newsfirstkannada.com

×

ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ

Share :

Published October 24, 2024 at 10:10am

    ಮೂರು ದಿನದಲ್ಲಿ ಐವರಿಗೆ ಹಾವು ಕಡಿತ, 3 ಸಾವು

    ಉರಗ ಕಡಿತದಿಂದ ಕಂಗೆಟ್ಟ ಊರ ಜನರು.. ಹಾವಿಗಾಗಿ ಹುಡುಕಾಟ

    ಮಕ್ಕಳೊಂದಿಗೆ ನೆಲದ ಮೇಲೆ ಮಲಗಿದ್ದ ತಾಯಿಗೆ ಕಚ್ಚಿದ ಹಾವು

ಹಾವು ಕಚ್ಚಿ ಮೂವರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶ ಹಾಪುರ್​​ ಜಿಲ್ಲೆಯ ಗರ್​ ಮುಕ್ತೇಶ್ವರ ತೆಹಸಿಲ್​ನ ಸದರ್​ಪುರ ಗ್ರಾಮದಲ್ಲಿ ನಡೆದಿದೆ. ಮೂರು ದಿನದಲ್ಲಿ ಐವರಿಗೆ ಹಾವು ಕಡಿದಿದ್ದು, 3 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಗ್ರಾಮಸ್ಥರಲ್ಲಿ ಭಯ

ಅಕ್ಟೋಬರ್​ 20ರಂದು ಮಹಿಳೆ ತನ್ನ ಮಕ್ಕಳೊಂದಿಗೆ ನೆಲದ ಮೇಲೆ ಮಲಗಿದ್ದಾಗ ಹಾವು ಕಚ್ಚಿದೆ. ಆದರೆ ಚಿಕಿತ್ಸೆ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಮರುದಿನ ಮತ್ತೊಬ್ಬ ವ್ಯಕ್ತಿಗೂ ಹಾವು ಕಡಿದಿದೆ. ಆತ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಸದ್ಯ ಹಾವಿನ ಕಾಟದಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ.

ಇದನ್ನೂ ಓದಿ: ಬೆಂಗಳೂರಿಗರೇ.. ಇಂದೂ ಮಳೆ ಬರುತ್ತೆ ಎಚ್ಚರ! ಬೇಗ ಬೇಗ ಗೂಡು ಸೇರಿಕೊಳ್ಳಿ

ಹಾವಿನ ಕಾಟದಿಂದ ಬೇಸತ್ತ ಜನರು ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಹಾವಾಡಿಗನನ್ನು ಕರೆಸಿದ್ದಾರೆ. ಮೀರತ್​ನಿಂದ ಪುಂಗಿ ನುಡಿಸುತ್ತಾ ಹಾವು ಹಿಡಿಯುವನನ್ನು ಕರೆಸಲಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ನಾಲ್ಕು ತಂಡಗಳು ಮತ್ತು ಪೊಲೀಸರು ಹಾವು ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆ ಒಂದು ಹಾವನ್ನು ರಕ್ಷಿಸಲಾಗಿದೆ. ಮತ್ತೊಂದು ಹಾವು ಗೋಡೆಯಲ್ಲಿದ್ದ ಬಿಲದೊಳಕ್ಕೆ ನುಗ್ಗಿದೆ. ಸದ್ಯ ಹುಡುಕಾಡುವ ಕೆಲಸ ನಡೆಯುತ್ತಿದೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಜೋಡಿಯನ್ನ ಬೇರ್ಪಡಿಸಿದ ಪೊಲೀಸರು! ಪತ್ನಿಗಾಗಿ ಸ್ಟೇಷನ್ ಮುಂದೆ ಪತಿ ಪ್ರತಿಭಟನೆ

ಸದ್ಯ ಹಾವಾಡಿಗನು ಪುಂಗಿ ಊದುತ್ತಾ ಹಾವನ್ನು ಹುಡುಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹಾವಿನ ಕಾಟದಿಂದ ಬೇಸತ್ತ ಜನರು ಕೊನೆಗೆ ಪುಂಗಿದಾಸನ ಮೊರೆ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ

https://newsfirstlive.com/wp-content/uploads/2024/10/Snake.jpg

Load More