newsfirstkannada.com

ಮಧ್ಯಮ ವರ್ಗದವರಿಗೆ ರಿಲೀಫ್.. ಹೊಸ ಆದಾಯ ತೆರಿಗೆ ನೀತಿಯಿಂದ ನಿಮಗೆ ಉಳಿತಾಯ ಎಷ್ಟು? ಹೇಗೆ?

Share :

Published July 23, 2024 at 2:28pm

    ಆದಾಯ ತೆರಿಗೆದಾರರಿಗೆ ಬಜೆಟ್​ನಲ್ಲಿ ಏನು ಸಿಕ್ತು, ಏನು ಇಲ್ಲ?

    ವೈಯಕ್ತಿಕ ಆದಾಯ ತೆರಿಗೆ ನೀತಿಯಲ್ಲಿ ಬದಲಾವಣೆ ಆಗಿದ್ದೇನು?

    ಸ್ಟಾಂಡರ್ಡ್ ಡಿಡಕ್ಷನ್​ನಲ್ಲಿ ಕೊಂಚ ರಿಲೀಫ್ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ಬಜೆಟ್​ನಲ್ಲಿ ವೈಯಕ್ತಿಕ ಆದಾಯ ತೆರಿಗೆಯ ವಿನಾಯ್ತಿಯಲ್ಲಿ ಭಾರೀ ಬದಲಾವಣೆಯಾಗುವ ನಿರೀಕ್ಷೆ ಇತ್ತು. ಆದಾಯ ತೆರಿಗೆಯ ವಿನಾಯ್ತಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ನಿರೀಕ್ಷೆಯೂ ದೇಶದ ಜನರಲ್ಲಿತ್ತು. ಆದ್ರೆ ಆ ನಿರೀಕ್ಷೆ ಕೈಗೂಡಿಸುವ ಮನಸ್ಸನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಆದ್ರೂ ಕೂಡ ಒಂದು ಸಣ್ಣ ನಿರಾಳತೆಯನ್ನು ನೀಡಿದೆ. ಅದು ಸ್ಟಾಂಡರ್ಡ್​ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವ ಮೂಲಕ ತಿಂಗಳ ಸಂಬಳದಾರರಿಗೆ ಕೊಂಚ ರಿಲೀಫ್ ಕೊಟ್ಟಿದೆ.

ಈ ಮೊದಲು ಇದ್ದ ಸ್ಟಾಂಡರ್ಡ್ ಡಿಡಕ್ಷನ್ ಮಿತಿ 50 ಸಾವಿರರ ರೂಪಾಯಿಯಿಂದ 75 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಪೆನ್ಷನ್​ದಾರರಿಗೆ ಇದ್ದ 15 ಸಾವಿರ ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ 25 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಅಸಲಿಗೆ ಈ ಸ್ಟಾಂಡರ್ಡ್ ಡಿಡಕ್ಷನ್​ನ ಲೆಕ್ಕಾಚಾರ ಹೇಗೆ ಅನ್ನೋದು ನೋಡುವುದಾದ್ರೆ ಒಂದು ಉದಾಹರಣೆಯ ಮೂಲಕ ನೋಡಬಹುದು.

ಇದನ್ನೂ ಓದಿ: Budget2024: ಬಜೆಟ್‌ ಬಳಿಕ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? ಇಲ್ಲಿದೆ ಮಾಹಿತಿ

ಈಗ ಅದರಲ್ಲಿ ನೀವು ನ್ಯೂ ರಿಜಿಮ್ ಅಡಿಯಲ್ಲಿ ಟ್ಯಾಕ್ಸ್​ ಕಟ್ಟುವುದನ್ನು ಆಯ್ಕೆ ಮಾಡಿದ್ರೆ ನಿಮ್ಮ ಸಂಬಳ ವರ್ಷಕ್ಕೆ 5 ಲಕ್ಷ ರೂಪಾಯಿ ಇದ್ದಾಗ, ಅದರಲ್ಲಿ 75 ಸಾವಿರ ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ ಕಟ್ ಆಗುತ್ತದೆ. ಆಗ ಉಳಿಯುವುದು 4.25 ಸಾವಿರ ರೂಪಾಯಿ ಆ 4.25 ಸಾವಿರ ರೂಪಾಯಿಗೆ ನೇರವಾಗಿ ಶೇಕಡಾ 5ರಷ್ಟು ತೆರಿಗೆಯನ್ನು ನೀವು ಸರ್ಕಾರಕ್ಕೆ ವರ್ಷಕ್ಕೆ ಕಟ್ಟಬೇಕು. ಅಂದ್ರೆ ವಾರ್ಷಿಕವಾಗಿ 21 ಸಾವಿರದ 250 ರೂಪಾಯಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಹಳೆಯ ನಿಯಮದ ಪ್ರಕಾರದ ಅಡಿಯಲ್ಲಿಯೇ ನೀವು ನಿಮ್ಮ ತೆರಿಗೆ ಪಾವತಿ ನೀತಿಯನ್ನು ಅಳವಡಿಸಿಕೊಂಡಿದ್ದರೆ. ನಿಮಗೆ ಕೇವಲ ಅದೇ ಹಳೆಯ 50 ಸಾವಿರ ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್​ ಸಿಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಧ್ಯಮ ವರ್ಗದವರಿಗೆ ರಿಲೀಫ್.. ಹೊಸ ಆದಾಯ ತೆರಿಗೆ ನೀತಿಯಿಂದ ನಿಮಗೆ ಉಳಿತಾಯ ಎಷ್ಟು? ಹೇಗೆ?

https://newsfirstlive.com/wp-content/uploads/2024/07/TAX_X_1.jpg

Load More