/newsfirstlive-kannada/media/post_attachments/wp-content/uploads/2024/08/Naga-Chaitanya-and-Sobhita-Dhulipala-samantha.jpg)
ಟಾಲಿವುಡ್ನ ಕ್ಯೂಟ್ ಹೀರೋ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಹೈದರಾಬಾದ್ನಲ್ಲಿ ಇಂದು ತಮ್ಮ 2ನೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥಕ್ಕೆ ಹಿರಿಯರು, ಕೆಲ ಸ್ನೇಹಿತರು ಹಾಗೂ ಎರಡು ಕಡೆಯ ಕುಟುಂಬಗಳು ಸಾಕ್ಷಿಯಾದವು. ಬ್ಯೂಟಿ ಸಮಂತಾಗೆ ಗುಡ್ ಬಾಯ್ ಹೇಳಿದ ನಂತರ ನಾಗ ಚೈತನ್ಯ, ಶೋಭಿತಾರನ್ನ ವರಿಸುವುದು ಕನ್ಫರ್ಮ್ ಆಗಿದೆ. ಹಾಗದ್ರೆ, ಯಾರು ಈ ಶೋಭಿತಾ ಧೂಳಿಪಾಲ.
ಇದನ್ನೂ ಓದಿ: ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್.. ಸಮಂತಾ ವಿಡಿಯೋ ಭಾರೀ ವೈರಲ್; ಶೋಭಿತಾಗೆ ಹಿಡಿಶಾಪ!
ಇದನ್ನೂ ಓದಿ:ಸಮಂತಾರ ಮಾಜಿ ಪತಿ ನಾಗ ಚೈತನ್ಯಗೆ ಎಂಗೇಜ್ಮೆಂಟ್? ಆ ಹೀರೋಯಿನ್ ಯಾರು..?
ಫೆಮಿನಾ ಮಿಸ್ ಇಂಡಿಯಾ 2013 ಪ್ರಶಸ್ತಿ ವಿಜೇತೆ ಶೋಭಿತಾ ಧೂಳಿಪಾಲ ಅವರು 1992ರ ಮೇ 31 ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಜನಿಸಿದರು. ಇವರ ತಂದೆ ವೇಣುಗೋಪಾಲ್ ರಾವ್ ಅವರು ಮರ್ಚೆಂಟ್ ನೇವಿ ಇಂಜಿನಿಯರ್, ತಾಯಿ ಶಾಲೆ ಶಿಕ್ಷಕಿಯಾಗಿದ್ದಾರೆ. ಶೋಭಿತಾ ಅವರಿಗೆ ಸಮಂತಾ ಧೂಳಿಪಾಲ ಎನ್ನುವ ಸಹೋದರಿ ಕೂಡ ಇದ್ದಾರೆ. ಮುಂದೆ ಉನ್ನತ ವ್ಯಾಸಂಗಕ್ಕಾಗಿ ಮುಂಬೈಗೆ ತೆರಳಿದರು. ಅಲ್ಲದೇ ಶೋಭಿತಾ ಮೊದಲಿನಿಂದಲೂ ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ಕರಗತ ಮಾಡಿಕೊಂಡಿದ್ದರಿಂದ ಶಾಸ್ತ್ರೀಯ ನೃತ್ಯಗಾರ್ತಿಯು ಆಗಿದ್ದಾರೆ. ಹೀಗಾಗಿಯೇ ಅಭಿನಯ ಕಡೆಗೆ ಆಸಕ್ತಿ ಬೆಳೆದು ಸಿನಿಮಾದಲ್ಲಿ ನಟಿಯಾಗಿ ವೃತ್ತಿ ಆರಂಭಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಓದಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್.. ಬೆಂಗಳೂರಲ್ಲೇ ಇದೆ ಅವಕಾಶ; ಹೇಗೆ?
ಶೋಭಿತಾ ಧೂಳಿಪಾಲ ಅವರು 2016ರಲ್ಲಿ ವಿಕ್ಕಿ ಕೌಶಲ್ ಅವರ ಜೊತೆ ರಮಣ ರಾಘವ್ 2.0 ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದೇ ವರ್ಷದಲ್ಲೇ ಫ್ಯಾಂಟಮ್ ಸ್ಟುಡಿಯೋದ 3 ಸಿನಿಮಾಗಳಿಗೆ ಸಹಿ ಮಾಡಿದ್ದರು. ಕಾಲಕಂಡಿ, ಚೆಫ್ ಚಿತ್ರಗಳಲ್ಲಿ ಅಭಿನಯ ಮಾಡಿದರು. ಇವುಗಳ ನಂತರ 2018ರಲ್ಲಿ ಮೊದಲ ಬಾರಿಗೆ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ತೆಲುಗು ನಟ ಅದ್ವಿಶೇಷ್ ಅವರ ಗೂಡಚಾರಿ ಸಿನಿಮಾದಲ್ಲಿ ನಟನೆ ಮಾಡಿದರು.
ಇದನ್ನೂ ಓದಿ: ಅಂದು ಮೇರಿ ಕೋಮ್ಗೂ ಎದುರಾಗಿತ್ತು ಅನರ್ಹ ಭೀತಿ.. 4 ಗಂಟೆಯಲ್ಲಿ 2 kg ತೂಕ ಇಳಿಸಿದ್ದ ಛಲಗಾರ್ತಿ..!
ಇಷ್ಟೇ ಅಲ್ಲದೇ ಯಶ್ ಅವರಿಗೆ ಡೈರೆಕ್ಟ್ ಮಾಡುತ್ತಿರುವ ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಮೂಥೋನ್ ಸಿನಿಮಾದಲ್ಲಿ ಶೋಭಿತಾ ಆ್ಯಕ್ಟ್ ಮಾಡಿದ್ದಾರೆ. 2024ರ ಏಪ್ರಿಲ್ನಲ್ಲಿ ರಿಲೀಸ್ ಆದ ಮಂಕಿ ಮ್ಯಾನ್ ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ನಟಿಸಿದ್ದಾರೆ. ಇದು ಇಂಗ್ಲಿಷ್ ಮೂವಿಯಾಗಿದೆ. ಶೋಭಿತಾ ಅವರು ಹಲವು ಪ್ರಶಸ್ತಿ, ಬಹುಮಾನಗಳನ್ನು ಗೆದ್ದಿದ್ದಾರೆ. ಹಿಂದಿ ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲೂ ಶೋಭಿತಾ ಧೂಳಿಪಾಲ ಅಭಿನಯ ಮಾಡಿದ್ದಾರೆ. ಸದ್ಯ ಇದೀಗ ತೆಲುಗು ನಟ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ