/newsfirstlive-kannada/media/post_attachments/wp-content/uploads/2025/07/SNAKE_AI.jpg)
ಹಾವಿನ ದ್ವೇಷ 12 ವರುಷ ಎಂಬುದನ್ನು ಕೇಳಿರುತ್ತೇವೆ. ಆದರೆ ನಮ್ಮ ಗಮನಕ್ಕೆ ಬರುವವರೆಗೂ ಇದು ಸುಳ್ಳಿರಬಹುದು ಎಂದೇ ಎನಿಸುತ್ತಿರುತ್ತದೆ. ಆದರೆ ಸತ್ಯ ಕಣ್ಣೆದುರೇ ಇದ್ದಾಗ ನಂಬಲೇಬೇಕಾಗುತ್ತದೆ. ತನ್ನ ಸಂಗಾತಿನ ಕೊಂದ ಮನೆಗೆ ನುಗ್ಗಿ ಹೆಣ್ಣು ಹಾವೊಂದು ಪ್ರತೀಕಾರ ತೀರಿಸಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ.
[caption id="attachment_131777" align="alignnone" width="800"] ಮನೋಜ್ ಅವರ ಪತ್ನಿ (ಹಸಿರು ವೇಲು)[/caption]
ಒಬ್ಬರ ಜೀವ ತೆಗೆದ ಹೆಣ್ಣು ಹಾವು
ಉತ್ತರ ಪ್ರದೇಶದ ಮಥುರಾದ ಸಿಹೋರಾ ಗ್ರಾಮದ ನಿವಾಸಿ ಮನೋಜ್ ಅವರ ಪತ್ನಿ ಕಳೆದ ತಿಂಗಳಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಜುಲೈ 2ರಂದು ನಾಮಕರಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಕರೆಲ್ಲಾ ಮನೆಗೆ ಬಂದಿದ್ದರು. ಹಾಗೆಯೇ ಮನೋಜ್ ಅವರ ಪತ್ನಿಯ ಸಹೋದರ ಸಚಿನ್ ಕೂಡ ಅಲ್ಲಿಗೆ ಬಂದಿದ್ದರು.
ಮನೆಯ ಒಳಗೆ ಕೋಣೆಯಲ್ಲಿ ಹಾವು ಇರುವುದನ್ನು ಕಂಡು ಬೆಚ್ಚಿಬಿದ್ದ ಸಚಿನ್ ಕೂಡಲೇ ದೊಣ್ಣೆಯಿಂದ ಗಂಡು ಹಾವನ್ನು ಹೊಡೆದು ಜೀವ ತೆಗೆದಿದ್ದ. ಬಳಿಕ ಕೆಲವೇ ದಿನಗಳಲ್ಲಿ ಆ ಗಂಡು ಹಾವಿನ ಸಂಗಾತಿ ಮೂವರಿಗೆ ಕಚ್ಚಿ ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಮನೋಜ್ ಜೀವಂತವಾಗಿಲ್ಲ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಟುಂಬದ ಬೇರೆಯವರ ಟಾರ್ಗೆಟ್
ಮನೋಜ್ ಕುಟುಂಬಸ್ಥರು ಗಂಡು ಹಾವಿನ ಸಂಗಾತಿ ತಮ್ಮ ಮೇಲೆ ರೀವೆಂಜ್ ತೆಗೆದುಕೊಳ್ಳುತ್ತಿದೆ ಎಂದೇ ಭಾವಿಸಿದ್ದಾರೆ. ಜೊತೆಗೆ ಸಾವನ್ನಪ್ಪಿದ ಹಾವಿನ ಸಂಗಾತಿ, ತಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿದೆ ಎಂಬ ಭಯ ಬಂದಿದೆ. ಈಗ ಒಂದೆಡೆ ಮನೋಜ್ ಕುಟುಂಬಕ್ಕೆ ಹಾವು ಕಡಿತದ ಭಯ, ಭೀತಿ ಕಾಡುತ್ತಿದೆ. ಮತ್ತೊಂದೆಡೆ ಹಾವು ಹೊಡೆದು ಸಾಯಿಸಿದ ಸಚಿನ್ ಕೂಡ ಜೀವ ಭಯದಲ್ಲಿದ್ದಾನೆ. ಮನೋಜ್ ಕುಟುಂಬದವರಾರು ಕೂಡ ಈಗ ಮನೆಯ ಒಳಗೆ ರಾತ್ರಿ ವೇಳೆ ಮಲಗುತ್ತಿಲ್ಲ. ರಾತ್ರಿ ವೇಳೆ ಮನೆಯ ಹೊರಗೆ ಮಲಗುತ್ತಿದ್ದಾರೆ. ಹೆಣ್ಣು ಹಾವು ಬೇರೆಯವರನ್ನು ಟಾರ್ಗೆಟ್ ಮಾಡಬಹುದು ಎಂಬ ಭಯ, ಭೀತಿಯಲ್ಲೇ ಮನೋಜ್ ಕುಟುಂಬ, ಸಚಿನ್ ಇದ್ದಾರೆ.
ಇನ್ನೂ ಸಿಹೋರಾ ಗ್ರಾಮಸ್ಥರು ಕೂಡ ಹಾವಿನ ದ್ವೇಷದ ಈ ಘಟನೆಯಿಂದ ಅಶ್ಟರ್ಯ ಚಕಿತರಾಗಿದ್ದಾರೆ. ಹಾವಿನ ದ್ವೇಷದ ಕಥೆಗಳನ್ನು ಜನರು ಕೇಳಿದ್ದರು. ಹಾಗಾಗಿ ಈಗ ಹಾವಿನ ದ್ವೇಷದ ಕಥೆಗೂ ಈ ನಿಜ ಘಟನೆಗೂ ಲಿಂಕ್ ಮಾಡುತ್ತಿದ್ದಾರೆ. ಗಂಡು ಹಾವಿನ ಸಂಗಾತಿ ಹಾವು, ಸೇಡು ತೀರಿಸಿಕೊಳ್ಳುತ್ತಿದೆ ಎಂದೇ ಜನರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಭಾರತ- ಪಾಕ್ ಸಂಘರ್ಷದಲ್ಲಿ 5 ಜೆಟ್ ವಿಮಾನ ಹೊಡೆದುರುಳಿಸಲಾಗಿತ್ತು.. ಟ್ರಂಪ್ ಹೇಳಿದ್ದು ನಿಜನಾ, ಸುಳ್ಳಾ?
[caption id="attachment_131778" align="alignnone" width="800"] ಮನೋಜ್ ಅವರ ತಂದೆ[/caption]
ಆದರೇ, ಹಾವಿನ ದ್ವೇಷದ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ. ವೈಜ್ಞಾನಿಕ ವಿವರಣೆಗಳಿಲ್ಲ. ಇನ್ನೂ ಈ ಹಾವಿನ ಭಯ, ಆತಂಕದ ಬಗ್ಗೆ ಸರ್ಕಾರದ ಅಧಿಕಾರಿಗಳು ಯಾರೂ ತಲೆಕೆಡಿಸಿಕೊಂಡಿಲ್ಲ. ಆದರೇ, ಮನೋಜ್ ಕುಟುಂಬ ಪ್ರತಿಯೊಂದು ರಾತ್ರಿಯನ್ನು ಹಾವು ಕಡಿತದ ಭಯದಲ್ಲೇ ಕಳೆಯುತ್ತಿದೆ. ಇಷ್ಟೆಲ್ಲಾ ಆಗುತ್ತೆ ಅಂತ ಗೊತ್ತಿದ್ದರೇ, ಬಹುಶಃ ಸಚಿನ್ ಕೂಡ ಆ ಹಾವು ತಂಟೆಗೆ ಹೋಗುತ್ತಿರಲಿಲ್ಲವೇನೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ