/newsfirstlive-kannada/media/post_attachments/wp-content/uploads/2024/03/MONEY.jpg)
ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ದಿನಗಣನೆ ಶುರುವಾಗಿದೆ. ದೀಪಾವಳಿ ಹಬ್ಬದ ಸೀಸನ್​ಗೆ ಉಡುಗೊರೆ ಮತ್ತು ಅಲಂಕಾರ ಉತ್ಪನ್ನಗಳಿಗೆ ಭಾರೀ ಡಿಮ್ಯಾಂಡ್​​. ಎಲ್ಲರಿಗೂ ಈ ವಸ್ತುಗಳು ಬೇಕೇ ಬೇಕು. ಹಾಗಾಗಿ ವ್ಯಾಪಾರ ಮಾಡಲು ನಿಮಗೆ ಇದು ಸುವರ್ಣಾವಕಾಶ. ಅದರಲ್ಲೂ ಕಡಿಮೆ ಹೂಡಿಕೆ ಮಾಡಿ ಲಕ್ಷ ಲಕ್ಷ ದುಡಿಯಬಹುದು. ಈ ರೀತಿಯ ಮೂರು ವ್ಯಾಪಾರಗಳು ನಿಮ್ಮ ಮುಂದೆ!
ಗಿಫ್ಟ್ ಹ್ಯಾಂಪರ್
ದೀಪಾವಳಿ ಹಬ್ಬಕ್ಕೆ ಉಡುಗೊರೆ ನೀಡುವುದು ವಾಡಿಕೆ. ಅದರಲ್ಲೂ ಏನಾದ್ರೂ ಗಿಫ್ಟ್​ ನೀಡದೆ ಹಬ್ಬದ ಆಚರಣೆ ಮುಗಿಯೋದೆ ಇಲ್ಲ. ಹಾಗಾಗಿ ನೀವು ಸ್ವೀಟ್​​, ಡ್ರೈ ಫ್ರೂಟ್ಸ್, ಲಕ್ಷ್ಮಿ ಮತ್ತು ಗಣೇಶನ ವಿಗ್ರಹಗಳು, ದೀಪಗಳು ಹೀಗೆ ಹಲವು ವಸ್ತುಗಳ ಗಿಫ್ಟ್ ಹ್ಯಾಂಪರ್ ಮಾರಾಟ ಮಾಡಬಹುದು. ಈ ಮೂಲಕ ಕಡಿಮೆ ದುಡ್ಡಲ್ಲಿ ಲಕ್ಷ ಲಕ್ಷ ದುಡಿಯಬಹುದು.
/newsfirstlive-kannada/media/post_attachments/wp-content/uploads/2024/10/Eco-Freindly-Crackers.jpg)
ಪರಿಸರ ಸ್ನೇಹಿ ಪಟಾಕಿ
ಜನ ದೀಪಾವಳಿಗೆ ಪಟಾಕಿ ಹೊಡೆಯೋದು ಸಾಮಾನ್ಯ. ಪಟಾಕಿ ಇಲ್ಲದೆ ದೀಪಾವಳಿ ಮುಗಿಯೋದೆ ಇಲ್ಲ. ನೀವು ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಪರಿಸರ ಸ್ನೇಹಿ ಪಟಾಕಿ ವ್ಯಾಪಾರ ಮಾಡಬಹುದು. ಹೆಚ್ಚಿನ ಜನರಿಗೆ ಪರಿಸರ ಪ್ರಜ್ಞೆ ಇರುವ ಕಾರಣ ಇದು ಒಳ್ಳೆಯ ಲಾಭ ತಂದುಕೊಡಲಿದೆ.
ದೀಪಗಳ ಮಾರಾಟ
ಇನ್ನು, ದೀಪಾವಳಿಗೆ ಬೇಕಾದದ್ದು ಪ್ರಮುಖವಾಗಿ ದೀಪಗಳು. ದೀಪಗಳು ಬೆಳಗಿಸುವುದು ಒಂದು ಸಂಪ್ರಾದಾಯ. ಕ್ಲೇ ಹಣತೆ, ಎಲ್‌ಇಡಿ ಹಣತೆ, ತೇಲುವ ಹಣತೆ, ಟೆರಾಕೋಟಾ ಹಣತೆ ಸೇರಿದಂತೆ ಹಲವು ದೀಪಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು.
ಇದನ್ನೂ ಓದಿ:ಮಾವಿನ ಎಲೆಯಲ್ಲಿವೆ ಹಲವು ಔಷಧಿ ಗುಣಗಳು! ಇದರ ಸೇವನೆಯಿಂದ ಏನೆಲ್ಲಾ ತಡೆಯಬಹುದು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us