newsfirstkannada.com

ಪ್ರಧಾನಿ ಮೇಲೆಯೇ ಫೈರಿಂಗ್​.. 4 ಬಾರಿ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ 75 ವರ್ಷದ ಬರಹಗಾರ! ಯಾರೀತ?

Share :

Published May 16, 2024 at 7:13am

Update May 16, 2024 at 7:17am

    ಒಂದಲ್ಲಾ, ಎರಡಲ್ಲಾ, ಪ್ರಧಾನಿ ಮೇಲೆ ನಾಲ್ಕು ಬಾರಿ ಗುಂಡಿನ ದಾಳಿ

    ಗನ್​ ತೆಗೆದು ಪ್ರಧಾನಿ ಮೇಲೆ ಫೈರ್​ ಮಾಡಿದ 75 ವರ್ಷ ವಯಸ್ಸಿನ ವೃದ್ಧ

    ವೃದ್ಧನಿಗೆ ಪ್ರಧಾನಿ ಮೇಲೆ ಅಷ್ಟೇಕೆ ಸಿಟ್ಟು? ಕೊಲೆ ಮಾಡಲು ಮುಂದಾಗಿದ್ದೇಕೆ?

ಒಂದು ದೇಶದ ಪ್ರಧಾನಿಯಾದವರಿಗೆ ಫುಲ್​ ಸೆಕ್ಯೂರಿಟಿ ಸೆಟಪ್​ ಇರುತ್ತೆ. ಸಣ್ಣ ಸೊಳ್ಳೆ ಕೂಡ ನುಸುಳಲು ಆಗದಂತೆ ಭದ್ರತೆ ಇರುವ ಜಾಗದಲ್ಲಿ ಓರ್ವ ಏಕಾಏಕಿ ನುಗ್ಗಿ ಪ್ರಧಾನಿ ಮೇಲೆ ಫೈರಿಂಗ್​ ಮಾಡಿದ್ದಾನೆ.

ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಭೀಕರ ದಾಳಿ

ದೇಶದ ಪ್ರಧಾನಿಯಾದವರಿಗೆ ಏನು ಭದ್ರತೆ. ಅದೇನ್​ ಟೈಟ್ ಸೆಕ್ಯೂರಿಟಿ. ಸುತ್ತ ಹತ್ತಾರು ಗಾರ್ಡ್ಸ್ ಇರ್ತಾರೆ. ಕೈ ಸನ್ನೆ ಮಾಡಿದ್ರೆ ಒಂದು ಮೂವ್. ಕಣ್ಣು ಸನ್ನೆ ಮಾಡಿದ್ರೆ ಒಂದು ಮೂವ್​ ಅನ್ನೋ ಲೆಕ್ಕಾಚಾರದಲ್ಲಿ ಕೆಲಸ ಮಾಡ್ತಿರ್ತಾರೆ. ಸಾಲದಕ್ಕೆ ಸೂಟ್ ಕೇಸ್ ರೂಪದಲ್ಲಿ ಬುಲ್ಲೆಟ್ ಪ್ರೊಟಕ್ಷನ್ ಶೀಲ್ಡ್​. ಭದ್ರತಾ ಸಿಬ್ಬಂದಿಯನ್ನ ನಿರ್ವಹಣೆ ಮಾಡೋದಕ್ಕೆ ಅಂತಾನೇ ಪ್ರೋಟೋ ಕಾಲ್, ಟೀಮ್. ಖಾಲಿ ನೊಣ ಕೂಡ ಪ್ರಧಾನಿ ಮೇಲೆ ನುಸುಳದಂತೆ ಕಾವಲು ಕಾಯೋ ಭದ್ರತೆ ಇರಬೇಕಾದ್ರೆನೇ ಸ್ಲೋವಾಕಿಯಾದ ಪ್ರಧಾನಿ ಮೇಲೆ ಗುಂಡಿನ ದಾಳಿ ನಡೆದು ಹೋಗಿದೆ.

ಜನರ ಜೊತೆ ಚರ್ಚೆ ನಡೆಸುತ್ತಿದ್ದ ಪ್ರಧಾನಿ

ಹೀಗೆ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಫುಲ್ ಸೆಕ್ಯೂರಿಟಿ ಇರಬೇಕಾದ್ರೆನೇ ಫೈರಿಂಗ್ ನಡೆದಿರೋದು ಸ್ಲೋವಾಕಿಯಾದಲ್ಲಿ. ಕ್ಯಾಬಿನೆಟ್ ಸಭೆಯ ನಂತರ ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ, ಸ್ವಾಗತಿಸಲು ಕಾಯುತ್ತಿದ್ದ ಜನರ ಗುಂಪಿನೊಂದಿಗೆ ಹಸ್ತಲಾಘವ ಮಾಡಿ ಮಾತುಕತೆ ನಡೆಸಲು ಬಂದಿದ್ದಾರೆ. ಇದೇ ವೇಳೆ 75 ವರ್ಷದ ವೃದ್ಧ ಗನ್​ ತೆಗೆದು ಫಿಕೊ ಮೇಲೆ ಫೈರಿಂಗ್​ ಮಾಡಿದ್ದು, ಫಿಕೊ ಮಾರಣಾಂತಿಕ ಗಾಯಗಳಿಂದ ಕುಸಿದು ಬಿದ್ದಿದ್ದಾರೆ.

ಗುಂಡಿನ ದಾಳಿಯಾಗ್ತಿದ್ದಂತೆ ಕೂಡಲೇ ಅಲರ್ಟ್​ ಆದ ಭದ್ರತಾ ಸಿಬ್ಬಂದಿ ಅಳವಡಿಸಿದ್ದ ಬ್ಯಾರಿ ಕೇಡ್ ಹಾರಿ, ಫೈರಿಂಗ್​ ಮಾಡಿದ 75 ವರ್ಷದ ವೃದ್ಧನ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ. ಕೆಲ ಗಾರ್ಡ್ಸ್​ ವೃದ್ಧನ ಮೇಲೆ ದಾಳಿ ಮಾಡಿದ್ರೆ, ಮಿಕ್ಕ ಕೆಲವರು ಕಪ್ಪು ಮರ್ಸಿಡಿಸ್ ಬೆನ್ಸ್​ ಕಾರಿನಲ್ಲಿ ಪ್ರಧಾನಿ ರಾಬರ್ಟ್ ಫಿಕೊರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಮುಗಿಸಿದ ಬಳಿಕ ಫಿಕೊರನ್ನು ಹೆಲಿಕಾಪ್ಟರ್ ಮೂಲಕ ಬನ್ಸ್ಕಾ ಬೈಸ್ಟ್ರಿಕಾ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಗುಂಡಿನ ದಾಳಿ ನಡೆದ ಸ್ಥಳವನ್ನು ಸೀಲ್ ಮಾಡಿದ್ದಾರೆ.

ಇನ್ನು ಶೂಟ್​ ಔಟ್ ಮಾಡಿರೋ 75 ವರ್ಷದ ವ್ಯಕ್ತಿ, ಶಾಪಿಂಗ್ ಮಾಲ್‌ನಲ್ಲಿ ಹಿಂದೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದನಂತೆ. ಜೊತೆಗೆ ಮೂರು ಕವನ ಸಂಕಲನಗಳನ್ನ ರಚಿಸಿ ತಾನೊಬ್ಬ ಲೇಖಕ ಎಂದು ಗುರುತಿಸಿಕೊಂಡಿದ್ದ ಮತ್ತು ಸ್ಲೋವಾಕ್ ಸೊಸೈಟಿ ಆಫ್ ರೈಟರ್ಸ್ ಸದಸ್ಯನೂ ಆಗಿದ್ದಾನೆ. ಇನ್ನೂ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದು, ಆರೋಪಿ ಯಾಕೆ ಗುಂಡಿನ ದಾಳಿ ಮಾಡಿದ್ದಾನೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಒಟ್ಟಾರೆ, ಮೂರನೇ ಬಾರಿಗೆ ಸ್ಲೋವಾಕಿಯಾ ಪ್ರಧಾನಿಯಾಗಿರುವ ಫಿಕೊ ಮೇಲೆ ಗುಂಡಿನ ದಾಳಿಗೆ ಸ್ಲೋವಾಕಿಯಾ ದೇಶವೇ ಬೆಚ್ಚಿ ಬಿದ್ದಿದೆ. ಸ್ಲೋವಾಕಿಯಾದಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಗಳಿಗೆ ಕೇವಲ 3 ವಾರಗಳು ಬಾಕಿ ಇವೆ. ಈ ವೇಳೆ ಈ ಗುಂಡಿನ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೇಲೆಯೇ ಫೈರಿಂಗ್​.. 4 ಬಾರಿ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ 75 ವರ್ಷದ ಬರಹಗಾರ! ಯಾರೀತ?

https://newsfirstlive.com/wp-content/uploads/2024/05/Fire-5.jpg

Load More