/newsfirstlive-kannada/media/post_attachments/wp-content/uploads/2024/12/SM-KRISHNA-12.jpg)
ಮಂಡ್ಯ: ಕರ್ನಾಟಕ ರಾಜಕಾರಣ ಕಂಡ ಹಿರಿಯ ಚೇತನ ಅಂದರೆ ಅದು ಎಸ್ಎಂ ಕೃಷ್ಣ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್ಎಂ ಕೃಷ್ಣ ಅವರು ಇನ್ನು ನೆನಪು ಮಾತ್ರ. ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರು ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
ಬೆನ್ನಲ್ಲೇ 60 ವರ್ಷಗಳ ಹಿಂದೆ ಸ್ನೇಹಿತನಿಗೆ ಬರೆದಿದ್ದ ಪತ್ರವೊಂದು ವೈರಲ್ ಆಗಿದೆ. ಜಪಾನ್ನ ಟೋಕಿಯೋದಿಂದ ಮದ್ದೂರು ತಾಲೂಕಿನ ಆನೆದೊಡ್ಡಿಯಲ್ಲಿರುವ ತಮ್ಮಯ್ಯ ಅನ್ನೋರಿಗೆ ಪತ್ರ ಬರೆದಿದ್ದರು. ವಿಶೇಷ ಅಂದರೆ ಕೃಷ್ಣ ಕನ್ನಡದಲ್ಲೇ ಪತ್ರ ಬರೆದಿದ್ದರು. 25-12-1965ರಲ್ಲಿ ಬರೆದಿದ್ದ ಪತ್ರ ಇದೀಗ ವೈರಲ್ ಆಗಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಹುಟ್ಟೂರು, ಮಾತೃಭಾಷೆ ಪ್ರೇಮವನ್ನು ಎಂದಿಗೂ ಮರೆತಿರಲಿಲ್ಲ ಎಸ್ಎಂ ಕೃಷ್ಣ.
ಪತ್ರದಲ್ಲಿ ಏನಿದೆ..?
ಮಾನ್ಯ ಆನೆದೊಡ್ಡಿ ತಮ್ಮಯ್ಯನವರಿಗೆ ಕೃಷ್ಣನು ಮಾಡುವ ಅನಂತ ನಮಸ್ಕಾರಗಳು. ನಾನು ಕ್ಷೇಮ. ಅಲ್ಲಿ ನೀವು, ನಿಮ್ಮ ತಂದೆಯವರು ಮತ್ತು ಕುಟುಂಬದವರು ಆರೋಗ್ಯವೆಂದು ನಾ ನಂಬುತ್ತೇನೆ.
ಸಮ್ಮೇಳನ ಮುಗಿಸಿಕೊಂಡು ಈಗ ಜಪಾನ್ಗೆ ಬಂದಿದ್ದೇನೆ. ಈ ಕಾಗದದವನ್ನು ಅತೀ ವೇಗದಲ್ಲಿ ಬರೆಯುತ್ತಿದ್ದೇನೆ. ನಾನು ಪ್ರಯಾಣಿಸುತ್ತಿದ್ದ ವಾಹನ ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಹೋಗುತ್ತಿದೆ. ಜಪಾನ್ ಅತಿ ಮುಂದುವರಿದ ದೇಶ. ಆದರೂ ಅವರು ಸಂಸ್ಕೃತಿಯನ್ನು ಬಿಟ್ಟಿಲ್ಲ. ಕೈಗಾರಿಕಾ ಕ್ಷೇತದಲ್ಲಿ ತುಂಬಾನೇ ಮುಂದುವರಿದಿದೆ. ಸಣ್ಣ ಸಣ್ಣ ಹಳ್ಳಿಗಳಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಅದು ಅತಿ ಅದ್ಭುತವಾದುದು. ಮಳೆ ಹೋಯಿತು ಎಂದು ಊರಿಂದ ಕಾಗದ ಬಂತು. ನಿಮ್ಮ ತಂದೆಯವರಿಗೂ ನಮಸ್ಕಾರಗಳು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಕೆಲ ವಿಚಾರಗಳನ್ನು ಬರೆದಿದ್ದಾರೆ
ಇದನ್ನೂ ಓದಿ:ಎಲ್ಲಾ ರಾಜಕಾರಣಿಯಂತೆ ಇರಲಿಲ್ಲ SM ಕೃಷ್ಣ; ಅವರ ಶೈಕ್ಷಣಿಕ ಅರ್ಹತೆ ಏನಾಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ