newsfirstkannada.com

BIGG BOSS: ಮತ್ತೆ ಮುಖಾಮುಖಿಯಾದ ಸ್ನೇಹಿತ್‌, ನಮ್ರತಾ; ಆ ಒಂದು ಕಾರಣಕ್ಕೆ ಗೆಳೆತನ ಬದಲಾಗಿದ್ಯಾ?

Share :

Published January 17, 2024 at 8:15pm

  ಕಾರ್ತಿಕ್​ ಜೊತೆ ನಮ್ರತಾ ಕ್ಲೋಸ್ ಆಗಿದ್ದಕ್ಕೆ ಸ್ನೇಹಿತ್​ ಉರ್ಕೊಂಡಿದ್ದಾರಾ?

  ಒಂದಲ್ಲಾ ಎರಡಲ್ಲ ಬರೋಬ್ಬರಿ ಎಲಿಮಿನೇಟ್​ ಆದ 7 ಸ್ಪರ್ಧಿಗಳು ಎಂಟ್ರಿ

  ಮೊದಲಿನ ರೀತಿ ನಮ್ರತಾ ಹತ್ತಿರ ಮನಬಿಚ್ಚಿ ಮಾತಾಡುತ್ತಾರಾ ಸ್ನೇಹಿತ್​!

ಬಿಗ್​ಬಾಸ್​ ಮನೆಯಲ್ಲಿ ಹೊಸ ಟ್ವಿಸ್ಟ್​ ತೆರೆದುಕೊಂಡಿದೆ. ಹಳೆ ಸ್ಪರ್ಧಿಗಳು ಬಿಗ್​ ಮನೆಗೆ ರೀ ಎಂಟ್ರಿ ಪಡೆದುಕೊಂಡಿದ್ದಾರೆ. ಒಬ್ಬರೋ ಇಬ್ಬರೋ ಅಲ್ಲ ಬರೋಬ್ಬರಿ 7 ಎಲಿಮಿನೇಟ್​ ಆದ ಸ್ಪರ್ಧಿಗಳು ಬಿಗ್​ ಮನೆಗೆ ಕಾಲಿಟ್ಟಿದ್ದಾರೆ. ಆದರೆ ಇಲ್ಲಿ ಇಂಟ್ರಸ್ಟಿಂಗ್​ ಅನ್ಸೋದು ಮಾತ್ರ ನಮ್ರತಾ-ಸ್ನೇಹಿತ್​ ನಡುವಿನ ಮುಖಾಮುಖಿ ಸನ್ನಿವೇಶ.

ಹೌದು, ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ಕಾರ್ತಿಕ್​ ಜೊತೆ ನಮ್ರತಾ ಕ್ಲೋಸ್​ ಆಗಿರೋದು ಮತ್ತೊಂದು ನಮ್ರತಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ ಫಾಲೋ ಮಾಡಿರೋದು. ಹೀಗಿದ್ದಾಗ ಸ್ನೇಹಿತ್​ ಹೇಗೆ ರಿಯ್ಯಾಕ್ಟ್​ ಮಾಡ್ತಾರೆ. ಮಾಡಬಹುದು ಅನ್ನೋ ಕುತೂಹಲ ಇತ್ತು. ಇನ್​ ಫ್ಯಾಕ್ಟ್​ ಸ್ನೇಹಿತ್​ ಉರ್ಕೊಂಡಿದ್ದಾರೆ ಅಂತಾ ನಮ್ರತಾನೇ ಇಶಾನಿ ಹತ್ತಿರ ಕ್ಲಾರಿಫೈ ಮಾಡಿಕೊಳ್ಳುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದರೆ ಸ್ನೇಹಿತ್​ ಯಾಕೋ ಮೊದಲಿನ ರೀತಿ ನಮ್ರತಾ ಹತ್ತಿರ ಮನಸ್ಸು ಬಿಚ್ಚಿ ಮಾತಾಡುತ್ತಿಲ್ಲ. ಇನ್ನು ನಮ್ರತಾ ಕೂಡ ಸ್ನೇಹಿತ್​ನ ಕಂಡು ಸಂಭ್ರಮಿಸಿದಂತೆ ಕಾಣಲಿಲ್ಲ.

ಇದನ್ನು ಓದಿ: ಟಾಸ್​ ಗೆದ್ದ ರೋಹಿತ್; ಟೀಂ ಇಂಡಿಯಾದಲ್ಲಿ ಸಂಜುಗೆ ಸ್ಥಾನ; ಸ್ಟಾರ್​ ಆಟಗಾರರಿಗೆ ಕೊಕ್​​

ಸ್ನೇಹಿತ್​ ತಮ್ಮಲ್ಲಾದ ಭಾವನೆಗಳನ್ನು ವ್ಯಕ್ತಪಡಿಸಿದ್ದೇ ಇಬ್ಬರ ಇರಸುಮುರಿಸಿಗೆ ಕಾರಣ ಆಗಿರೋದು ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಸ್ನೇಹಿತ್​ ನಮ್ರತಾ ಅವರನ್ನು ಅನ್​ ಫಾಲೋ ಮಾಡೋಕೆ ಕಾರಣ ಅವರ ಬಗ್ಗೆ ಆಡಿದ ಮಾತುಗಳು, ಕುಟುಂಬ ಮುಜುಗರ ಅನುಭವಿಸುವಂತೆ ಮಾಡಿದೆ ಎಂಬುವುದು ಮೂಲಗಳ ಪ್ರಕಾರ ತಿಳಿದು ಬಂದ ಮಾಹಿತಿ. ಹೊರಗಡೆ ಆದ ಬೆಳವಣಿಗೆಗಳನ್ನ ನೋಡಿ ಸ್ನೇಹಿತ್​ ನಮ್ರತಾ ಅವರಿಂದ ದೂರ ಆಗೋ ಪ್ರಯತ್ನ ಮಾಡ್ತಿದ್ದಂತೆ ಕಾಣ್ತಿದೆ. ಇನ್ನೂ, ನಮ್ರತಾ ಅಂದುಕೊಂಡಿರೋದು ಕಾರ್ತಿಕ್​ ಜೊತೆ ಕ್ಲೋಸ್​ ಆಗಿರೋದಕ್ಕೆ ಸ್ನೇಹಿತ್​​ ಬೇಸರ ಮಾಡಿಕೊಂದ್ದಾರೆ. ಅವರ ವರ್ತನೆ ಅದಕ್ಕೆ ಬದಲಾಗಿದೆ ಅಂತ. ಈ ಬಗ್ಗೆ ಇಬ್ಬರೂ ಮನಬಿಚ್ಚಿ ಚರ್ಚೆ ಮಾಡಿಲ್ಲ. ಒಟ್ಟಿನಲ್ಲಿ ಸದ್ಯಕ್ಕಂತೂ ಇಬ್ಬರೂ ನಾನೊಂದು ತೀರ ನೀನೊಂದು ತೀರ ಅಂತಿರೋದು ನೋಡೋಗರಿಗೆ ಸ್ಪಷ್ಟವಾಗಿ ಗೊತ್ತಾಗ್ತಿದೆ. ಮುಂದೆ ಸ್ನೇಹನಾ? ಪ್ರೀತಿನಾ? ಅವರಿಬ್ಬರಿಗೆ ಬಿಟ್ಟಿದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಮತ್ತೆ ಮುಖಾಮುಖಿಯಾದ ಸ್ನೇಹಿತ್‌, ನಮ್ರತಾ; ಆ ಒಂದು ಕಾರಣಕ್ಕೆ ಗೆಳೆತನ ಬದಲಾಗಿದ್ಯಾ?

https://newsfirstlive.com/wp-content/uploads/2024/01/bigg-boss-2024-01-17T200057.723.jpg

Load More