/newsfirstlive-kannada/media/post_attachments/wp-content/uploads/2025/03/CKM-COBRA.jpg)
ಚಿಕ್ಕಮಗಳೂರು: ಉರಿ ಬಿಸಿಲ ನಡುವೆ ಜನರಿಗೆ ಹಾವುಗಳ ಕಾಟ ಶುರುವಾಗಿದೆ. ದೇವರ ಕೋಣೆಯಲ್ಲಿ ದೈತ್ಯ ನಾಗರ ಹಾವು ಅಡಗಿ ಕೂತು ಕೆಲ ಕಾಲ ಗಾಬರಿಪಡಿಸಿತ್ತು.
ನಿನ್ನೆ ಮಧ್ಯಾಹ್ನ ಮನೆಯೊಳಗೆ ಪ್ರವೇಶಿಸಿದ್ದ ನಾಗರ ಹಾವು, ಕತ್ತಲಾಗುತ್ತಿದಂತೆಯೇ ಬುಸುಗುಡಲು ಶುರುಮಾಡಿತ್ತು. ಇದರಿಂದ ಮನೆ ಮಂದಿ ಆತಂಕಗೊಂಡಿದ್ದಾರೆ. ಕೂಡಲೇ ಉರಗ ತಜ್ಞ ಸ್ನೇಕ್ ರಿಜ್ವಾನ್ಗೆ ಕರೆ ಮಾಡಿ ಬರೋಬ್ಬರಿ 6 ಅಡಿ ಉದ್ದದ ಹಾವನ್ನು ರಕ್ಷಣೆ ಮಾಡಿ, ಬೇರೆಡೆಗೆ ಬಿಟ್ಟು ಬಂದಿದ್ದಾರೆ. ಅಂದ್ಹಾಗೆ ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ದೇವರಗುಡ್ಡದ ರವಿ ಅನ್ನೋರ ಮನೆಯಲ್ಲಿ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಚಾರಿ ಅರೆಸ್ಟ್.. ಈತ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯ ಉದ್ಯೋಗಿ..!
ಬೇಸಿಗೆ ಕಾಲ ಹುಷಾರಾಗಿರಿ..
ಹೇಳಿ, ಕೇಳಿ ಇದು ಬೇಸಿಗೆ ಕಾಲ. ಉರಿ ಬಿಸಿಲಿನ ತಾಪಕ್ಕೆ ಎಲ್ಲರಿಗೂ ಬಾಯಿ ಆರುತ್ತೆ. ಇದರಿಂದ ಸರಿಸೃಪಗಳು ಹೊರತಾಗಿಲ್ಲ. ಬಿಸಿಲ ದಾಹ ತೀರಿಸಿಕೊಳ್ಳಲು ಅವು ತಂಪಾದ ಜಾಗವನ್ನು ಅರಸುತ್ತವೆ. ಅಂತೆಯೇ, ನೀರಿರುವ ಜಾಗ, ನೆರಳು ನೀಡುವ ಮರ, ಕೊಟ್ಟಿಗೆ, ದೊಡ್ಡಿ, ಬಚ್ಚಲು ಮನೆ, ಮನೆಗಳಿಗೆ ಬಂದು ಸೇರುತ್ತಿವೆ. ಹೀಗಾಗಿ ಹಾವುಗಳ ಬಗ್ಗೆ ಜಾಗೃತೆಯಿಂದ ಇರೋದು ಒಳ್ಳೆಯದು.
ಯಾಕೆಂದರೆ ರಾಜ್ಯದಲ್ಲಿ ಭಯಂಕರ ಬಿಸಿಲು ಶುರುವಾಗಿದೆ. ಬಿಸಿಲಿನ ಈ ಪ್ರಭಾವ, ಏಪ್ರಿಲ್, ಮೇ ವರೆಗೂ ಮುಂದುವರಿಯಲಿದೆ. ಹೀಗಾಗಿ ಆರೋಗ್ಯವಾಗಿರುವುದರ ಜೊತೆಗೆ, ಸುತ್ತಮುತ್ತ ಪ್ರಾಣಿ, ಪಕ್ಷಿ ಹಾಗೂ ಸರಿಸೃಪಗಳ ಬಗ್ಗೆಯೂ ಎಚ್ಚರಿದಿಂದಿರಿ.
ಇದನ್ನೂ ಓದಿ: ಒತ್ತುವರಿ ಆರೋಪ.. ಮಾರ್ಕಿಂಗ್ ಮಾಡಿ ಹೆಚ್‌ಡಿಕೆಗೆ 7 ದಿನಗಳ ಡೆಡ್‌ಲೈನ್ ಕೊಟ್ಟ ಅಧಿಕಾರಿಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ