/newsfirstlive-kannada/media/post_attachments/wp-content/uploads/2024/12/SM-Krishna_Siddarth.jpg)
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನರಾಗಿದ್ದಾರೆ. ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇವರ ಚಿಕಿತ್ಸೆ ಫಲಿಸದೇ ಸದಾಶಿವನಗರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಸ್.ಎಂ ಕೃಷ್ಣ ಅವರು ಜನಿಸಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ. 1932ರಲ್ಲಿ ಜನಿಸಿದ ಇವರು ಸಿಎಂ ಆಗಿ, ರಾಜ್ಯಪಾಲರಾಗಿ ಮತ್ತು ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಕಾಲ ಕಾಂಗ್ರೆಸ್ನಲ್ಲೇ ಇದ್ದ ಇವರು ಕೊನೆ ಕಾಲದಲ್ಲಿ ಬಿಜೆಪಿ ಸೇರಿದ್ದರು. ಎಸ್.ಎಂ ಕೃಷ್ಣ ಅವರಿಗೆ ಒಂದು ನೋವು ಮಾತ್ರ ಜೀವನಪೂರ್ತಿ ಕಾಡುತ್ತಲೇ ಇತ್ತು.
ಕೊನೆವರೆಗೂ ಕಾಡಿದ್ದ ಅಳಿಯನ ಆತ್ಮಹತ್ಯೆ ನೋವು
ಕೆಫೆ ಕಾಫಿಡೇ ಮಾಲೀಕ ಸಿದ್ದಾರ್ಥ್. ಇವರು ಎಸ್.ಎಂ ಕೃಷ್ಣ ಅವರ ಅಳಿಯ. ಸಿದ್ದಾರ್ಥ್ ಅವರ ಆತ್ಮಹತ್ಯೆ ನೋವು ಮಾತ್ರ ಇವರಿಗೆ ಕೊನೆಯವರೆಗೂ ಕಾಡುತ್ತಲೇ ಇತ್ತು. ಈ ಬಗ್ಗೆ ಸಾಕಷ್ಟು ಬಾರಿ ಎಸ್.ಎಂ ಕೃಷ್ಣ ಅವರೇ ಹೇಳಿಕೊಂಡಿದ್ದಾರೆ.
ಸಿದ್ದಾರ್ಥ್ಗೆ ಏನಾಗಿತ್ತು?
ಐದು ವರ್ಷಗಳ ಹಿಂದೆ 2019ರಲ್ಲಿ ಜುಲೈ 29ರಂದು ಸಂಜೆ ರಾಷ್ಟ್ರೀಯ ಹೆದ್ದಾರಿಯ ಕಲ್ಲಾಪು ಸಮೀಪದ ನೇತ್ರಾವತಿ ಸೇತುವೆ ಬಳಿಯಿಂದ ಸಿದ್ಧಾರ್ಥ್ ನಾಪತ್ತೆಯಾಗಿದ್ದರು. ಬಳಿಕ ಎರಡು ದಿನಗಳ ನಂತರ ಎಂದರೆ ಆಗಸ್ಟ್ 1ರಂದು ಹೊಯ್ಗೆ ಬಜಾರ್ ಎಂಬಲ್ಲಿ ನದಿ ತೀರದಲ್ಲಿ ಸಿದ್ಧಾರ್ಥ್ ಅವರ ಶವ ಪತ್ತೆಯಾಗಿತ್ತು. ಅಂದಿನಿಂದ ಎಸ್.ಎಂ ಕೃಷ್ಣ ಅವರಿಗೆ ಈ ನೋವು ಕಾಡುತ್ತಿತ್ತು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅಕ್ಷರ ದಾಸೋಹ, ಸ್ತ್ರೀ ಶಕ್ತಿ.. SM ಕೃಷ್ಣ ಮುಖ್ಯಮಂತ್ರಿಯಾಗಿ ಜನಮನ ಗೆದ್ದ 10 ಜನಪ್ರಿಯ ಕೆಲಸಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ