/newsfirstlive-kannada/media/post_attachments/wp-content/uploads/2024/09/Iphone-16-New.jpg)
Smartphone ಜೀವಿತಾವಧಿ ಎಷ್ಟು? ಒಂದು ಫೋನ್ ಖರೀದಿಸಿದ ಮೇಲೆ ಎಷ್ಟು ವರ್ಷಗಳವರೆಗೆ ಅದನ್ನು ಬಳಸಬಹುದು? ಈ ಪ್ರಶ್ನೆಗೆ ಉತ್ತರ ಕೆಲವರಿಗೆ ತಿಳಿದಿರಬಹುದು. ಇನ್ನೂ ಅನೇಕರಿಗೆ ತಿಳಿದಿಲ್ಲ. ಇಂದು ಮೊಬೈಲ್‌ಗಳು ಕೇವಲ ಕರೆ ಮಾಡಲು ಮಾತ್ರ ಸೀಮಿತವಾಗಿಲ್ಲ. ಸ್ಮಾರ್ಟ್ಫೋನ್ಗಳಿಂದ ಲೆಕ್ಕಕ್ಕೆ ಸಿಗದಷ್ಟು ಲಾಭವೂ ಇದೆ, ಅಪಾಯವೂ ಇದೆ.
ದೈತ್ಯ Apple ಕಂಪನಿ ತನ್ನ ಹಳೆಯ ಫೋನ್ಗಳನ್ನು ಬಳಕೆಯಲ್ಲಿಲ್ಲದಂತೆ ಮಾಡ್ತದೆ. ಕಂಪನಿ ಪ್ರಕಾರ, ಐಫೋನ್ 5 ಮತ್ತು 7 ವರ್ಷಗಳ ಕಾಲ ಬಳಸಬಹುದು. ಒಂದು ಫೋನ್ ರಿಲೀಸ್ ಆಗಿ 7 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಾರಾಟ ಆಗುತ್ತಿದ್ದರೆ ಆ ಫೋನ್ ಅನ್ನು ವಿಂಟೇಜ್ ವಿಭಾಗದಲ್ಲಿ ಕಂಪನಿ ಇಡುತ್ತದೆ. ಆದರೆ ಆಂಡ್ರಾಯ್ಡ್ ಫೋನ್ ತಯಾರಿಕಾ ಕಂಪನಿಯು ಫೋನ್ ಎಷ್ಟು ವರ್ಷ ಬಳಸಬೇಕೆಂದು ಹೇಳಲ್ಲ.
ಇದನ್ನೂ ಓದಿ:ಎರಡು ರೋಲ್ಸ್ ರಾಯ್ಸ್, 10 ಮರ್ಸಿಡಿಸ್ ಕಾರ್ಗಳಿಗೆ ಸಮ ಈ ಕೋಣದ ಬೆಲೆ! ಇದರ ರೇಟ್ ಎಷ್ಟು ಕೋಟಿ ಗೊತ್ತಾ?
ನಿಮ್ಮ ಫೋನ್ ಯಾವಾಗ ಬದಲಾಯಿಸಬೇಕು?
ಹೊಸ ಫೋನ್ ಮಾರುಕಟ್ಟೆಗೆ ಬಂದಾಗ ಎಷ್ಟು ವರ್ಷಗಳವರೆಗೆ ಸಾಫ್ಟ್‌ವೇರ್ ಮತ್ತು ಸೆಕ್ಯೂರಿಟಿ ಅಪ್ಡೇಟ್ಸ್ ಪಡೆಯುತ್ತದೆ ಎಂಬುದನ್ನು ಕಂಪನಿ ತಿಳಿಸುತ್ತದೆ. ಮಾರುಕಟ್ಟೆಯಲ್ಲಿರುವ ಕೆಲವು ಕಂಪನಿಗಳು 5 ವರ್ಷಗಳವರೆಗೆ ನವೀಕರಣಗಳನ್ನು ಒದಗಿಸಿದರೆ, ಕೆಲವು ಕಂಪನಿಗಳು 7 ವರ್ಷಗಳವರೆಗೆ ನವೀಕರಣಗಳನ್ನು ಒದಗಿಸುತ್ತವೆ.
ನೀವು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಫೋನ್ ಬಳಸಿದ್ದರೆ ಮತ್ತು ನಿಮ್ಮ ಫೋನ್ ಕಂಪನಿಯಿಂದ ಅಪ್ಡೇಟ್ಸ್ ಸ್ವೀಕರಿಸದಿದ್ದರೆ ಸ್ಮಾರ್ಟ್ಫೋನ್ ಹಳೆಯದಾಗಿದೆ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಫೋನ್ ಬಳಸಲು ಯೋಗ್ಯವಲ್ಲ. ಹೊಸ ಫೋನ್ ಖರೀದಿಸೋದು ಒಳ್ಳೆಯದು.
ಇದನ್ನೂ ಓದಿ:ನಿಮ್ಮ ಫೋನ್, ಲ್ಯಾಪ್ಟಾಪ್ ರಕ್ಷಣೆಗೆ ಬರ್ತಿದೆ AI; ಸೈಬರ್ ವಂಚನೆ ಕಂಟ್ರೋಲ್ಗೆ ಇದೇ ಬ್ರಹ್ಮಾಸ್ತ್ರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ