/newsfirstlive-kannada/media/post_attachments/wp-content/uploads/2024/12/SM_KRISHAN_3.jpg)
ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣ (92) ಅವರು ಇಂದು ವಿಧಿವಶರಾಗಿದ್ದಾರೆ. ಇವರ ರಾಜಕೀಯ ಜೀವನ ಕುರಿತು ಹೇಳುತ್ತ ಹೋದರೆ ಎಷ್ಟು ಹೇಳಿದರು ಸಾಕಾಗಲ್ಲ. ಏಕೆಂದರೆ ಎಸ್.ಎಂ ಕೃಷ್ಣ ಅವರು ರಾಜಕೀಯದಲ್ಲಿ ಬಹುತೇಕ ಸ್ಥಾನಗಳನ್ನು ಅಲಂಕರಿಸಿದ್ದರು. ಆದರೆ ಇವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಕರ್ನಾಕಟದ ಮುಖ್ಯಮಂತ್ರಿಯಾಗಿದ್ದರು?.
ಎಸ್.ಎಂ ಕೃಷ್ಣ ಅವರು 1962 ರಲ್ಲಿ ಪ್ರಥಮ ಬಾರಿಗೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲೇ ಗೆಲ್ಲುವ ಮೂಲಕ ಶಾಸಕನಾಗಿ ಆಯ್ಕೆಯಾದರು. ಇಲ್ಲಿಂದ ಇವರ ರಾಜಕೀಯ ಜೀವನ ಬೆಳೆಯುತ್ತ ಸಾಗಿತ್ತು. ಸಂಸದರಾಗಿ, ಸಚಿವರಾಗಿ, ಶಾಸಕರಾಗಿ, ಎಂಎಲ್​ಸಿ ಆಗಿ ಕೆಲಸ ಮಾಡಿದ್ದರು. ಆದರೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಮಾತ್ರ ಇವರಿಂದ ದೂರ ಉಳಿದಿತ್ತು. ಆದರೆ ಆ ಸ್ಥಾನ ಕೂಡ ಅವರನ್ನು ಬರಮಾಡಿಕೊಂಡಿತು.
ಇದನ್ನೂ ಓದಿ: ಮಹಾತ್ಮ ಗಾಂಧೀಜಿಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದ SM ಕೃಷ್ಣ.. ಇವರ ಕುಟುಂಬ, ರಾಜಕೀಯ ಜೀವನ ಹೇಗಿತ್ತು?
/newsfirstlive-kannada/media/post_attachments/wp-content/uploads/2024/12/SM_KRISHAN.jpg)
1999ರಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಎಸ್.ಎಂ.ಕೃಷ್ಣ ಅವರು ಮುನ್ನೆಡಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿಯಾಗಿ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು. ಈ ಎಲೆಕ್ಷನ್​ನಲ್ಲಿ ಎಸ್​.ಎಂ ಕೃಷ್ಣ ಅವರು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎಸ್.ಎಂ.ಕೃಷ್ಣ ಅವರು ಕರ್ನಾಟಕದ 16ನೇ ಮುಖ್ಯಮಂತ್ರಿ ಆಗಿ ನೇಮಕವಾದರು. ಈ ಮೂಲಕ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮೊದಲ ನಾಯಕ ಮುಖ್ಯಮಂತ್ರಿ ಆಗಿರುವ ಹೆಗ್ಗಳಿಕೆಗೆ ಕೃಷ್ಣ ಅವರು ಪಾತ್ರರಾಗಿದ್ದರು. 11 ಅಕ್ಟೋಬರ್ 1999 ರಿಂದ 28 ಮೇ 2004ರವರೆಗೆ ಅಧಿಕಾರ ನಡೆಸಿದ್ದರು. ಒಟ್ಟು 4 ವರ್ಷ 230 ದಿನಗಳು ಕರ್ನಾಟಕವನ್ನು ಆಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us