/newsfirstlive-kannada/media/post_attachments/wp-content/uploads/2025/02/SNEHAMAYI_KRISHNA.jpg)
ಮೈಸೂರು: ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಧಾರವಾಡದ ಹೈಕೋರ್ಟ್ ನಿರಾಕರಣೆ ಮಾಡಿದೆ. ಇದರಿಂದ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕರೇ, ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಕೊಂಚ ಹಿನ್ನಡೆ ಆಗಿದೆ. ಹೋರಾಟ ಮಾಡುವಾಗ ಸೋಲು, ಗೆಲುವು ಎಲ್ಲ ಇದ್ದೇ ಇರುತ್ತವೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಹೈಕೋರ್ಟ್ ತೀರ್ಪು ಬರುತ್ತಿದ್ದಂತೆ ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು, ಹೋರಾಡುವಾಗ ಸೋಲು ಗೆಲುವು, ಏರು-ಪೇರು ಇದ್ದೇ ಇರುತ್ತೆ. ಇದು ಸಣ್ಣ ಪ್ರಮಾಣದಲ್ಲಿ ಹಿನ್ನಡೆ ಆಗಿದೆ ಎಂದು ಹೇಳಬಹುದು. ಇದರಿಂದ ನಾನೇನು ವಿಚಲಿತ ಆಗುವುದಿಲ್ಲ. ಯಾವ ಕಾರಣಕ್ಕೆ ಈ ವ್ಯತಿರಿಕ್ತ ತೀರ್ಪು ಬಂದಿದೆ ಎಂದು ಪರಿಗಣಿಸಿ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಪ್ರಕರಣವನ್ನು ಸಿಬಿಐಗೆ ಕೊಡಿಸುವಂತೆ ಪ್ರಯತ್ನವನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:BREAKING; ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್
ಸಿಬಿಐಗೆ ಕೊಡಿಸಲು ಬೇಕಾದ ಎಲ್ಲ ಮಾಹಿತಿ, ದಾಖಲೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಯಾವ ವಿಷಯದ ಮೇಲೆ ವ್ಯತಿರಿಕ್ತ ತೀರ್ಪು ಕೊಟ್ಟಿದೆ ಎನ್ನುವುದನ್ನು ತೀರ್ಪು ಅನ್ನು ಪರಿಶೀಲಿಸಿದ ಮೇಲೆ ಗೊತ್ತಾಗುತ್ತದೆ. ಕೆಲವು ಸಣ್ಣ ತಾಂತ್ರಿಕ ವಿಚಾರ ಇಟ್ಟುಕೊಂಡು ಈ ತೀರ್ಪು ಬಂದಿದೆ ಎಂದು ನನಗೆ ಅನುಮಾನವಿದೆ. ಸಂಪೂರ್ಣವಾಗಿ ತೀರ್ಪು ಅನ್ನು ಪರಿಶೀಲನೆ ಮಾಡಿದ ಮೇಲೆ ಯಾವ್ಯಾವ ಲೋಪದೋಷಗಳು ಬಂದಿವೆ ಅಂತ ಪರಿಗಣಿಸಿ, ಅದಕ್ಕೆ ಪೂರಕವಾದ ಮಾಹಿತಿ, ದಾಖಲಾತಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಇಲ್ಲಿ ತನಿಖಾ ಸಂಸ್ಥೆ ಬಗ್ಗೆ ಮಾತ್ರ ತೀರ್ಪು ಬಂದಿರುವುದು. ತನಿಖೆ ಬಗ್ಗೆ ಆಗಲಿ ಅಥವಾ ತನಿಖೆ ವರದಿ ಬಗ್ಗೆ ಆಗಲೇ ತೀರ್ಪು ಅಲ್ಲ ಇದು. ಲೋಕಾಯುಕ್ತದಿಂದ ನಡೆಯುತ್ತಿದ್ದ ತನಿಖೆಯನ್ನು ಸಿಬಿಐಗೆ ಕೊಡುವ ಕುರಿತು ತೀರ್ಪು ಬಂದಿದೆ ಅಷ್ಟೇ. ಇದು ಹಿನ್ನಡೆ ಅಲ್ಲ. ಯಾವುದೇ ತನಿಖೆ ಸಂಸ್ಥೆ, ಯಾವುದೇ ರೀತಿಯ ವರದಿ ಕೊಟ್ಟರೂ ಕೂಡ ಸಿಎಂ ಸಿದ್ದರಾಮಯ್ಯಗೆ ಶಿಕ್ಷೆ ಕೊಡಿಸುವಂತ ಎಲ್ಲ ಅವಕಾಶಗಳು ನನಗೆ ಇದ್ದೇ ಇದೆ. ಇದರಲ್ಲಿ ನಾನು ಕುಗ್ಗುವಂತಹದ್ದು, ವಿಚಲಿತನಾಗುವುದು, ಹಿಂದೆ ಸರಿಯುವಂತ ಪ್ರಸಂಗ ಏನು ಇಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ