newsfirstkannada.com

VIDEO: ವಿಮಾನದಲ್ಲಿ ವಿಷಕಾರಿ ಹಾವು ಪತ್ತೆ.. ಬೆಚ್ಚಿಬಿದ್ದ ಪ್ರಯಾಣಿಕರು; ಆಮೇಲೇನಾಯ್ತು?

Share :

Published January 18, 2024 at 8:25pm

    ಏರ್​​ಪೋರ್ಟ್​​ನಲ್ಲಿ ಲ್ಯಾಂಡ್ ಆಗುವ ವೇಳೆ ಹೊರಗೆ ಬಂದ ಹಾವು

    ಕಬೋರ್ಡ್​​ನಲ್ಲಿ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರಲ್ಲಿ ಭಯ

    ಥಾಯ್ ಏರ್ ಏಷ್ಯಾ ವಿಮಾನ ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು ಗೊತ್ತಾ?

ಥೈಲ್ಯಾಂಡ್​ನ ಫುಕೆಟ್ ಏರ್​​ಪೋರ್ಟ್​​ನಲ್ಲಿ ಲ್ಯಾಂಡ್ ಆಗಿದ್ದ ಥಾಯ್ ಏರ್ ಏಷ್ಯಾ ವಿಮಾನದ ಕಬೋರ್ಡ್​​​ನಲ್ಲಿ ವಿಷಕಾರಿ ಹಾವೊಂದು ಕಾಣಿಸಿದೆ. ವಿಮಾನದಲ್ಲಿ ಹಾವನ್ನು ಕಂಡು ಪ್ರಯಾಣಿಕರು ಆತಂಕಗೊಂಡಿದ್ದಾರೆ.

ಥಾಯ್ ಏರ್ ಏಷ್ಯಾ FD3015 ವಿಮಾನವು ಬ್ಯಾಂಕಾಕ್​ನ ಡಾನ್ ಮುವಾಂಗ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಬಳಿಕ ಥೈಲ್ಯಾಂಡ್​ನ ಫುಕೆಟ್ ಏರ್​​ಪೋರ್ಟ್​​ನಲ್ಲಿ ಲ್ಯಾಂಡ್ ಆಗುವಾಗ ಹಾವು ಕಾಣಿಸಿದೆ. ಹಾವನ್ನ ಕಂಡ ಪ್ರಯಾಣಿಕರು ಭಯಗೊಂಡು ಗದ್ದಲ ಮಾಡಿದಾಗ ತಕ್ಷಣ ಅಲ್ಲಿಗೆ ವಿಮಾನದ ಸಿಬ್ಬಂದಿ ಬಂದಿದ್ದಾರೆ. ಬಳಿಕ ವಿಮಾನ ಸಿಬ್ಬಂದಿ ಹಾವನ್ನು ಮೊದಲು ಬಾಟಲ್​​ನಲ್ಲಿ ಹಾಕಲು ಪ್ರಯತ್ನಿಸಿದರು. ಆದರೆ ಅದು ಅದರ ಒಳಗೆ ಹೋಗಲಿಲ್ಲ. ಬಳಿಕ ಪ್ಲಾಸ್ಟಿಕ್ ಬ್ಯಾಗ್ ತಂದು ಅದರಲ್ಲಿ ಹಾಕಿ ಸೇಫ್ ಆದ ಸ್ಥಳಕ್ಕೆ ತಂದು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದಾರೆ.

ವಿಮಾನದಲ್ಲಿನ ಯಾವುದೇ ಪ್ರಯಾಣಿಕರಿಗೆ ಹಾವು ಸಮಸ್ಯೆಯನ್ನು ಮಾಡಿಲ್ಲ. ಅದು ಕಂಡ ತಕ್ಷಣ ವಿಮಾನ ಸಿಬ್ಬಂದಿ ಬಂದು ಸೇಫ್ ಆಗಿ ಸೆರೆ ಹಿಡಿದು ಹೊರಗೆ ಬಿಟ್ಟಿದ್ದಾರೆ. ಇನ್ನು ಇದರ ವಿಡಿಯೋವನ್ನ ಥಾಯ್ ಎನ್​ಕ್ವಾರಿಯ ಎಕ್ಸ್​ ಅಕೌಂಟ್​​ನಲ್ಲಿ ಸೇರ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಿಮಾನದಲ್ಲಿ ವಿಷಕಾರಿ ಹಾವು ಪತ್ತೆ.. ಬೆಚ್ಚಿಬಿದ್ದ ಪ್ರಯಾಣಿಕರು; ಆಮೇಲೇನಾಯ್ತು?

https://newsfirstlive.com/wp-content/uploads/2024/01/FLIGHT_SNAKE.jpg

Load More