ಒಂದು ತಿಂಗಳ ಕಾಲ ಚಳ್ಳೆ ಹಣ್ಣು ತಿನ್ನಿಸಿದ್ದ ಸುಂದರಿ.. ಕೊನೆಗೂ ಹನಿಟ್ರ್ಯಾಪ್ ಕೇಸ್​ನಲ್ಲಿ ಅರೆಸ್ಟ್​​..!

author-image
Ganesh
Updated On
ಒಂದು ತಿಂಗಳ ಕಾಲ ಚಳ್ಳೆ ಹಣ್ಣು ತಿನ್ನಿಸಿದ್ದ ಸುಂದರಿ.. ಕೊನೆಗೂ ಹನಿಟ್ರ್ಯಾಪ್ ಕೇಸ್​ನಲ್ಲಿ ಅರೆಸ್ಟ್​​..!
Advertisment
  • ಸೋಶಿಯಲ್ ಮೀಡಿಯಾ ಸ್ಟಾರ್ ಕೀರ್ತಿ ಪಟೇಲ್ ಬಂಧನ
  • ಕೀರ್ತಿ ಪಟೇಲ್ ವಿರುದ್ಧ ಒಟ್ಟು 9 ಪ್ರಕರಣಗಳು ದಾಖಲು
  • ಬಂಧಿಸಿದ ಮೇಲೂ ಕೈಮುಗಿದು ನಕ್ಕ ಕೀರ್ತಿ ಪಟೇಲ್

ಗುಜರಾತ್​ನ ಸೋಶಿಯಲ್ ಮೀಡಿಯಾ ಸ್ಟಾರ್ ಕೀರ್ತಿ ಪಟೇಲ್ (Kirti Patel)ನನ್ನು ಪೊಲೀಸರು ಬಂಧಿಸಿದ್ದಾರೆ. 2024ರಲ್ಲಿ ಕೀರ್ತಿ ವಿರುದ್ಧ ಸುಲಿಗೆ, ಹನಿಟ್ರ್ಯಾಪಿಂಗ್ ಮತ್ತು ಐಟಿ ಕಾಯ್ದೆಯಡಿ ದೂರು ದಾಖಲಾಗಿತ್ತು..

ಈ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳಿದ್ದಾರೆ ಅಂತಾ ಸೂರತ್ ಡಿಸಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಕೀರ್ತಿ ಕಳೆದ 11 ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕೋರ್ಟ್​ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ವಾರೆಂಟ್ ಜಾರಿ ಬೆನ್ನಲ್ಲೇ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದೇವು. ಕೊನೆಗೂ ಆಕೆಯನ್ನು ಅಹ್ಮದಾಬಾದ್​ನಲ್ಲಿ ಬಂಧಿಸಲಾಗಿದೆ. ಶೀಘ್ರದಲ್ಲೇ ಕೋರ್ಟ್​​ಗೆ ಒಪ್ಪಿಸಿ ಮುಂದಿನ ಕ್ರಮ ತೆಗೆದುಕೊಳ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂ ಯಶಸ್ವಿ ಕಾರ್ಯಾಚರಣೆ.. ದೆಹಲಿಗೆ ಬಂದಿಳಿದ 110 ಭಾರತೀಯರು..!

publive-image

ಬಿಲ್ಡರ್​ನಿಂದ ಸುಲಿಗೆಗೆ ಬೇಡಿಕೆ

ಕೀರ್ತಿ ವಿರುದ್ಧ ಒಟ್ಟು ಒಂಬತ್ತು ಪ್ರಕರಣಗಳಿವೆ. ಇವುಗಳಲ್ಲಿ 5 ಪ್ರಕರಣಗಳು ಸೂರತ್ ನಗರದಲ್ಲಿ ದಾಖಲಾಗಿವೆ. ಈಕೆ ಸೋಶಿಯ್ ಮೀಡಿಯಾ ಪ್ರಭಾವಿಯಾಗಿ ಕೆಲಸ ಮಾಡ್ತಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾಳೆ. ಸದ್ಯ ಸೂರತ್​ನ ಬಿಲ್ಡರ್ ಒಬ್ಬರನ್ನು ಹನಿಟ್ರ್ಯಾಪ್ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಬಂಧನದ ನಂತರವೂ ನಕ್ಕ ಕೀರ್ತಿ..

ಅರೆಸ್ಟ್ ಬೆನ್ನಲ್ಲೇ ಕೀರ್ತಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅವರು ನಗುತ್ತಿದ್ದಾರೆ. ಹಸಿರು ಬಣ್ಣದ ಟಿ-ಶರ್ಟ್ ಮತ್ತು ದುಪಟ್ಟಾ ಧರಿಸಿದ್ದಾರೆ. ಪೊಲೀಸರು ಬಂಧಿಸಿದ ನಂತರವೂ ಅವರು ನಗುತ್ತಿರೋದು ಕಂಡುಬಂದಿದೆ. ಈ ಹಿಂದೆಯೂ ಕೀರ್ತಿಯನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್ 2022ರಲ್ಲಿ, ಕುಟುಂಬವೊಂದಕ್ಕೆ ಕಿರುಕುಳ ನೀಡಿದ್ದಕ್ಕಾಗಿ ಕೀರ್ತಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿತ್ತು. ಮೇ 2022 ರಲ್ಲಿ ಕೀರ್ತಿ ಪಟೇಲ್ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ನಂತರ ಬಂಧನ ಮಾಡಲಾಗಿತ್ತು..

ಇದನ್ನೂ ಓದಿ: ಕಣ್ಣು ಬಿಡೋ ಮುನ್ನವೇ ಕಣ್ಮುಚ್ಚಿಬಿಡ್ತು ಕಂದಮ್ಮ.. 8 ದಿನ ಕಳೆದ್ರೂ ತಾಯಿಗೆ ಶಿಶುವಿನ ಮುಖ ತೋರಿಸದ ಸರ್ಕಾರಿ ಆಸ್ಪತ್ರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment