/newsfirstlive-kannada/media/post_attachments/wp-content/uploads/2024/07/boys.jpg)
ಬೆಂಗಳೂರು: ಈಗಂತೂ ಪುರುಷರು ಒಂದಲ್ಲಾ ಒಂದು ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಅದರಲ್ಲೂ ಲವ್​ ಫೇಲ್ಯೂರ್, ಆಫೀಸ್​ ಸ್ಟ್ರೆಸ್​​, ಕೌಟುಂಬಿಕ ಸಮಸ್ಯೆ, ಆತ್ಮಹತ್ಯೆ ಆಲೋಚನೆ, ಆರ್ಥಿಕ ಒತ್ತಡ ಹೀಗೆ ಒಂದಾ, ಎರಡಾ ಹೇಳ್ತಾ ಹೋದರೆ ಲಿಸ್ಟ್​​ ದೊಡ್ಡದು ಆಗುತ್ತಾನೆ ಹೋಗುತ್ತೆ. ಇದಿಷ್ಟೇ ಅಲ್ಲಾ ಇನ್ನು ಸಾಕಷ್ಟು ಸಮಸ್ಯೆಗಳಿಂದ ಪುರುಷರು, ಯುವಕರು ಮಾನಸಿಕ ಖಿನ್ನತೆಗೆ ಒಳಗಾಗ್ತಿದ್ದಾರಂತೆ.
/newsfirstlive-kannada/media/post_attachments/wp-content/uploads/2024/04/LOVE.jpg)
ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ
ಮಹಿಳೆಯರಿಗೆ ಹೋಲಿಸಿದರೇ​ ಈ ಸಮಸ್ಯೆ ಪುರುಷರನ್ನೇ ಹೆಚ್ಚಾಗಿ ಕಾಡ್ತಿದ್ಯಂತೆ. ಈ ಬಗ್ಗೆ ಜೆ.ಪಿ.ನಗರದಲ್ಲಿರುವ ಕಡಬಮ್ಸ್ ಆಸ್ಪತ್ರೆ ನಡೆಸಿದ ಸರ್ವೇ ಹೇಳುತ್ತಿದೆ. ಮೊದಲೆಲ್ಲಾ ಖಿನ್ನತೆ, ಡಿಪ್ರೆಷನ್​ ಅನ್ನೋದು ಒಂದು ಖಾಯಿಲೆ ಅಂತ ನಂಬೋಕೆ ಜನ ರೆಡಿ ಇರಲಿಲ್ಲ. ಆದ್ರೀಗ ಭಾಗಶಃ ಎಲ್ಲಾರ ಬಾಯಲ್ಲೂ ಡಿಪ್ರೆಷನ್​ ಅನ್ನೋದು ಕೇಳೋಕೆ ಸಿಗ್ತಿದೆ. ದೈಹಿಕ ಕಾಯಿಲೆಯಷ್ಟೇ ಮಾನಸಿಕ ರೋಗವೂ ಕಾಮನ್​ ಆಗ್ಬಿಟ್ಟಿದೆ.
/newsfirstlive-kannada/media/post_attachments/wp-content/uploads/2024/07/Nishmita-Doctor-kadbums.jpg)
ಇತ್ತೀಚಿನ ಕಾಲದಲ್ಲಿ ಮಾನಸಿಕ ಖಿನ್ನತೆಗೆ ಒಳಾಗುತ್ತಿರೋ ಜನರು ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ಎಮರ್ಜೆನ್ಸಿ ವಾರ್ಡ್​ಗೆ ಬರುವ ಜನರು ಜಾಸ್ತಿಯಾಗುತ್ತಿದ್ದಾರೆ. ಅದಕ್ಕಾಗಿ 7 ತಿಂಗಳ ರೋಗಿಗಳ ನೋಂದಣಿ ಆಧರಿಸಿ ಕಡಬಮ್ಸ್ ಆಸ್ಪತ್ರೆ ಅಧ್ಯಯನ ಮಾಡಿತ್ತು. ಈ ಪೈಕಿ 19,118 ಮಂದಿ ಒಳ ರೋಗಿಗಳು ಹಾಗೂ ಹೊರ ರೋಗಿಗಳಿದ್ದಾರೆ. ಪುರುಷರ ಸಂಖ್ಯೆ ಶೇಖಡ 60ರಷ್ಟಿದ್ರೆ, ಮಹಿಳೆಯರ ಸಂಖ್ಯೆ ಶೇಖಡ 40ರಷ್ಟಿದೆ. ಈ 7 ತಿಂಗಳಲ್ಲಿ ಮಾಡುವ ಅಧ್ಯಯನದಲ್ಲಿ ಸಾಕಷ್ಟು ಪುರುಷರು ಮದ್ಯಪಾನ ಮಾಡ್ತಾ ಇರುತ್ತಾರೆ. ಹೀಗಾಗಿ ಅವರ ಜೊತೆಗೆ ಅವರ ಕುಟುಂಬಸ್ಥರ ಮೇಲೂ ಪರಿಣಾಮ ಉಂಟಾಗುತ್ತದೆ. ಇದರಿಂದ ಮನೆಯಲ್ಲಿ ಕಿರಿಕಿರಿ, ಮನಸ್ಥಾಪ, ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಸಾಕಷ್ಟು ಜನರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಡಾ. ನಿಶ್ಮಿತಾ, ಮನೋವೈದ್ಯೆ, ಕಡಬಮ್ಸ್ ಆಸ್ಪತ್ರೆ
ಪುರುಷರ ಗಮನಕ್ಕೆ!
7 ತಿಂಗಳ ರೋಗಿಗಳ ನೋಂದಣಿ ಆಧರಿಸಿ ಕಡಬಮ್ಸ್ ಆಸ್ಪತ್ರೆ ಅಧ್ಯಯನ ನಡೆಸಿದೆ. ಈ ಪೈಕಿ 19,118 ಮಂದಿ ಒಳ ರೋಗಿಗಳು ಹಾಗೂ ಹೊರ ರೋಗಿಗಳಿದ್ದಾರೆ. ಪುರುಷರ ಸಂಖ್ಯೆ ಶೇಕಡ 60ರಷ್ಟಿದ್ರೆ, ಮಹಿಳೆಯರ ಸಂಖ್ಯೆ ಶೇಕಡ 40ರಷ್ಟಿದೆ. ಕೌಟುಂಬಿಕ ಸಮಸ್ಯೆ, ಶೈಕ್ಷಣಿಕ ಒತ್ತಡ, ಆತ್ಮಹತ್ಯೆ ಆಲೋಚನೆ ಬರೋದು, ಮಾದಕ ವಸ್ತುಗಳ ವ್ಯಸನ, ಜ್ಞಾಪಕ ಶಕ್ತಿ ತೊಂದರೆ ಇರುವವರು ಹೀಗೆ ಸಾಕಷ್ಟು ಸಮಸ್ಯೆಗಳಿಂದ ಪುರುಷರು ಬಳಲುತ್ತಿದ್ದಾರಂತೆ. ಈ ಪೈಕಿ ಯುವಜನರೇ ಅಧಿಕ ಎನ್ನುವುದು ಈ ಅಧ್ಯಯನದಿಂದ ದೃಢ ಪಟ್ಟಿದ್ದು, 34.6ರಷ್ಟು 30ರಿಂದ 40 ವರ್ಷದವರಿದ್ರೆ, ಶೇ 28.8ರಷ್ಟು ಮಂದಿ 20ರಿಂದ 30ರೊಳಗಿನ ವಯಸ್ಸಿನವರಿದ್ದಾರೆ.
/newsfirstlive-kannada/media/post_attachments/wp-content/uploads/2024/07/boys1.jpg)
ಖಿನ್ನತೆಗೆ ಒಳಗಾದ ಪುರುಷರಲ್ಲಿ ಕೋಪ, ಹತಾಶೆ, ಸಿಡುಕುತನ, ತಲೆನೋವು, ಎದೆಯಲ್ಲಿ ಬಿಗಿತ, ಹೀಗೆ ಸಾಕಷ್ಟು ಸಮಸ್ಯೆ ಕಂಡು ಬರುತ್ತೆ. ಒಂದು ವೇಳೆ ನಿಮಗೆ ಈ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ವೈದ್ಯರನ್ನ ಸಂಪರ್ಕಿಸೋದು ಉತ್ತಮ. ಹುಡುಗಿ ಕೈ ಕೊಟ್ಲು ಅಂತ ಬಾಟಲ್​ ಹಿಡಿದು ಕೊರೋಗೋದಿಕ್ಕಿಂತ ಸಮಸ್ಯೆಗೆ ಪರಿಹಾರ ಹುಡುಕೋದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us