ಮತ್ತೆ ಕಿರುತೆರೆ ಲೋಕಕ್ಕೆ ಮರಳಿದ ಸ್ಮೃತಿ ಇರಾನಿ.. ತುಳಸಿ ಪಾತ್ರದ ಫಸ್ಟ್​ ಲುಕ್ ಔಟ್​..

author-image
Veena Gangani
Updated On
ಮತ್ತೆ ಕಿರುತೆರೆ ಲೋಕಕ್ಕೆ ಮರಳಿದ ಸ್ಮೃತಿ ಇರಾನಿ.. ತುಳಸಿ ಪಾತ್ರದ ಫಸ್ಟ್​ ಲುಕ್ ಔಟ್​..
Advertisment
  • ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ ಫೋಟೋಗೆ ನೆಟ್ಟಿಗರು ಫಿದಾ!
  • ಮಿಸ್ ಇಂಡಿಯಾ ಸ್ಪರ್ಧಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಚೆಲುವೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಸ್ಮೃತಿ ಇರಾನಿ

ಮಾಜಿ ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಜೊತೆಗೆ ತಮಗನ್ನಿಸಿದ್ದನ್ನು ಅನುಯಾಯಿಗಳೊಂದಿಗೆ ಆಗಾಗ ಶೇರ್ ಮಾಡುತ್ತಿರುತ್ತಾರೆ.

ಇದನ್ನೂ ಓದಿ: ‘ರಾಮಾಯಣ’ದಲ್ಲಿ ನಟನೆಗಾಗಿ ರಣಬೀರ್ ಕಪೂರ್​, ಸಾಯಿ ಪಲ್ಲವಿಗೆ ಕೋಟಿ ಕೋಟಿ ದುಡ್ಡು..!

ಆದರೆ ಇದೀಗ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಹು ಸಮಯದ ಬಳಿಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ. ಸ್ಮೃತಿ ಇರಾನಿ ಒಂದು ಕಾಲದದಲ್ಲಿ ಕಿರುತೆರೆ ಹಿರಿತೆರೆಯಲ್ಲಿ ಮಿಂಚಿದವರು. 1998ರಲ್ಲಿ ಸ್ಮೃತಿ ಇರಾನಿ ಮಿಸ್ ಇಂಡಿಯಾ ಸ್ಪರ್ಧಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ ಸ್ಮೃತಿ ಇರಾನಿ ಅವರು 2000ರಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ' ಎನ್ನುವ ಧಾರಾವಾಹಿಯಲ್ಲಿ ಸ್ಮೃತಿ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತುಳಸಿ ವಿರಾನಿ ಪಾತ್ರದಲ್ಲಿ ಅವರ ಪಾತ್ರವು ರಾತ್ರೋರಾತ್ರಿ ಬಹಳಷ್ಟು ಅಭಿಮಾನಿಗಳು, ಮೆಚ್ಚುಗೆ ಮತ್ತು ಸ್ಟಾರ್‌ಡಮ್ ಅನ್ನು ಗಳಿಸಿತು. ನಂತರ ಅವರು ಅನೇಕ ಇತರ ಟಿವಿ ಕಾರ್ಯಕ್ರಮಗಳನ್ನು ಮಾಡಿದರು. ಸತತ 7 ವರ್ಷ ಈ ಧಾರಾವಾಹಿಯೇ ನಂ.1 ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

publive-image

2008ರ ನವೆಂಬರ್‌ನಲ್ಲಿ ಈ ಧಾರಾವಾಹಿ ಮುಕ್ತಾಯ ಕಂಡಿತ್ತು. ಇದೀಗ ಸ್ಮತಿ ಸೀರಿಯಲ್ ಜಗತ್ತಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. 'ಕ್ಯೂಂಕಿ ಸಾಸ್ ಬಿ ಕಭಿ ಬಹು ದಿ ಸೀಸನ್ -2' ಮೂಲಕ ಸ್ಮೃತಿ ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದಾರೆ. ಹೀಗಾಗಿ ಕಿರುತೆರೆ ಲೋಕದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸ್ಮೃತಿ ಇರಾನಿ ಮತ್ತೆ ಟಿವಿ ಲೋಕಕ್ಕೆ ಬಂದಿದ್ದು, ಅವರನ್ನು ತುಳಸಿ ವೀರ್ವಾನಿ ಪಾತ್ರದಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಈ ನಡುವೆ ಸ್ಮೃತಿ ಇರಾನಿ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಸಾಂಪ್ರದಾಯಿಕ ಗೃಹಿಣಿಯ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದು, ಕೆಂಪು ಬಿಂದಿ, ಕಪ್ಪು ಮಣಿಗಳ ಮಂಗಳಸೂತ್ರದಿಂದ ಲೇಯರ್ ಮಾಡಲಾದ ಆಭರಣಗಳಲ್ಲಿ ಅವರು ಮಿಂಚಿದ್ದಾರೆ. ಅವರ ಪಾತ್ರ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಿಹಿರ್ ವಿರಾನಿಯಾಗಿ ಕಾಣಿಸಿಕೊಂಡಿದ್ದ ಅಮರ್ ಉಪಾಧ್ಯಾಯ ಅವರು ಕೂಡ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್ -2'ಗೆ ಮರಳಿದ್ದಾರೆ. ಸೆಟ್‌ನಲ್ಲಿನ ಕೆಲ ಬದಲಾವಣೆ ಕೆಲಸದಿಂದಾಗಿ ಧಾರಾವಾಹಿ ಆರಂಭ ಸ್ವಲ್ಪ ವಿಳಂಬವಾಗಲಿದೆ ಎನ್ನಲಾಗಿದೆ. ಏಕ್ತಾ ಕಪೂರ್ ತನ್ನ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment