/newsfirstlive-kannada/media/post_attachments/wp-content/uploads/2024/07/SANJU.jpg)
ಎಷ್ಟೇ ಹಾರ್ಡ್ ವರ್ಕ್ ಇದ್ದರೂ ಎಳ್ಳಷ್ಟು ಲಕ್ ಬೇಕೇಬೇಕು ಅಂತಾರೆ. ಈ ಮಾತು ಸಂಜು ಸ್ಯಾಮ್ಸನ್ ವಿಚಾರದಲ್ಲಿ ನಿಜ ಅನಿಸುತ್ತೆ. ಇಷ್ಟು ದಿನ ಅತಂತ್ರ ಎಂಬಂತಿದ್ದ ಸಂಜು ಸ್ಯಾಮ್ಸನ್​​​ ಕರಿಯರ್​ಗೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಒಂದೇ ಒಂದು ಇನ್ನಿಂಗ್ಸ್​, ಪ್ರೆಸೆಂಟ್​​​ ಜನರೇಷನ್​​ನ ಬೆಸ್ಟ್ ವಿಕೆಟ್ ಕೀಪರ್ ಎಂಬ ಪಟ್ಟವನ್ನು ತಂದುಕೊಟ್ಟಿದೆ.
ಸಂಜು ಸ್ಯಾಮ್ಸನ್ 3.0 ಅನ್‌ಲಾಕ್..!
​ಸಂಜು ಸ್ಯಾಮ್ಸನ್. ಟೀಮ್ ಇಂಡಿಯಾದ ಟ್ಯಾಲೆಂಟೆಡ್ ಕ್ರಿಕೆಟರ್. ವಿಕೆಟ್ ಹಿಂದೆ ಮ್ಯಾಜಿಕ್ ಮಾಡುವ ಈತ, ವಿಕೆಟ್ ಮುಂದೆಯೂ ಕಮಾಲ್ ಮಾಡ್ತಾರೆ. ಕೇರಳದ ಸೂಪರ್ ಸ್ಟಾರ್​ 2015ರಲ್ಲೇ ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ್ರು. ಆ ಬಳಿಕ ಮತ್ತೊಂದು ಅವಕಾಶಕ್ಕಾಗಿ ಕಾದಿದ್ದು ಬರೋಬ್ಬರಿ 5 ವರ್ಷ. 5 ವರ್ಷಗಳ ಬಳಿಕ ಪುನರಾಗಮನವಾದ್ರೂ ಅಸ್ಥಿರ ಪ್ರದರ್ಶನ, ಸ್ಟಾರ್ ಆಟಗಾರರ ಜೊತೆಗಿನ ಪೈಪೋಟಿ ಸಂಜುಗೆ ಮುಳ್ಳಾಗ್ತಾನೇ ಇತ್ತು. ಬಾಂಗ್ಲಾ ಸರಣಿ ಮೊದಲ 2 ಪಂದ್ಯಗಳ ಫ್ಲಾಪ್​ ಶೋ ಬಳಿಕ ಸಂಜು ಕರಿಯರ್ ಖತಂ ಅಂತಾನೇ ಎಲ್ಲರೂ ಭಾವಿಸಿದ್ರು. 3ನೇ ಪಂದ್ಯದ ಒಂದೇ ಒಂದು ಇನ್ನಿಂಗ್ಸ್​ ಸಂಜು ಕರಿಯರ್​ನ ಸೇವ್​ ಮಾಡಿದೆ.
/newsfirstlive-kannada/media/post_attachments/wp-content/uploads/2024/10/Sanju-Samson-Century.jpg)
ಈ ವರ್ಷದ ಟಿ20 ವಿಶ್ವಕಪ್​ ಬಳಿಕ ಸಂಜು ಸ್ಯಾಮ್ಸನ್​ಗೆ ಪದೇ ಪದೆ ಚಾನ್ಸ್​ ಸಿಕ್ಕರೂ, ಹೇಳಿಕೊಳ್ಳುವಂತ ಪರ್ಫಾಮೆನ್ಸ್​ ನೀಡಿರಲಿಲ್ಲ. ಹೀಗಾಗಿ ಬಾಂಗ್ಲಾ ಎದುರಿನ ಕೊನೆ ಪಂದ್ಯವೇ ಸಂಜು ಸ್ಯಾಮ್ಸನ್​ ಪಾಲಿಗೆ ಲಾಸ್ಟ್​ ಚಾನ್ಸ್​ ಎಂಬ ನಿಲುವಿಗೆ ಹಲವರು ಬಂದಾಗಿತ್ತು. ಉಪ್ಪಾಳ್ ಸ್ಟೇಡಿಯಂನಲ್ಲಿ ಸಂಜು ಸಿಡಿಸಿದ ಸ್ಪೋಟಕ ಶತಕ ಕರಿಯರ್​ಗೆ ಮರು ಜೀವ ನೀಡಿದೆ. ಅಂದು ಟೀಕಿಸಿದರೆಲ್ಲ.. ಇಂದು ಸಂಜುಗೆ ಶಹಬ್ಬಾಸ್ ಅಂತಿದ್ದಾರೆ.
ಬೆಸ್ಟ್​ ವಿಕೆಟ್​ ಕೀಪರ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಮೊದಲ ಶತಕ ಸಿಡಿಸಿದ ಸಂಜು ಸ್ಯಾಮ್ಸನ್​ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಇಂಟರ್​ನ್ಯಾಷನಲ್​ ಟಿ20 ಕ್ರಿಕೆಟ್​ನಲ್ಲಿ ಸೆಂಚುರಿ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ವಿಕೆಟ್ ಕೀಪರ್ ಎಂಬ ಖ್ಯಾತಿಯೂ ಒಲಿದಿದೆ. ಇದಕ್ಕೂ ಮೊದಲು, ಆಸ್ಟ್ರೇಲಿಯಾದ ಜೋಶ್ ಇಂಗ್ಲಿಷ್, ಸೌತ್ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಹೆಸರಿನಲ್ಲಿತ್ತು. ಆದ್ರೀಗ ಇವರನ್ನೆಲ್ಲಾ ಸಂಜು ಹಿಂದಿಕ್ಕಿದ್ದಾರೆ.
ವಿಕೆಟ್ ಕೀಪರ್​​​ಗಳ ಪೈಕಿ ಅತಿ ವೇಗದ ಶತಕ
ಸಂಜು ಸ್ಯಾಮ್ಸನ್ ಬಾಂಗ್ಲಾ ಎದುರು 40 ಎಸೆತಗಳಲ್ಲೇ ಶತಕ ಪೂರೈಸಿದ್ರೆ, ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಸ್ಕಾಂಟ್ಲೆಂಡ್ ಎದುರು 43 ಎಸೆತಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಸೌತ್ ಆಫ್ರಿಕಾ ಕ್ವಿಂಟನ್ ಡಿಕಾಕ್​​​​​ಮ ವೆಸ್ಟ್ ಇಂಡೀಸ್ ಎದುರು 43 ಎಸೆತಗಳಲ್ಲಿ ಶತಕ ಗಳಿಸಿದ್ರೆ ಇಂಗ್ಲೆಂಡ್ ವಿಕೆಟ್ ಕೀಪರ್ ಫಿಲ್ ಸಾಲ್ಟ್​ 48 ಎಸೆತಗಳಲ್ಲಿ ವಿಂಡೀಸ್​ ಎದುರು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಕೆಂಗಣ್ಣಿಗೆ ಗುರಿಯಾಗಿದ್ದ ಈ ನಿಯಮವನ್ನು ರದ್ದು ಮಾಡಿದ ಬಿಸಿಸಿಐ, ಆದರೆ..!
/newsfirstlive-kannada/media/post_attachments/wp-content/uploads/2024/10/SANJU_SAMSON_ROHIT.jpg)
ವೇಗದ ಶತಕ ಸಿಡಿಸಿ ದಾಖಲೆ ಬರೆದ ಸಂಜು, ಟೀಮ್​ ಇಂಡಿಯಾದ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಸ್ಥಾನಕ್ಕೆ ನಾನೇ ಬೆಸ್ಟ್​ ಚಾಯ್ಸ್​ ಎಂಬ ಸಂದೇಶವನ್ನು ರವಾನಿಸಿದ್ದಾರೆ. 2020ರಲ್ಲಿ ಗೌತಮ್ ಗಂಭೀರ್ ಸಂಜುವನ್ನು ಬೆಂಬಲಿಸಿ ಮಾಡಿದ್ದ ಸಾಲು ಸಾಲು ಟ್ವೀಟ್​ಗಳನ್ನೇ ಮತ್ತೆ ಮೆಲುಕು ಹಾಕುವಂತೆ ಮಾಡಿದ್ದಾರೆ.
ಸಂಜು ಸ್ಯಾಮ್ಸನ್ ಬೆಸ್ಟ್ ವಿಕೆಟ್ ಕೀಪರ್ ಮಾತ್ರವಲ್ಲ, ಬೆಸ್ಟ್ ಬ್ಯಾಟ್ಸ್​ಮನ್ ಕೂಡ ಎಂದು ಅಂದು ಗಂಭೀರ್ ಬ್ಯಾಟ್ ಬೀಸಿದ್ರು. ಸಂಜು ಸ್ಯಾಮ್ಸನ್​ಗೆ ಯಾರೋ ಆಗುವ ಅಗತ್ಯವಿಲ್ಲ. ಆತ ಭಾರತೀಯ ಕ್ರಿಕೆಟ್‌ನ ಸಂಜು ಸ್ಯಾಮ್ಸನ್ನೇ​ ಆಗ್ತಾನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದರು. ಇದೀಗ ಸಂಜು ಅದೆನ್ನಲ್ಲ ನಿಜವಾಗಿಸ್ತಿದ್ದಾರೆ. ಗೌತಮ್ ಗಂಭೀರ್ ನಂಬಿಕೆಯನ್ನೂ ಉಳಿಸಿಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಆಡಲಿಲ್ಲ ಅಂದ್ರೆ ಅದು ಸಂಜು ಸ್ಯಾಮ್ಸನ್​ಗೆ ನಷ್ಟವಲ್ಲ. ಅದು ಟೀಮ್ ಇಂಡಿಯಾದ ನಷ್ಟ. ಸಂಜು ಸ್ಯಾಮ್ಸನ್​ ಬ್ಯಾಟಿಂಗ್, ರೋಹಿತ್, ವಿರಾಟ್​ ರೀತಿಯೇ ಇರುತ್ತೆ ಎಂದು ನಾನು ನಂಬಿದ್ದೇನೆ. ಸಂಜುನ ಬ್ಯಾಕ್ ಮಾಡಿದ್ರೆ, ಭವಿಷ್ಯದಲ್ಲಿ ನಂ.1 ಬ್ಯಾಟರ್ ಆಗಬಹುದಾಗಿದೆ. ದುರಾದೃಷ್ಟ ಆತನನ್ನ ಬೆಂಬಲಿಸಲಿಲ್ಲ.
/newsfirstlive-kannada/media/post_attachments/wp-content/uploads/2024/07/Sanju-Samson.jpg)
ಟೀಮ್ ಇಂಡಿಯಾದಲ್ಲಿ ಭದ್ರವಾಯ್ತಾ ಸಂಜು ಸ್ಥಾನ
ಟಿ20 ತಂಡದ ಓಪನಿಂಗ್ ಸ್ಲಾಟ್​​ ಮ್ಯೂಸಿಕಲ್ ಚೇರ್ ಗೇಮ್​​ನಂತಾಗಿದೆ. ರೋಹಿತ್​ ಶರ್ಮಾರಿಂದ ತೆರವಾದ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಇದೀಗ ಶತಕ ಸಿಡಿಸಿರುವ ಸಂಜು ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರವಾಗಿಸಿಕೊಳ್ಳುವ ಸೂಚನೆ ನೀಡ್ತಿದೆ. ರೋಹಿತ್​ರಿಂದ ತೆರವಾದ ಸ್ಥಾನಕ್ಕೆ ಸಂಜು ಉತ್ತಮ ಆಯ್ಕೆ ಎಂಬ ಅಭಿಪ್ರಾಯಗಳೂ ಕೇಳಿ ಬರ್ತಿವೆ. ಜೊತೆಗೆ ಕೋಚ್ ಗಂಭೀರ್ ಕೃಪಾಕಟಾಕ್ಷವೂ ಸಂಜು ಮೇಲಿದೆ. ಹೀಗಾಗಿ ಸದ್ಯಕ್ಕಂತೂ ಸಂಜು ಸೇಫ್​​​​.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us