newsfirstkannada.com

ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತ; ವಿಮಾನ ಹಾರಾಟ ರದ್ದು

Share :

Published February 6, 2024 at 6:06am

    ದಕ್ಷಿಣ ಕಾಶ್ಮೀರದಲ್ಲಿ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು

    ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತ, ಜನಜೀವನ ಅಸ್ತವ್ಯಸ್ತ

    ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಹಿಮಪಾತಕ್ಕೆ ಸಿಲುಕಿದ ವಾಹನಗಳು

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತ ಬೀಳುತ್ತಿದೆ. ಇದರ ಪರಿಣಾಮ ಜನ ಕೊರೆಯುವ ಚಳಿ ಮಧ್ಯೆ ಜೀವನ ನಡೆಸಲು ಪರದಾಡುವಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಿಮ ಬೀಳುತ್ತಿರುವುದರಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೋಗುವ ವಿಮಾನಗಳನ್ನು ರದ್ದು ಮಾಡಲಾಗಿದೆ.

ಹವಾಮಾನ ವೈಪರೀತ್ಯ ಕಾರಣದಿಂದ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಇಡೀ ದಿನ ಹಿಮಪಾತ ಬೀಳುತ್ತಿತ್ತು. ಬಳಿಕ ಕೆಲವು ಹೊತ್ತು ಸ್ಥಗಿತಗೊಂಡಿತ್ತು. ಇದೇ ಸಂದರ್ಭದಲ್ಲಿ ಏರ್ಪೋರ್ಟ್​​ನಲ್ಲಿ ಹಿಮದ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಎಲ್ಲವೂ ಮುಗಿಸಿ ಇನ್ನೇನು ವಿಮಾನ ಹಾರಾಟ ಆರಂಭಿಸಬೇಕು ಎನ್ನುವ ಹೊತ್ತಿಗೆ ಮತ್ತೆ ಹಿಮ ಬೀಳಲು ಶುರುವಾಗಿದೆ.

ಮುಂಜಾನೆಯಿಂದಲೇ ರಸ್ತೆಗಳಲ್ಲಿನ ಹಿಮ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ. ಜಾರುವ ರಸ್ತೆಗಳಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನಾದ್ಯಂತ ಹಿಮಪಾತದಿಂದ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಹಿಮಪಾತ ಮತ್ತು ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಮತ್ತು ಇತರ ಹೆದ್ದಾರಿಗಳನ್ನು ಮುಚ್ಚಲಾಗಿದೆ.

ಇನ್ನೂ, ರಂಬನ್ ಜಿಲ್ಲೆಯ ಶೆರ್ಬಿಬಿಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿದ್ದವು. ಇನ್ನು ಕೆಲವು ಕಡೆ ಬಯಲು ಪ್ರದೇಶಗಳಲ್ಲಿ ಮಳೆಯಾಗಿದ್ದರೆ, ಜಮ್ಮುವಿನ ಕಿಶ್ತ್ವಾರ್, ದೋಡಾ, ರೀಡಿಂಗ್, ರಂಬನ್, ಪೂಂಚ್, ರಾಜೌರಿ ಮತ್ತು ಕಥುವಾ ಜಿಲ್ಲೆಗಳಲ್ಲಿ ಭಾರಿ ಹಿಮಪಾತ ವರದಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಬಂಡಿಪೋರಾ, ಬಾರಾಮುಲ್ಲಾ, ಗಂದರ್​ಬಾಲ್, ಕುಪ್ವಾರಾ, ದೋಡಾ, ಕಿಶ್ತ್ವಾರ್, ಪೂಂಚ್ ಮತ್ತು ರಂಬನ್ ಜಿಲ್ಲೆಗಳಲ್ಲಿ ಹಿಮಪಾತವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಪ್ರದೇಶಗಳಲ್ಲಿ ವಾಸಿಸುವ ಜನ ಮುಂಜಾಗ್ರತೆ ವಹಿಸುವಂತೆ ಮತ್ತು ಹಿಮಪಾತ ಪೀಡಿತ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ಕಾಶ್ಮೀರ ಕಣಿವೆ ಮತ್ತು ಜಮ್ಮು ವಿಭಾಗದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು. ಆದರೆ ಎಂಜಿನಿಯರ್​ಗಳು ತಕ್ಷಣ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಉತ್ತರ ಕಾಶ್ಮೀರದ ಗುಲ್ಮಾರ್ಗ್ ಸ್ಕೀ ರೆಸಾರ್ಟ್​ನಲ್ಲಿ ತಾಪಮಾನವು ಮೈನಸ್ 7 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್​ನಲ್ಲಿ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಿಮದ ರಾಶಿಯಲ್ಲಿ ಕೇದಾರನಾಥ ಸನ್ನಿಧಿಯನ್ನು ನೋಡಿ ಭಕ್ತರು ರೋಮಾಂಚನಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತ; ವಿಮಾನ ಹಾರಾಟ ರದ್ದು

https://newsfirstlive.com/wp-content/uploads/2024/02/uttarakhand-10.jpg

Load More