ಸ್ಮೃತಿ ಮಂದನಾ, ಕೌರ್​ ಭರ್ಜರಿ ಸೆಂಚುರಿ.. ಟೀಮ್ ಇಂಡಿಯಾ ನೀಡಿದ ಬೃಹತ್​ ಟಾರ್ಗೆಟ್​ಗೆ ಬೆಚ್ಚಿಬಿದ್ದ ಆಫ್ರಿಕಾ

author-image
Bheemappa
Updated On
ಸ್ಮೃತಿ ಮಂದನಾ, ಕೌರ್​ ಭರ್ಜರಿ ಸೆಂಚುರಿ.. ಟೀಮ್ ಇಂಡಿಯಾ ನೀಡಿದ ಬೃಹತ್​ ಟಾರ್ಗೆಟ್​ಗೆ ಬೆಚ್ಚಿಬಿದ್ದ ಆಫ್ರಿಕಾ
Advertisment
  • ಕೇವಲ 3 ವಿಕೆಟ್​ಗೆ 300 ಗಡಿ ದಾಟಿದ ಭಾರತದ ಮಹಿಳಾ ತಂಡ
  • ಸತತ ಎರಡನೇ ಶತಕ ಸಿಡಿಸಿದ ಆರ್​ಸಿಬಿಯ ಆಟಗಾರ್ತಿ ಸ್ಮೃತಿ
  • ಮಂದನಾ, ಕೌರ್​ ಬ್ಯಾಟಿಂಗ್​ನಿಂದ ಬೃಹತ್ ರನ್ ಪೇರಿಸಿದ ತಂಡ

ಐಸಿಸಿ ಚಾಂಪಿಯನ್​ಶಿಪ್ ಟೂರ್ನಿಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಹಿಳಾ ತಂಡ 325 ರನ್​ಗಳ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ದಕ್ಷಿಣ ಆಫ್ರಿಕಾ ವುಮೆನ್ಸ್​ ತಂಡಕ್ಕೆ ನೀಡಿದೆ. ಕ್ಯಾಪ್ಟನ್​ ಹರ್ಮನ್​ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದನಾ ಅವರ ಸೆಂಚುರಿ ನೆರವಿನಿಂದ ಭಾರತ ಈ ಬೃಹತ್ ರನ್​ಗಳನ್ನು ಕಲೆ ಹಾಕಿದೆ.

ಇದನ್ನೂ ಓದಿ: ವಿರಾಟ್​ ಉಗ್ರರೂಪ, ಎದುರಾಳಿಗಳಿಗೆ ಖಡಕ್​ ವಾರ್ನ್​.. ಕೊಹ್ಲಿಗೆ ಕಂಟಕ ಆಗ್ತಾರಾ ಯಶಸ್ವಿ ಜೈಸ್ವಾಲ್?

publive-image

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ವಿರುದ್ಧ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು. ಬಳಿಕ ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಸ್ಮೃತಿ ಮಂದನಾ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭವೇನು ಪಡೆಯಲಿಲ್ಲ. ತಂಡದ ಮೊತ್ತ 38 ರನ್ ಇರುವಾಗಲೇ ಶಫಾಲಿ ವರ್ಮಾ ಔಟ್ ಆದರು. ಬಳಿಕ ಬಂದ ಹೆಮಲತಾ 24 ರನ್ ಗಳಿಸಿ ಔಟ್ ಆಗಿದರು. ಇದು ತಂಡಕ್ಕೆ ಹಿನ್ನಡೆಯಾದಂತೆ ಅಯಿತು. ಆದರೆ ಸ್ಮೃತಿ ಮಂದನಾ ಕ್ರೀಸ್​ ಕಚ್ಚಿ ಬ್ಯಾಟಿಂಗ್ ಮುಂದುವರೆಸಿದ್ದರು.

ಇದನ್ನೂ ಓದಿ:ಮುಲಾಜಿಲ್ಲದೇ ನಟ ದರ್ಶನ್ ಧರಿಸಿದ್ದ ವಿಗ್ ಬಿಚ್ಚಿಸಿದ ಪೊಲೀಸರು; ಕಾರಣವೇನು?


">June 19, 2024

ಸ್ಮೃತಿ ಮಂದನಾ ಅಬ್ಬರದ ಬ್ಯಾಟಿಂಗ್ ಮುಂದುವರೆಸಿ ಕೇವಲ 103 ಎಸೆತಗಳಲ್ಲಿ ಹಂಡ್ರೆಡ್​ ಬಾರಿಸಿ ದಾಖಲೆ ಬರೆದರು. ಈ ಟೂರ್ನಿಯಲ್ಲಿ ಇದು ಸ್ಮೃತಿಯ ಸತತ 2ನೇ ಶತಕವಾಗಿದೆ. 18 ಫೋರ್, 2 ಅಮೋಘವಾದ ಸಿಕ್ಸರ್ ಸಮೇತ 136 ರನ್​ ಗಳಿಸಿ ಆಡುವಾಗ ಸ್ಮೃತಿ ಮಂದನಾ ವಿಕೆಟ್ ಒಪ್ಪಿಸಿದರು. ನಾಯಕಿ ಆಟ ಆಡುತ್ತಿದ್ದ ಹರ್ಮನ್​ಪ್ರೀತ್ ಕೌರ್ ಔಟ್ ಆಗದೇ 88 ಎಸೆತಗಳಲ್ಲಿ 9 ಬೌಂಡರಿ, 3 ಭರ್ಜರಿ ಸಿಕ್ಸರ್ ಸಮೇತ 103 ರನ್​ಗಳನ್ನು ಸಿಡಿಸಿದರು. ನಾಯಕಿಯ ಬ್ಯಾಟಿಂಗ್​ನಿಂದ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾಯಿತು. ಕ್ಯಾಪ್ಟನ್​​ಗೆ ಉತ್ತಮ ಸಾಥ್ ಕೊಟ್ಟ ರಿಚಾಘೋಷ್ ಔಟ್ ಆಗದೇ 13 ಬಾಲ್​ಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಮೇತ 25 ರನ್​ ಗಳಿಸಿದರು. ಈ ಮೂಲಕ ಭಾರತದ ಮಹಿಳಾ ತಂಡ ನಿಗದಿತ 50 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್​ಗಳ ಬೃಹತ್ ಟಾರ್ಗೆಟ್ ಅನ್ನು ಆಫ್ರಿಕಾಕ್ಕೆ ನೀಡಿದೆ. ಸದ್ಯ ಇದೀಗ ಆಫ್ರಿಕಾ ಬ್ಯಾಟಿಂಗ್ ಆರಂಭಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment