ಪ್ಯಾಂಟ್ ಒಳಗಿತ್ತು ನಾಗರಹಾವು.. ಆಮೇಲಾಗಿದ್ದೇನು? ಭಯಾನಕ ಘಟನೆ..!

author-image
Veena Gangani
Updated On
ಪ್ಯಾಂಟ್ ಒಳಗಿತ್ತು ನಾಗರಹಾವು.. ಆಮೇಲಾಗಿದ್ದೇನು? ಭಯಾನಕ ಘಟನೆ..!
Advertisment
  • ಮಾಂತೇಶ ಎಂಬುವವರ ಪ್ಯಾಂಟ್ ಒಳಗಡೆ ಸೇರಿದ್ದ ನಾಗರಹಾವು
  • ಪ್ಯಾಂಟ್​ನಲ್ಲಿ ಕಾಲು ಹಾಕುವುದರೊಳಗೆ ಕಚ್ಚಲು ಮುಂದಾಗಿದ್ದ ಹಾವು
  • ಸ್ನೇಕ್ ಸ್ಟಾರ್ ಪ್ರಶಾಂತ್ ಹುಲೇಕಲ್​ರಿಂದ ಹಾವಿನ ರಕ್ಷಣೆ

ಶಿರಸಿ: ರಾಜ್ಯದಲ್ಲಿ ಬಿಸಿಲ ಆರ್ಭಟ ಜೋರಾಗಿದೆ. ಬಿಸಿಲ ತಾಪಕ್ಕೆ ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಕೂಡ ಕಂಗಾಲಾಗಿವೆ. ಇದರಿಂದ ಸರಿಸೃಪಗಳೂ ಹೊರತಾಗಿಲ್ಲ. ತಂಪಾದ ಹಾಗೂ ನೆರಳು ಇರುವ ಜಾಗವನ್ನು ಸರಿಸೃಪಗಳು ಅರಸುತ್ತಿವೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವ್ಯಕ್ತಿಯೊಬ್ಬರ ಪ್ಯಾಂಟ್ ಒಳಗೆ ಸೇರಿತ್ತು.

ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video

publive-image

ಶಿರಸಿಯ ನಾರಾಯಣಗುರು ನಗರದಲ್ಲಿ ಮಾಂತೇಶ್ ಅನ್ನೋರು ವಾಸವಿದ್ದಾರೆ. ಅವರು ತಮ್ಮ ಮನೆಯಲ್ಲಿ ಇಟ್ಟಿದ್ದ ಪ್ಯಾಂಟ್​​​​​​ ಒಳಗೆ ನಾಗರ ಹಾವು ಬಂದು ಸೇರಿತ್ತು. ಹಾವು ಸೇರಿರೋದು ಮಾಂತೇಶ್ ಗಮನಕ್ಕೆ ಬರಲಿಲ್ಲ. ಹರಿಬರಿಯಲ್ಲಿ ಪ್ಯಾಂಟ್ ಧರಿಸಲು ಮುಂದಾಗುತ್ತಾರೆ. ಆಗ ಬುಸ್ ಅಂತಾ ಹೆಡೆ ಎತ್ತಿ ಕಚ್ಚಲು ಮುಂದಾಗಿದೆ.

ಹಾವನ್ನು ನೋಡಿದ ಮಾಂತೇಶ್ ಒಂದು ಕ್ಷಣ ಕಂಗಾಲ್ ಆಗಿದ್ದಾರೆ. ಕೊನೆಗೆ ಪ್ಯಾಂಟ್ ಎಸೆದು ಹಾವಿನಿಂದ ಬಚಾವ್ ಆಗಿದ್ದಾರೆ. ನಂತರ ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಪ್ರಶಾಂತ್ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment