕ್ಕೆ ವಿಶೇಷ ಪವರ್..!
ಸಂಶೋಧನೆಯ ಪ್ರಕಾರ ಸುಮಾರು 650 ಜನರನ್ನು ಹೆಣ್ಣು ಮತ್ತು ಗಂಡುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಬ್ರಿಗ್ಮನ್ ಮತ್ತು ವುಮೆನ್ಸ್ ಆಸ್ಪತ್ರೆಯಲ್ಲಿ ಈ ಒಂದು ಸಂಶೋಧನೆ ನಡೆದಿದೆ. ಚೆಸ್ಟ್ ಪೇನ್ ಉಸಿರಾಟದ ತೊಂದರೆ ಹಾಗೂ ಅಪಧಮನಿಯಲ್ಲಿ ತೊಂದರೆಗಳು ಕಂಡು ಬಂದಿವೆ. ಇದರಿಂದ ಹೃದಯದಲ್ಲಿ ಕ್ಲಾಗ್ಗಳು ಕೂಡ ಕಂಡು ಬಂದಿವೆ. ಸಂಶೋಧನೆಯಲ್ಲಿ ಸ್ಕ್ಯಾನ್ ಮೂಲಕ ಹೃದಯದ ಕಾರ್ಯಕ್ಷಮತೆಯನ್ನು ನೋಡಿದಾಗ ತೀರ ಸಣಕಲು ಇರುವವರ ಹೃದಯದಲ್ಲಿ ಅಪಾಯಕಾರಿ ಅಂಶಗಳು ಕಂಡು ಬಂದಿವೆ. ಸ್ನಾಯುಗಳಲ್ಲಿ ಕೊಬ್ಬು ಶೇಖರಣೆಯಾಗುವುದು ಕಂಡು ಬಂದಿದೆ. ಹೀಗಾಗಿ ಸಣಕಲು ದೇಹ ಇರುವವರಲ್ಲಿ ಹಾರ್ಟ್ ಅಟ್ಯಾಕ್, ಹಾರ್ಟ್ ಫೆಲ್ಯೂವರ್ ನಿಂದ ಸಾವು ಸಂಭವವಾಗುವ ಸಾಧ್ಯತೆ ಹೆಚ್ಚು ಅಂತ ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ