ಇಂದು SM ಕೃಷ್ಣ ಅಂತ್ಯಕ್ರಿಯೆ; ವಿಧಿ ವಿಧಾನ ಹೇಗಿರಲಿದೆ? ಯಾರು ನೆರವೇರಿಸಲಿದ್ದಾರೆ?

author-image
Ganesh Nachikethu
Updated On
ಇಂದು SM ಕೃಷ್ಣ ಅಂತ್ಯಕ್ರಿಯೆ; ವಿಧಿ ವಿಧಾನ ಹೇಗಿರಲಿದೆ? ಯಾರು ನೆರವೇರಿಸಲಿದ್ದಾರೆ?
Advertisment
  • ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ
  • ಚಿಕಿತ್ಸೆ ಫಲಿಸದೇ ಸದಾಶಿವನಗರ ಮನೆಯಲ್ಲಿ ಕೊನೆಯುಸಿರೆಳೆದ್ರು
  • ಇಂದು ಮಂಡ್ಯದ ಸೋಮನಹಳ್ಳಿಯಲ್ಲಿ ಎಸ್.ಎಂ ಕೃಷ್ಣ ಅಂತ್ಯಕ್ರಿಯೆ

ಬೆಂಗಳೂರು: ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ತಮ್ಮ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ನಿಧನರಾಗಿದ್ದು, ಇವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಇಂದು ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಗೆ ಈಗಾಗಲೇ ಎಲ್ಲಾ ರೀತಿ ಸಿದ್ಧತೆಗಳು ನಡೆದಿವೆ. ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್​ ಅವರೇ ಅಂತ್ಯಕ್ರಿಯೆ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.

ಅಂತ್ಯಕ್ರಿಯೆ ವಿಧಿ ವಿಧಾನ ಹೇಗಿರಲಿದೆ?

ಎಸ್​​.ಎಂ ಕೃಷ್ಣ ಅವರ ನಿಧನರಾದ ಕಾರಣ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ನಡೆಯಲಿದೆ. ಇಂದು ಮಧ್ಯಾಹ್ನದವರೆಗೂ ಮದ್ದೂರಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಬಳಿಕ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಇದಕ್ಕೂ ಮೊದಲು ವೈದಿಕ ಪುರೋಹಿತರಾದ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ‌ಪೂಜೆ-ಪುನಸ್ಕಾರಗಳು, ಅಂತಿಮ‌ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದು ಬಂದಿದೆ.

ಎಸ್​​.ಎಂ ಕೃಷ್ಣ ಅವರು ಜನಿಸಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ. 1932ರಲ್ಲಿ ಜನಿಸಿದ ಇವರು ಸಿಎಂ ಆಗಿ, ರಾಜ್ಯಪಾಲರಾಗಿ ಮತ್ತು ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಕಾಲ ಕಾಂಗ್ರೆಸ್​ನಲ್ಲೇ ಇದ್ದ ಇವರು ಕೊನೆ ಕಾಲದಲ್ಲಿ ಬಿಜೆಪಿ ಸೇರಿದ್ದರು.

ಇದನ್ನೂ ಓದಿ: ಎಸ್​​.ಎಂ ಕೃಷ್ಣಗೆ ಕೊನೆವರೆಗೂ ಕಾಡುತ್ತಲೇ ಇತ್ತು ಆ ಒಂದು ನೋವು; ಅಸಲಿಗೆ ಏನಾಗಿತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment