ಕನ್ನಡಕ್ಕಾಗಿ ವಾರದ ಹಿಂದಷ್ಟೇ ಪತ್ರ ಬರೆದಿದ್ದ SM ಕೃಷ್ಣ; ಹಿರಿಯ ಮುತ್ಸದ್ದಿಯ ಕೊನೆಯ ಪತ್ರ

author-image
Bheemappa
Updated On
ಕನ್ನಡಕ್ಕಾಗಿ ವಾರದ ಹಿಂದಷ್ಟೇ ಪತ್ರ ಬರೆದಿದ್ದ SM ಕೃಷ್ಣ; ಹಿರಿಯ ಮುತ್ಸದ್ದಿಯ ಕೊನೆಯ ಪತ್ರ
Advertisment
  • ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು SM ಕೃಷ್ಣ ಏನು ಹೇಳಿದ್ದರು?
  • ಜಿಲ್ಲೆಯ ಎಲ್ಲ ಹಿರಿಯರನ್ನು ನೆನಪು ಮಾಡಿಕೊಂಡಿದ್ದ SM ಕೃಷ್ಣ
  • ಹೆಚ್ಚು ಕನ್ನಡ ಮಾತನಾಡುವ ಭಾಷಿಕರು ಇರುವ ಜಿಲ್ಲೆ ಎಂದಿದ್ದರು

ಬೆಂಗಳೂರು: ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರು (92) ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಿಧನರಾಗುವುದಕ್ಕೂ ಕೆಲವು ದಿನಗಳ ಮೊದಲು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಎಸ್​.ಎಂ ಕೃಷ್ಣ ಅವರು ಪತ್ರ ಬರೆದು, ಶುಭಾಶಯಗಳು ತಿಳಿಸಿದ್ದರು.

ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಶುಭಾಶಯಗಳು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್​ರವರ ದೂರದೃಷ್ಠಿಯ ಫಲವಾಗಿ ರೂಪುಗೊಂಡ ಮಂಡ್ಯ ಜಿಲ್ಲೆ ನಾಡಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಭಾಷಿಕರು ಇರುವ ಜಿಲ್ಲೆ. ಇಂತಹ ಇತಿಹಾಸವುಳ್ಳ ನಮ್ಮ ಜಿಲ್ಲೆಯಲ್ಲಿ 3ನೇ ಬಾರಿಗೆ ಆಯೋಜನೆಗೊಂಡಿರುವ ಕನ್ನಡದ ಸಿರಿಹಬ್ಬವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸುತ್ತೇನೆ ಎಂದು ಹೇಳಿದ್ದರು.

ಮಹರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​​ ಅವರ ಕನ್ನಡದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲು ಕನ್ನಡ ಸಾಹಿತ್ಯ ಪರಿಷತನ್ನು ಸ್ಥಾಪಿಸಿದರು. ಅಂದಿನಿಂದ ಕನ್ನಡದ ನುಡಿಹಬ್ಬ ಆಳುವ ಸರ್ಕಾರಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯುತ್ತ ಬಂದಿದೆ. ಸಾಹಿತ್ಯ ಸಮ್ಮೇಳನಗಳು ಕೇವಲ ಜನಜಾತ್ರೆಗಳು ಆಗದೇ ಕನ್ನಡದ ಆಸ್ಮಿತೆಯನ್ನು ಸಾರುವ ಹಬ್ಬವಾಗಿದ್ದು ಇದರಲ್ಲಿ ಕನ್ನಡದ ಹಲವು ವಿದ್ವಾಂಸರ ಲೇಖನಗಳು, ಪುಸ್ತಕಗಳು ಹಾಗೂ ಬರವಣಿಗೆಗಳ ಹೊರಬಂದು ಹಲವು ಓದುಗರಿಗೆ ಸವಿಯೂಟವನ್ನು ಊಣಬಡಿಸಿದೆ ಎಂದಿದ್ದರು.

publive-image

ತಂತ್ರಜ್ಞಾನ ಬೆಳೆದಂತೆ ಕನ್ನಡದ ಆವಿಷ್ಕಾರಗಳು ಪರಿಷ್ಕೃತಗೊಂಡು ರಾಜ್ಯದ ಎಲ್ಲೆಯನ್ನು ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಬಳಕೆ ಎದ್ದು ಕಾಣುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸುವಲ್ಲಿ ಹಲವು ಮಹನೀಯರು ಶ್ರಮಿಸಿದ್ದು ಅದರ ಫಲವಾಗಿ ಅಂದಿನ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಅಧಿಕಾರವಧಿಯಲ್ಲಿ ಅದಕ್ಕೆ ಅಧಿಕೃತ ಮುದ್ರೆಯನ್ನು ಒತ್ತುವುದರ ಮೂಲಕ ಕನ್ನಡಕ್ಕೆ ಅಧಿಕೃತ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದರು.

ನಾಡಿನ ಶ್ರೀಮಂತ ಸಾಹಿತ್ಯ ಪರಂಪರೆಗೆ ಮಂಡ್ಯ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಹಿರಿಯ ಸಾಹಿತಿಗಳಾದ ಪಿಟೀಲು ಚೌಡಯ್ಯ, ಬಿ.ಎಂ ಶ್ರೀಕಂಠಯ್ಯ, ಪು.ತಿ ನರಸಿಂಹಾಚಾರ್, ಕೆ.ಎಸ್ ನರಸಿಂಹಸ್ವಾಮಿ, ಜನಪದ ತಜ್ಞ ಡಾ.ಹೆಚ್​.ಎಲ್​ ನಾಗೇಗೌಡ, ಖ್ಯಾತ ನಟ ಅಂಬರೀಶ್. ಇವರೆಲ್ಲರೂ ಮಂಡ್ಯ ಜಿಲ್ಲೆಯ ಕೀರ್ತಿ ಬೆಳಗಿಸಿ ಅಜರಾಮರರಾದ ಮಯನೀಯರು ಇವರುಗಳನ್ನು ಪ್ರಸ್ತುತ ಸಮ್ಮೇಳನದಲ್ಲಿ ನೆನೆಯುವುದು ಅವಶ್ಯಕ ಎಂದು ಪತ್ರದ ಮೂಲಕ ತಿಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment