/newsfirstlive-kannada/media/post_attachments/wp-content/uploads/2024/11/SWATI-MUKUND-1.jpg)
ಮದುವೆಗೆ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಹೆಣ್ಣು ಮಕ್ಕಳು ಫುಲ್ ಡಿಮ್ಯಾಂಡ್ ಇದ್ದಾರೆ. ನಿಮ್ಮ ಹತ್ತಿರ ಏನಿದೆ. ಸ್ವಂತ ಮನೆ ಇದೆಯಾ, ಕಾರ್ ಇದೆಯಾ, ಅಪ್ಪ ಅಮ್ಮ ಇದಾರಾ ಅನ್ನೋ ಪ್ರಶ್ನೆಗಳನ್ನ ಹೆಣ್ಣು ಕೊಡೋ ಮನೆಯವ್ರು ಕೇಳ್ತಾರೋ ಇಲ್ವೋ ಗೊತ್ತಿಲ್ಲ.. ಆದ್ರೇ ಮ್ಯಾಟ್ರಿಮೊನಿ ಅನ್ನೋ ಮಾಯಾಜಾಲ ಬರ್ತಾ ಬರ್ತಾ ಹಳ್ಳ ಹಿಡಿತಾ ಇದೆ. ಸಂಬಂಧ ಬೆರೆಸೊ ಮದುವೆಯನ್ನೇ ಒಂದು ಲೆಕ್ಕದಲ್ಲಿ ಬ್ಯುಸಿನೆಸ್ ಮಾಡಿಕೊಂಡು ಬಿಟ್ಟಿದ್ದಾರೆ.
ಇದನ್ನೂ ಓದಿ:ದೇವ ಭೂಮಿಯಲ್ಲಿ ಘೋರ ದುರಂತ: 200 ಅಡಿ ಕಂದಕಕ್ಕೆ ಉರುಳಿ ಬಿದ್ದ ಬಸ್.. ಸಾವಿನ ಸಂಖ್ಯೆ 36ಕ್ಕೆ ಏರಿಕೆ
ಮ್ಯಾಟ್ರಿಮೊನಿ ಅಥವಾ ಆನ್ಲೈನ್ ವಧು ವರರ ಅನ್ವೇಷಣಾ ಕೇಂದ್ರ. ಈ ಅನ್ವೇಷಣೆ ಅನ್ನೋ ಫ್ಲ್ಯಾಟ್ಫಾರ್ಮ್ನಲ್ಲಿ ಗ್ರಾಹಕರಿಗೆ ಯಾವ ರೀತಿ ಮಕ್ಮಲ್ ಟೋಪಿ ಹಾಕ್ತಾರೆ ಅನ್ನೋದಕ್ಕೆ ಒಂದು ಮ್ಯಾಟ್ರಿಮೋನಿ ಕಂಪನಿ, ಏನ್ ಮಾಡಿದೆ ಅಂತ ಗೊತ್ತಾದರೇ ನೀವು ಹಿಡಿಶಾಪ ಹಾಕುತ್ತೀರ. ಹುಡುಗ, ಹುಡುಗಿಯರಿಗೆ ವೈವಾಹಿಕ ಸಂಬಂಧ ಕಲ್ಪಿಸೋ ಮ್ಯಾಟ್ರಿಮೊನಿ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಕೆಲವ್ರು ಫೇಕ್ ಐಡಿಗಳನ್ನು, ಪೋಟೋಗಳನ್ನು ಹಾಕಿ ಮೋಸ ಮಾಡೋರ ಸಂಖ್ಯೆ ಹೆಚ್ಚಾಗ್ತಿದೆ. ಆದರೆ, ಈಗ ಖಾಸಗಿ ಮ್ಯಾಟ್ರಿಮೊನಿಯಲ್ಲಿ ಮದುವೆಯಾಗಿ ಗಂಡನೊಂದಿಗೆ ಜೀವನ ಮಾಡುತ್ತಿರೋ ಮಹಿಳೆಯ ಫೋಟೋವನ್ನು ಹಾಕಿ ಮದುವೆ ಪ್ರಪೋಸಲ್‌ಗೆ ಇಡಲಾಗಿದೆ. ಇದನ್ನು ಮದುವೆ ಆಗಿರೋ ಮಹಿಳೆಯೇ ನೋಡಿ. ನನಗೆ ಮದುವೆಯಾಗಿದೆ ಅಂತ ಗಂಡನ ಜೊತೆಗಿರೋ ಸೆಲ್ಫಿ ವಿಡಿಯೋ ಮಾಡಿ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಛೀಮಾರಿ ಹಾಕಿದ್ದಾರೆ.
ಖಾಸಗಿ ಮ್ಯಾಟ್ರಿಮೊನಿಯಲ್ಲಿ ಫೋಟೋ ಹಾಕಲಾಗಿದ್ದ ಮಹಿಳೆಯ ಹೆಸರು ಸ್ವಾತಿ ಮುಕುಂದ್ ಅಂತ.
ಇದನ್ನೂ ಓದಿ:ಬಾಲಕನ ಹೊಟ್ಟೆಯಲ್ಲಿತ್ತು ಬ್ಯಾಟರಿ, ಬ್ಲೇಡ್, ಮೊಳೆ, ಉಗುರು ಸೇರಿ 56 ವಸ್ತುಗಳು.. ಆಪರೇಷನ್ ಬಳಿಕ ಸಾ*ವು
ಸೋಶಿಯಲ್ ಮೀಡಿಯಾ ಇನ್ಲ್ಫೂಯೆನ್ಸರ್ ಆಗಿರೋ ಸ್ವಾತಿ ಮುಕುಂದ್, ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ಗಳಲ್ಲಿ ವೈರಲ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ತಾರೆ. ಇದ್ರ ಜೊತೆಗೆ ಸ್ವತಃ ಸ್ವಾತಿ ಮಾಡಿರೋ ವಿಡಿಯೋಗಳೇ ಹೆಚ್ಚು ವೈರಲ್ ಕೂಡ ಆಗುತ್ತವೆ. ಆದರೆ ಈಗ ಮ್ಯಾಟ್ರಿಮೊನಿಯಲ್ಲಿ ನನಗೆ ಮದ್ವೆಯಾಗಿದ್ದರೂ, ಈ ಹೆಣ್ಣಿಗೆ ಹುಡುಗ ಬೇಕಿದೆ ಅನ್ನೋ ರೀತಿ ಫೋಟೋವನ್ನ ಹಾಕಿಕೊಂಡಿದ್ದ ನಕಲಿ ಮ್ಯಾಟ್ರಿಮೊನಿ ಪೋಸ್ಟ್ಅನ್ನ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡು ಕಿಡಿಕಾರಿದ್ದಾರೆ. ಅದರಲ್ಲಿ 'ಮದುವೆಯಾಗಿ ಗಂಡನೊಂದಿಗೆ ಜೀವನ ಮಾಡುತ್ತಿರೋ ನನ್ನ ಫೋಟೋವನ್ನು, ನಂಬಿಕೆಯ ಮ್ಯಾಟ್ರಿಮೊನಿ ಅಂತ ಕರೆಸಿಕೊಳ್ಳೊ ಭಾರತದ ಹೆಸರಾಂತ ಭಾರತ್ ಮ್ಯಾಟ್ರಿಮೊನಿ ವೆಬ್‌ಸೈಟ್ ಆಗಿರೋ ಒಂದರಲ್ಲಿ ನನ್ನ ಫೋಟೋ ಹಾಕಿಕೊಂಡಿದ್ದಾರೆ. ಈ ಮೂಲಕ ಮದುವೆಯಾದ ನನಗೆ ಮ್ಯಾಟ್ರಿಮೊನಿಯಲ್ಲಿ ಫೋಟೋ ಹಾಕಿ ಮತ್ತೆ ಮದುವೆ ಮಾಡಿಸೋದಕ್ಕೆ ಮುಂದಾಗಿದ್ದಾರೆ ಅಂತ ಕಿಡಿಕಾರಿದ್ದಾರೆ.
ಮ್ಯಾಟ್ರಿಮೊನಿಯ ವಿಡಿಯೋ ಸ್ಕ್ರೀನ್ ಶಾಟ್ ಪಿಕ್ ಹಿಡಿದುಕೊಂಡು ಗಂಡನ ಜೊತೆಗೆ ಸ್ವಾತಿ ಮುಕುಂದ್ ವಿಡಿಯೋ ಮಾಡಿದ್ದಾರೆ. ನನ್ನ ಗಂಡ, ನನ್ನ ಪಕ್ಕದಲ್ಲಿಯೇ ಇದ್ದಾರೆ. ಅವರು ನನ್ನ ಫೋಟೋವನ್ನು ಬಳಸೋ ಅಗತ್ಯ ಇಲ್ಲ, ನನ್ನ ಜೊತೆಗೆ ನನ್ನ ಗಂಡ ಇದ್ದಾರೆ ಎಂದು ತೋರಿಸಿದ್ದಾರೆ. ನಾವಿಬ್ಬರೂ ಈಗಾಗಲೇ ಮದುವೆ ಮಾಡಿಕೊಂಡಿದ್ದೀವಿ ಅಂತ ಹೇಳಿಕೊಂಡಿದ್ದಾರೆ. ಇನ್ನು, ಇದೇ ಮ್ಯಾಟ್ರಿಮೊನಿಗೆ ಏನಾದ್ರೂ ಹೆಚ್ಚಾಗಿ ಪೇಮೆಂಟ್ ಮಾಡಿದ್ರೇ, ನಾವು ನಂಬಿಕೆಯುಳ್ಳ ಎಲೈಟ್ ಸೇವೆಯನ್ನು ಕೊಡ್ತೀವಿ ಅಂತ ಹೇಳಿಕೊಳ್ತಾರೆ. ಆದ್ರೇ ಇವರು ಯಾವುದೇ ಪ್ರೊಫೈಲ್ ಅನ್ನು ಚೆಕ್ ಮಾಡದೇ, ಹೇಗೆ ಮ್ಯಾಚ್ ಮೇಕಿಂಗ್ ಮಾಡ್ತಾರೆ ಅಂತ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಸಾವಿರಾರು ರೂಪಾಯಿ ದುಡ್ಡು ತೊಗೊಂಡು, ಫೇಕ್ ಪ್ರೊಫೈಲ್ಗಳನ್ನ ಕ್ರಿಯೇಟ್ ಮಾಡೋದು, ಫೇಕ್ ಫೋಟೋಸ್ ಅನ್ನ ಹಾಕೋದು ಒಂದು ಹ್ಯಾಬಿಟ್ ಆಗೋಗ್ತಿದೆ. ಕಸ್ಟಮರ್ಗೆ ಸರಿಯಾದ ಸಂಗಾತಿಯನ್ನ ತೋರಿಸೋ ಮ್ಯಾಟ್ರಿಮೊನಿ ಆ್ಯಪ್ಗಳನ್ನ ನೋಡ್ಕೊಂಡು ಚಾಯ್ಸ್ ಮಾಡಿ. ಇದ್ರ ಜೊತೆಗೆ ಎಲ್ಲಾ ಗ್ರಾಹಕರು ಯಾವುದೇ ಅಪ್ಲಿಕೇಷನ್‌ಗಳನ್ನು ಬಳಸೋವಾಗ ಎಚ್ಚರಿಕೆಯಿಂದ ಇರಬೇಕು ಅಂತ ವಿಡಿಯೋದಲ್ಲಿ ಹೇಳಿದ್ದಾರೆ.
ಸಂಬಂಧ ಬೆಸೆಯಬೇಕಿದ್ದ ಮದ್ವೆ, ಈಗ ಬರ್ತಾ ಬರ್ತಾ ಒಂದು ಹಗರಣ ಆದಂತೆ ಆಗ್ತಿದೆ. ಕೆಲ ಮ್ಯಾಟ್ರಿಮೊನಿಗಳಿಂದ ದುಡ್ಡು ಮಾಡೋ ಕಾಯಿಲೆ ಹೆಚ್ಚಾಗ್ತಿದೆ. ದುಡ್ಡು ಮಾಡೋಕೆ ಏನ್ ಬೇಕಾದ್ರೂ ಮಾಡೋ ಜನ ಈ ಭೂಮಿ ಸಿಕ್ಕಾಪಟ್ಟೆ ಇದ್ದಾರೆ. ವಯಸ್ಸಾಗಿ ಮದ್ವೆಯಾಗದೇ ಹುಡುಗರು ಒದ್ದಾಡ್ತಾ ಇರೋರನ್ನ ನೋಡ್ತಾ ಇದ್ದೀವಿ. ಬ್ಯುಸಿನೆಸ್ಗಾಗಿಯೇ ತಲೆ ಎತ್ತಿರೋ ನಕಲಿ ಮ್ಯಾಟ್ರಿಮೊನಿಗಳಿಂದ ಸ್ವಲ್ಪ ಅಲರ್ಟ್ ಆಗಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ