newsfirstkannada.com

Smart Ring: ಈ ಉಂಗುರ ಧರಿಸಿದ್ರೆ ಫೋನ್​ ಪೇ, ಗೂಗಲ್​ ಪೇ ಏನೂ ಬೇಡ! ಶಾಪಿಂಗ್​ ಮಾಡೋದು ಮತ್ತಷ್ಟೂ ಸುಲಭ

Share :

Published April 10, 2024 at 12:54pm

Update April 10, 2024 at 12:56pm

  ಡೆಬಿಟ್​ ಅಥವಾ ಕ್ರೆಡಿಟ್​ ಕಾರ್ಡ್​ಗಳಿಲ್ಲದೆ ಕೆಲಸ ಮಾಡುತ್ತೆ ಈ ಸ್ಮಾರ್ಟ್​ರಿಂಗ್​

  ಸ್ಮಾರ್ಟ್​ರಿಂಗ್​ ನಗದು ರಹಿತ ವ್ಯವಹಾರ ಮಾಡಲು ಯೋಗ್ಯವಾಗಿದೆ

  ವೈರ್​ಲೆಸ್​ ಪೇಮೆಂಟ್​ ಚಿಪ್​ಗಳನ್ನು ಒಳಗೊಂಡಿದೆ ಈ ಸ್ಮಾರ್ಟ್​ರಿಂಗ್

ಭಾರತೀಯ ಸಂಸ್ಕೃತಿಯನ್ನು ಅರಿತವರೆಲ್ಲರೂ ಉಂಗುರವನ್ನು ತೊಡುತ್ತಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಇದೊಂದು ಫ್ಯಾಷನ್​ ಆಗಿದೆ. ಮಾರುಕಟ್ಟೆಯಲ್ಲಿ ನಾನಾ ತರಹದ ಉಂಗುರಗಳು ಬಂದಿವೆ. ಅದರ ಸಾಲಿಗೆ ಸ್ಮಾರ್ಟ್​ ಉಂಗುರಗಳು ಸೇರಿವೆ.

ಚಿನ್ನ, ಬೆಳ್ಳಿ, ಲೋಹದ ಉಂಗುರವನ್ನು ತೊಡುವವರಿದ್ದಾರೆ. ಆದರೀಗ ಸ್ಮಾರ್ಟ್​ ಉಂಗುರಗಳು ಸಹ ಮಾರುಕಟ್ಟೆಗೆ ಧಾವಿಸಿದೆ. ಇವು ಸುಲಭವಾಗಿ ನಗದು ರಹಿತ ಪಾವತಿಯವನ್ನು ಮಾಡುವ ಕಾರ್ಯವನ್ನು ಮಾಡುತ್ತಿವೆ.

ಸ್ಮಾರ್ಟ್​ ರಿಂಗ್​ಗಳು ಯಾವುದೇ ಡೆಬಿಟ್​ ಅಥವಾ ಕ್ರೆಡಿಟ್​ ಕಾರ್ಡ್​ಗಳಿಲ್ಲದೆ ಮತ್ತು ಫೋನ್​ಪೇ, ಪೇಟಿಯಂ ಅಗತ್ಯವಿಲ್ಲದೆ ನಗದು ರಹಿತ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಅಚ್ಚರಿ ಸಂಗತಿ ಎಂದರೆ ಸ್ಮಾರ್ಟ್​ರಿಂಗ್​ ಅನ್ನು ಹಾಂಗ್​ ಕಾಂಗ್​ ಮೂಲಕ ಟೋಪಿ ಎಂಬ ಕಂಪನಿ ಅಭಿವೃದ್ಧಿಪಡಿಸಿದ್ದು, ಇದು ವೈರ್​ಲೆಸ್​ ಪೇಮೆಂಟ್​ ಚಿಪ್​ಗಳನ್ನು ಒಳಗೊಂಡಿದೆ.

ಸ್ಮಾರ್ಟ್​ ರಿಂಗ್​ ಫೋನ್​ ಅಪ್ಲಿಕೇಶನ್​ ಮೂಲಕ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್​ ರಿಂಗ್​ ಬಳಕೆದಾರರು ಆಯಾ ಆ್ಯಪ್​ಗಳ ಮೂಲಕ ಬ್ಯಾಂಕ್​ ಖಾತೆಯನ್ನ ಲಿಂಕ್​ ಮಾಡಬೇಕು. ಇದರ ಅನ್ವಯ ಸ್ಮಾರ್ಟ್​ ರಿಂಗ್​ ಕಾರ್ಯ ನಿರ್ವಹಿಸುತ್ತದೆ.

ಮತ್ತೊಂದು ಅಚ್ಚರಿ ಸಂಗತಿ ಎಂದರೆ ಟೋಪಿ ಕಂಪನಿ ತಯಾರಿಸಿರುವ ಈ ಸ್ಮಾರ್ಟ್​ರಿಂಗ್​ ಅನ್ನು ಚಾರ್ಜ್​ ಮಾಡಬೇಕಿದೆ. ಇದನ್ನು ಶಾಪಿಂಗ್​ ಮಾಲ್​ಗಳಲ್ಲಿರುವ ಪೇಮೆಂಟ್​ ಯಂತ್ರದ ಬಳಿ ತೋರಿಸಿದಂತೆಯೇ ನಗದು ರಹಿತ ಪಾವತಿ ಮಾಡುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ 18.28 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸೀಜ್.. ಎಷ್ಟು ಕೋಟಿ ಹಣ ಸೀಜ್ ಮಾಡಲಾಗಿದೆ..?

ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಸ್ಮಾರ್ಟ್​ರಿಂಗ್​ ಗ್ರಾಹಕರ ಮನಸೆಳೆದಿದೆ. ಭಾರತದಲ್ಲೂ ಎಲೆಕ್ಟ್ರಾನಿಕ್ಸ್​ ಸ್ಮಾರ್ಟ್​ಅಪ್ ಎಂಬ ಕಂಪನಿ​ ಸೆವೆನ್​ 7 ರಿಂಗ್​ ಎಂಬ ಸ್ಮಾರ್ಟ್​ರಿಂಗ್​ ಪರಿಚಯಿಸಿದೆ. ಇದು 7 ಗಾತ್ರದಲ್ಲಿ ಗ್ರಾಹಕರಿಗೆ ಸಿಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Smart Ring: ಈ ಉಂಗುರ ಧರಿಸಿದ್ರೆ ಫೋನ್​ ಪೇ, ಗೂಗಲ್​ ಪೇ ಏನೂ ಬೇಡ! ಶಾಪಿಂಗ್​ ಮಾಡೋದು ಮತ್ತಷ್ಟೂ ಸುಲಭ

https://newsfirstlive.com/wp-content/uploads/2024/04/Smart-Ring.jpg

Load More