/newsfirstlive-kannada/media/post_attachments/wp-content/uploads/2025/04/Misha_Agrawal.jpg)
ಸೋಶಿಯಲ್ ಮೀಡಿಯಾದಲ್ಲಿ ಇನ್​ಸ್ಟಾದ ಕಂಟೆಂಟ್ ಕ್ರಿಯೇಟರ್ ಆಗಿದ್ದ ಮಿಶಾ ಅಗರ್ವಾಲ್ ಎನ್ನುವರು ಹಠಾತ್ತನೆ ಪ್ರಾಣ ಕಳೆದುಕೊಂಡಿರುವುದಕ್ಕೆ ನೆಟ್ಟಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಿಶಾ ಅಗರ್ವಾಲ್ ಇನ್ನೇನು ಎರಡು ದಿನಗಳಲ್ಲಿ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಬೇಕಿತ್ತು. ಆದರೆ ಬರ್ತ್​​ಡೇಗೂ ಎರಡು ದಿನ ಮೊದಲೇ ಮಿಶಾ ಅಗರ್ವಾಲ್ ಕೊನೆಯುಸಿರೆಳೆದಿದ್ದಾರೆ. ಸದ್ಯ ಈ ಸಂಬಂಧ ಅವರ ಸ್ನೇಹಿತರು, ಕೆಲ ಕಂಟೆಂಟ್ ಕ್ರಿಯೇಟರ್ಸ್​, ಅಭಿಮಾನಿಗಳು, ಫಾಲೋವರ್ಸ್​ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/Misha_Agrawal_1.jpg)
25ನೇ ವರ್ಷಕ್ಕೆ ಕಾಲಿಡುತ್ತಿದ್ದ ಮಿಶಾ ಅಗರ್ವಾಲ್ ಅವರು ತನ್ನದೇ ಸ್ಟೈಲ್​ ಅಲ್ಲಿ ರೀಲ್ಸ್​, ಕಂಟೆಂಟ್​ಗಳನ್ನು ಕ್ರಿಯೇಟ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದರು. ಹೀಗಾಗಿಯೇ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 3.5 ಲಕ್ಷ ಫಾಲೋವರ್ಸ್ ಕೂಡ ಹೊಂದಿದ್ದರು. ಇನ್ನು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಫಾಲೋವರ್ಸ್​ ಸಂತಾಪ ಸೂಚಿಸುತ್ತಿದ್ದಾರೆ.
ಇನ್ನು ಮಿಶಾ ಕೊನೆಯುಸಿರೆಳೆದಿರುವ ಕುರಿತು ಅವರ ಕುಟುಂಬಸ್ಥರೇ ಇನ್​ಸ್ಟಾದಲ್ಲಿ ಪೋಸ್ಟ್​ ಅನ್ನು ಶೇರ್ ಮಾಡಿದ್ದಾರೆ. ಮಿಶಾ ಅಗರ್ವಾಲ್ ನಿಧನದ ಹೃದಯ ವಿದ್ರಾವಕ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಮಗಳು ಮೃತಪಟ್ಟಿರುವ ವಿಷಯ ತಿಳಿದಾಗ ನಮಗೂ ಹೃದಯ ಒಡೆದಂತೆ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಅವಳಿಗೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಭಾವನಾತ್ಮಕ ಪೋಸ್ಟ್ ಅನ್ನು ಕುಟುಂಬ ಹಂಚಿಕೊಂಡಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us